Advertisement
ಪ್ರಸ್ತುತ ಬೆಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದೆ. ನಿತ್ಯ ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಮನೆಗಳಲ್ಲಿ ಉತ್ಪತ್ತಿಯಾಗುವ ಬಹುತೇಕ ತ್ಯಾಜ್ಯವನ್ನು ಪಾಲಿಕೆ ಸಂಗ್ರಹಿಸುತ್ತದೆ. ಆದರೆ, ಸಾರ್ವಜನಿಕ ವಲಯಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಇಂದಿಗೂ ಚಿಂದಿ ಆಯುವವರನ್ನೇ ಅವಲಂಬಿಸಬೇಕಿದೆ.
Related Articles
Advertisement
ಇನ್ನು ಡಬ್ಬಿ ತುಂಬಿದ ಬಳಿಕ ಸ್ಥಳೀಯ ಸಂಸ್ಥೆಗಳಿಗೆ (ಬಿಬಿಎಂಪಿ) ಸಂದೇಶ ಹೋಗುತ್ತದೆ. ಅವರು ಬಂದು ಡಬ್ಬಿ ಬದಲಿಸಿ ಹೋಗಬಹುದು. ಸಂಗ್ರಹವಾದ ಕಸವನ್ನು ತ್ಯಾಜ್ಯ ಸಂಗ್ರಹ ಘಟಕಕ್ಕೆ ಅಥವಾ ಮರುಬಳಕೆದಾರರಿಗೆ ನೀಡಿ ಬರುವ ಹಣವನ್ನು ಮತ್ತೆ ವಿನಿಯೋಗಿಸಿ ಸುಲಭವಾಗಿ ಈ ತಂತ್ರಜ್ಞಾನ ನಿರ್ವಹಣೆ ಮಾಡಬಹುದು. ಇನ್ನು ಈ ಮಾದರಿಯ ಒಂದು ಕಸದ ಬುಟ್ಟಿ ಸಿದ್ಧಪಡಿಸಲು ಕನಿಷ್ಠ 5 ಸಾವಿರ ರೂ. ವೆಚ್ಚವಾಗಲಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ ಎನ್ನುತ್ತಾರೆ ಸಂಶೋಧಕ ವಿದ್ಯಾರ್ಥಿ ಮನು.
ಕಸ ಕೂಡ ಆದಾಯ ಮೂಲ. ಆದರೆ, ಈ ಅಂಶವನ್ನು ಸುಲಭಗೊಳಿಸಿದರೆ “ಸ್ವತ್ಛ ಭಾರತ’ ಕಲ್ಪನೆ ಸಾಕಾರಗೊಳಿಸಬಹುದು. ಈ ಆಲೋಚನೆಯಡಿ ಕಸ ಹಾಕಿ ಹಣ ಗಳಿಸುವ ತಂತ್ರಜ್ಞಾನ ರೂಪಿಸಿದ್ದೇವೆ. ಯೋಜನೆ ಸಾರ್ವಜನಿಕ ವಲಯಕ್ಕೆ ಬಂದರೆ ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ನಗರ ಪ್ರದೇಶದ ಸಾರ್ವಜನಿಕ ಸ್ಥಳಗಳ ಕಸದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.
ಯಾವುದಾದರೂ ಪ್ಲಾಸ್ಟಿಕ್ ಪುನರ್‌ಬಳಕೆ ಮಾಡುವ ಕಂಪನಿಗಳು ಅಥವಾ ಸ್ಥಳೀಯ ಸಂಸ್ಥೆಗಳು ಜತೆಗೆ ಗೂಡಿದರೆ ಈ ವ್ಯವಸ್ಥೆಯನ್ನು ಸುಲಭವಾಗಿ ಅಳವಡಿಸಿ ಯಶಸ್ಸು ಕಾಣಬಹುದು.-ನಿಹಾರಿಕಾ, ವಿದ್ಯಾರ್ಥಿನಿ * ಜಯಪ್ರಕಾಶ್ ಬಿರಾದಾರ್