Advertisement

ಶುದ್ದ ನೀರು ಸದ್ಬಳಕೆ ಮಾಡಿಕೊಳ್ಳಿ

06:47 PM Aug 17, 2022 | Team Udayavani |

ಗೊರೇಬಾಳ: ಇಂದಿನ ದಿನಗಳಲ್ಲಿ ಶುದ್ಧ ನೀರು ಸಿಗುವುದು ವಿರಳವಾಗಿದ್ದು, ಪ್ರತಿಯೊಬ್ಬರೂ ಶುದ್ಧ ಕುಡಿವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ಸಮೀಪದ ಗೊರೇಬಾಳ ಕ್ಯಾಂಪಿನಲ್ಲಿ ಜಲಜೀವನ್‌ ಮಿಷನ್‌ (ಜೆಜೆಎಂ) ಗ್ರಾಮೀಣ ಕುಡಿವ ನೀರಿನ ಕುರಿತು ಹಮ್ಮಿಕೊಂಡಿದ್ದ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಪ್ರತಿ ಹಳ್ಳಿಗೆ ಯೋಜನೆಯಡಿ ಶುದ್ಧ ಕುಡಿವ ನೀರು ಪಡೆಯಲು ಮೀಟರ್‌ ಅಳವಡಿಸಲಾಗಿದೆ. ನೀರು ಪೂರೈಸಲು ಈಗಾಗಲೇ ಕೆರೆ ನಿರ್ಮಾಣಗೊಂಡಿದ್ದು ಇನ್ನು ಪೈಪ್‌ಲೈನ್‌ ಕಾರ್ಯ ಮಾತ್ರ ಬಾಕಿ ಉಳಿಸಿದಿದೆ. ಹೊಸ ಪೈಪ್‌ಲೈನ್‌ ಕಾರ್ಯದ ನಂತರ ಪ್ರತಿ ಮನೆಗೆ ಶುದ್ಧ ನೀರು ಸಿಗಲಿದೆ. ಈ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ಕ್ಯಾಂಪಿನ ಜನರೆಲ್ಲ ಕಾಮಗಾರಿ ಕಳಪೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿ ಕಾರಿಗಳಿಗೆ ತಿಳಿಸಿದರು.

ವಾಗ್ವಾದ: ಈ ಹಿಂದೆ ಹಾಕಿದ ಪೈಪುಗಳು ಕಳಪೆ ಮಟ್ಟದ್ದಾಗಿದ್ದು ಕೆಳಭಾಗಕ್ಕೆ ಸರಿಯಾಗಿ ನೀರು ತಲುಪುತ್ತಿಲ್ಲ. ಯೋಜನೆಯಡಿ ಎಲ್ಲ ಹೊಸ ಪೈಪ್‌ಗ್ಳನ್ನು ಜೋಡಿಸುವಂತೆ ಗ್ರಾಮಸ್ಥರು ಶಾಸಕರ ಜೊತೆ ವಾಗ್ವಾದ ನಡೆಸಿದರು.

ನಂತರ ಸಮಾಧಾನಪಡಿಸಿದ ಶಾಸಕರು ಈಗಿರುವ ಪೈಪ್‌ಗ್ಳನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಬಾರದು. ಹೊಸ ಪೈಪಿನ ಮೂಲಕ ಗ್ರಾಮದ ಪ್ರತಿಯೊಬ್ಬರ ಮನೆಗೂ ನೀರು ಮುಟ್ಟುವಂತೆ ಕಾಮಗಾರಿ ಮಾಡಿಸುತ್ತೇವೆ ಎಂದರು.

Advertisement

ಬಸವರಾಜ, ಪಿಡಿಒ ಮುದುಕಪ್ಪ, ಕಾರ್ಯದರ್ಶಿ ಪಾಲಾಕ್ಷಿ ರೆಡ್ಡಿ, ಗ್ರಾಮದ ಮುಖಂಡರಾದ ವೆಂಕಟರಾವ್‌, ಶಿವನಗೌಡ ಗೊರೇಬಾಳ, ಹುಲುಗಪ್ಪ ಮಾಸ್ತರ್‌, ಇಂಗಳಗಿ ಶರಣಪ್ಪ, ಮಂಜುನಾಥ್‌ ಶೆಟ್ಟಿ, ಜಿ. ವೆಂಕಣ್ಣ, ಗ್ರಾಪಂ ಸದಸ್ಯರಾದ ಶ್ರೀನಿವಾಸ್‌ರಾಜ, ರಾಜು, ವಿಶ್ವನಾಥ್‌ ಹೂಗಾರ, ಪಿ. ವೆಂಕಟೇಶ್‌ರಾವ್‌, ಅನ್ನರಾವ್‌, ಕಾಮಾಡಿ ಲಕ್ಷ್ಮಣರಾವ್‌, ಕಾಮಾಡಿ ರಾಮರಾವ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next