Advertisement
ಅವರು ಶನಿವಾರ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಶ್ಯಾಮಿಲಿ ಸಭಾ ಭವನದದಲ್ಲಿ ಜರಗಿದ 2017- 18ನೇ ಸಾಲಿನ ವಿದ್ಯಾರ್ಥಿವೇತನ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಅಶಕ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದ ಉದ್ದಕ್ಕೂ ಮನೋರಂಜನೆ ನೀಡಿ, ಶುದ್ಧ ಕಲಾ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುವ ಯಕ್ಷಗಾನ ಕಲಾವಿದರು ಅಶಕ್ತರಾದಾಗ ಅವರನ್ನು ಸಮರ್ಪಕವಾಗಿ ಗುರುತಿಸು ವುದೂ ಇಲ್ಲ. ಇದರಿಂದ ಪ್ರೇರಿತವಾದ ನಮ್ಮ ಸಂಸ್ಥೆ ಅನೇಕ ವರ್ಷಗಳಿಂದ ಅಶಕ್ತ ಕಲಾವಿದರನ್ನು ಗುರುತಿಸಿ ಸಹಾಯ ಮಾಡುತ್ತಿದೆ. ಈ ಬಾರಿ ಅವರಿಗೆ ನೀಡುವ ನೆರವನ್ನು 10,000 ರೂ. ಬದಲು 25,000 ರೂಪಾಯಿಗೆ ಏರಿಸಲಾಗಿದೆ ಎಂದೂ ಡಾ| ಜಿ. ಶಂಕರ್ ಹೇಳಿದರು.
Related Articles
Advertisement
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಸಾಧನೆ ಮಾಡಿದ ಶ್ರೀವತ್ಸ ರಾವ್, ಮಂಜೇಶ್ ಎಸ್., ರಂಜಿತಾ, ಅದಿತಿ ಕಿರಣ್, ಉತ್ಪಲ್ ಶೆಣೈ, ಎಂ. ರಾಧಿಕಾ ಪೈ, ಶ್ಯಾಮಿಲಿ ಪ.ಪೂ. ಕಾಲೇಜಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಅಂಜನಾ ಹಾಗೂ ಅಮೃತ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಹಿರಿಯ ಯಕ್ಷಗಾನ ಕಲಾವಿದರಾದ ಕೊಪ್ಪಾಲೆ ಮುತ್ತ, ಜನ್ನಾಡಿ ಬಸವ ಬಳೆಗಾರ, ಕಪ್ಪಕೆರೆ ಮಹಾದೇವ ಹೆಗಡೆ, ನಾಗೇಶ್ ಭಂಡಾರಿ, ಸುಜನ ಸುಳ್ಯ, ಮುಡಿಪು ಕೃಷ್ಣ , ಬೇತ ಕುಂಞಿ ಕುಲಾಲ ಅವರನ್ನು ತಲಾ 25,000 ರೂ. ನೀಡಿ ಸಮ್ಮಾನಿಸಲಾಯಿತು. ಮಟಪಾಡಿ ನಾರಾಯಣ ನಾಯ್ಕ, ಯೋಗೀಶ್ ಕುಮಾರ್ ಹೆಬ್ಬೆ„ಲ್ ಹಾಗೂ ಸುಂದರ ರೈ ಬಜಪೆ ಅವರ ಪರವಾಗಿ ಸಂಬಂಧಿಕರು ಧನಸಹಾಯ ವನ್ನು ಸ್ವೀಕರಿಸಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಶಾಲಿನಿ ಶಂಕರ್, ಶ್ಯಾಮಿಲಿ ಶಂಕರ್, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರು ಉಪಸ್ಥಿತರಿದ್ದರು.
2,290 (ಉಡುಪಿ: 1,590, ಶಿವಮೊಗ್ಗ: 700) ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಸದಸ್ಯ ಆನಂದ ಎಸ್.ಕೆ. ಸ್ವಾಗತಿಸಿ, ಮೊಗವೀರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ವಂದಿಸಿದರು. ಯಕ್ಷಗಾನ ಕಲಾರಂಗದ ನಾರಾಯಣ ಹೆಗಡೆ ಕಲಾವಿದರ ಪಟ್ಟಿ ವಾಚಿಸಿದರು. ಕೆ.ಎಂ. ಶಿವರಾಮ ಕಾರ್ಯಕ್ರಮ ನಿರ್ವಹಿಸಿದರು.