ಹೊಸದಿಲ್ಲಿ: ಮೇಕ್ ಇನ್ ಇಂಡಿಯಾಕ್ಕೆ ಇನ್ನಷ್ಟು ಉತ್ತೇಜನದ ಪರಿಣಾಮ ಗ್ರಾಹಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಯಲ್ಲಿ ಶೇ.18ರಷ್ಟು ಏರಿಕೆಯಾಗಿದೆ.
ಎಸಿ, ಟಿ.ವಿ., ರೆಫ್ರಿಜರೇಟರ್, ವಾಷಿಂಗ್‌ಮಷೀನ್‌ಗಳ ತಯಾರಿಕೆಯಲ್ಲಿ ಏರಿಕೆ ಕಂಡಿದೆ. ಮುಂದಿನ ಕೆಲವು ವರ್ಷಗಳಲ್ಲಿ ಇವುಗಳ ಉತ್ಪಾದನೆ ಪ್ರಮಾಣ ಎರಡಂಕಿ ದಾಟಲಿದೆ ಎಂದು ಊಹಿಸಲಾಗಿದೆ.
ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪಾದಕರ ಒಕ್ಕೂಟ ಈ ಅಂಕಿ ಅಂಶಗಳನ್ನು ಹೊರಹಾಕಿದೆ.
ಆ ಪ್ರಕಾರ, ಎಸಿ, ಆಟಿಯೋ, ರೆಫ್ರಿಜರೇಟರ್, ಟಿ.ವಿ. ವಾಷಿಂಗ್ ಮಷೀನ್‌ಗಳ 2018-19ರ ಮಧ್ಯೆ ಉತ್ಪಾದನೆ ಅಭಿವೃದ್ಧಿ ದರ ಶೇ.11.7ರಷ್ಟಿದೆ. ಇದರ ಒಟ್ಟು ಮೊತ್ತ 76400 ಕೋಟಿ ರೂ. ಇದ್ದು, 2024-25ರ ವೇಳೆಗೆ 1.48 ಲಕ್ಷ ಕೋಟಿ ರೂ. ತಲುಪುವ ಅಂದಾಜಿದೆ. ಇನ್ನು ದೇಶೀಯವಾಗಿ ಒಟ್ಟು ಗ್ರಾಹಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಅಭಿವೃದ್ಧಿ ಶೇ.17.8ರಷ್ಟಕ್ಕೇರುವ ನಿರೀಕ್ಷೆ ಇದೆ.
ಭಾರತದಲ್ಲಿ ಜಾಗತಿಕ ಬ್ರ್ಯಾಂಡ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ, ಶೇ.25ರಷ್ಟು ಯುವ ಸಮೂಹ ಹೆಚ್ಚೆಚ್ಚು ಖರೀದಿ ಮಾಡುತ್ತಿರುವುದು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಹೆಚ್ಚೆಚ್ಚು ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಮಾರಾಟವೂ ಏರಿಕೆಯಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.