Advertisement

ಹೊನಗುಂಟಾಕೆ ಸಮರ್ಪಕ ಬಸ್‌ ಕಲ್ಪಿಸಿ

12:10 PM Nov 15, 2021 | Team Udayavani |

ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯ ಒದಗಿಸಬೇಕೆಂದು ಎಐಡಿಎಸ್‌ಓ ಸಂಘಟನೆ ವತಿಯಿಂದ ಪ್ರತಿಭಟಿಸಿ, ಬಸ್‌ ನಿಲ್ದಾಣದ ನಿಯಂತ್ರಕರಿಗೆ ಮನವಿ ಸಲ್ಲಿಸಲಾಯಿತು.

Advertisement

ಹೊನಗುಂಟಾ ಗ್ರಾಮದಿಂದ ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹಾಗೂ ಜನರು ದಿನನಿತ್ಯದ ಕೆಲಸಕ್ಕಾಗಿ ನಗರಕ್ಕೆ ಬರುತ್ತಾರೆ. ಗ್ರಾಮದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಮುಗಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಹಾಬಾದ, ಜೇವರ್ಗಿ, ಚಿತ್ತಾಪುರ, ಕಲಬುರಗಿ ನಗರಕ್ಕೆ ತೆರಳುತ್ತಾರೆ. ಈ ವೇಳೆ ಬಸ್‌ ಪಾಸ್‌ ಇದ್ದರೂ ಸರಿಯಾದ ಸಮಯಕ್ಕೆ ಬಸ್‌ ಬಾರದೇ ಇರುವುದರಿಂದ ಪರದಾಡುವಂತೆ ಆಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಸಮಿತಿ ಸದಸ್ಯರಾದ ತುಳಜಾರಾಮ ಎನ್‌.ಕೆ, ನಗರಾಧ್ಯಕ್ಷ ಕಿರಣ ಜಿ. ಮಾನೆ, ಕಾರ್ಯದರ್ಶಿ ಅಜಯ ಎ.ಜಿ, ಉಪಾಧ್ಯಕ್ಷ ದೇವರಾಜ ಹೊನಗುಂಟ, ವಿದ್ಯಾರ್ಥಿಗಳಾದ ಸಿದ್ಧು ಕೆ., ಭಾಗ್ಯೇಶ, ಮೌನೇಶ, ರಾಕೇಶ, ಕೃಷ್ಣ, ಮಲ್ಲು, ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next