Advertisement

ಕೃಷಿ ಇಲಾಖಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಕೆ.ಮಹದೇವ್

06:40 PM Jul 11, 2022 | Team Udayavani |

ಪಿರಿಯಾಪಟ್ಟಣ: ಕೃಷಿಯನ್ನು ಉತ್ತೇಜಿಸುವ ಹಾಗೂ ಲಾಭದಾಯಕವಾಗಿ ಮಾಡುವ ದೃಷ್ಟಿಯಿಂದ ಕೃಷಿ ಇಲಾಖೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

Advertisement

ಪಟ್ಟಣದ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ 2022-23 ಮಾಹಿತಿ ರಥಗಳಿಗೆ ಚಾಲನೆ ನೀಡಿ, ಮಾತನಾಡಿದರು.

ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮತ್ತು ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಕೃಷಿ ಇಲಾಖೆ ರೈತಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಈ ಕೃಷಿ ಅಭಿಯಾನದ ರಥವು ತಾಲ್ಲೂಕಿನ ಪ್ರತಿ ಹಳ್ಳಿಗೂ ಸಂಚರಿಸಿ ರೈತರಿಗೆ ಇಲಾಖೆಯ ಸಮಗ್ರ ಮಾಹಿತಿ ನೀಡಬೇಕು. ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಬೇಸಾಯ ಪದ್ಧತಿ, ಬಿತ್ತನೆ ಬೀಜ, ಸಸಿ ಮಡಿಗಳನ್ನು ಹದಗೊಳಿಸುವಿಕೆ, ಭೂಮಿಗೆ ನೀಡಬೇಕಾದ ಸಾರಜನಕ, ರಂಜಕ, ಕೊಟ್ಟಿಗೆ ಗೊಬ್ಬರ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎನ್ನುವುದು ರೈತರಿಗೆ ತಿಳಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್ ಮಾತನಾಡಿ ಕೃಷಿ ಅಭಿಯಾನದಡಿ ಸಂಚರಿಸುವ ರಥವು ಪ್ರತಿ ಹೋಬಳಿವಾರು ಹಾಗೂ ಪಂಚಾಯಿತಿಗಳಲ್ಲಿ ಸಂಚರಿಸಿ ಕೃಷಿ ಇಲಾಖಾ ವತಿಯಿಂದ ರೈತರಿಗೆ ಸಿಗುವ ಸವಲತ್ತು ಮತ್ತು ಸಮಗ್ರ ಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ. ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡುವ ದೃಷ್ಟಿಯಿಂದ ಮತ್ತು ಬೆಳೆ ವೈಜ್ಞಾನೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಕಸುಬು ಗಳಾದ ಪಶು ಸಂಗೋಪನೆ, ರೇಷ್ಮೆ, ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಮುಂತಾದ ಚಟುವಟಿಕೆ ಗಳ ಬಗ್ಗೆ ರಥ ಸಮಗ್ರ ಮಾಹಿತಿಯೊಂದಿಗೆ ಹೋಬಳಿ ಮಟ್ಟದಲ್ಲಿ ಈ ರಥ ಸಂಚಾರಿಸಲಿದೆ.

ರೈತರಿಗೆ ಆತ್ಮಸ್ಥೈರ್ಯ
ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮತ್ತು ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಕೃಷಿ ಇಲಾಖೆ ರೈತಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ರೈತರಿಗೆ ಮನವರಿಕೆ ಮಾಡುವ ಮೂಲಕ ರೈತರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹಾಗೂ ಕೃಷಿ ಇಲಾಖೆ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು ಉತ್ಪಾದನೆ- ಉತ್ಪಾದಕತೆ ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅವಶ್ಯವಿರುವ ತಂತ್ರಜ್ಞಾನ ಬಳಕೆ ಮೂಲಕ ಸಮಗ್ರ ಕೃಷಿ ಮಾಹಿತಿ ನೀಡಲಿದೆ. ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಬಗ್ಗೆ ಮನವರಿಕೆ, ಕೃಷಿ ವಸ್ತು ಪ್ರದರ್ಶನ ಹಾಗೂ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮಗಳು ಸಹ ನಡೆಯಲಿವೆ. ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಪಶುವೈದ್ಯಕೀಯ ವಿಶ್ವವಿದ್ಯಾಲ ಯದ ವಿಜ್ಞಾನಿಗಳು, ಕೆವಿಕೆ ವಿಜ್ಞಾನಿಗಳು, ಕೃಷಿ ಪರಿಕರ ಸರಬರಾಜು ದಾರರು, ಸಾವಯವ ಕೃಷಿ ಸಂಘಗಳು, ಸ್ವಸಹಾಯ ಗುಂಪು ಗಳು ಹಾಗೂ ಕೃಷಿ ಮತ್ತು ಇತರೆ ಇಲಾಖಾ ಅಧಿಕಾರಿಗಳು ತೋಟಗಾರಿಕೆ ಇಲಾಖೆ ಅಧಿಕಾಗಳು ಭಾಗವಹಿಸಿ ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ ಸಹಕಾರ ಹಾಗೂ ಕಂದಾಯ ಇಲಾಖೆ ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದರು.

Advertisement

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಮಹೇಶ್, ಪುರಸಭಾ ಅಧ್ಯಕ್ಷ ಕೆ ಮಹೇಶ್, ಮುಖಮಡರಾದ ಅಣ್ಣ ಶೆಟ್ಟಿ, ನಾಗೇಂದ್ರ, ಸಿ.ಎನ್.ರವಿ, ರಘುನಾಥ್, ರಂಗಸ್ವಾಮಿ, ಸ್ವಾಮಿಗೌಡ ಹಾಗೂ ರೈತ ಸಂಘದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next