Advertisement

ವಾರ್ಡ್‌ಗಳಲ್ಲೂ ಕಣ್ಣು ತಪಾಸಣೆ ಮಾಡಿ

02:58 PM Feb 15, 2017 | |

ಕಲಬುರಗಿ: ನಗರದ ಎಲ್ಲ ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯರು ವಾರ್ಡ್‌ ಹಿರಿಯ ನಾಗರಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಎಚ್ಚರಿಕೆ ವಹಿಸಿ ಕಣ್ಣು ತಪಾಸಣೆ ಶಿಬಿರ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಕರೆ ನೀಡಿದರು. 

Advertisement

ನಗರದ ರಿಂಗ್‌ ರಸ್ತೆಯಲ್ಲಿರುವ ಶಾದಾಬ್‌ ಫಂಕ್ಷನ್‌ ಹಾಲ್‌ನಲ್ಲಿ  ನೇತ್ರ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಎಲ್ಲ ಕ್ಷೇತ್ರಗಳಲ್ಲಿ ಜನರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ಉತ್ತಮ ಹೆಜ್ಜೆ ಇಡುತ್ತಿದೆ. ಅದರೊಂದಿಗೆ ಸಾರ್ವಜನಿಕರ ಸಹಭಾಗಿತ್ವ ದೊರೆತಲ್ಲಿ ಜನರಿಗೆ ಸಮಯಕ್ಕೆ ಸರಿಯಾಗಿ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ.

ಆರೋಗ್ಯ ಸೇವೆಯಲ್ಲಿ ಹಿರಿಯ ನಾಗರಿಕರು ಅತಿ ಹೆಚ್ಚು ಸಮಸ್ಯೆಗಳನ್ನು ಪದೇ ಪದೇ ಎದುರಿಸುತ್ತಿದ್ದಾರೆ. ಈ ಹಂತದಲ್ಲಿ ಸರಕಾರದ ಜತೆಯಲ್ಲಿ ಮಾಜಿ ಮೇಯರ್‌ ಇಕ್ಬಾಲ್‌ ಶಿರಿ°ಫೊÅàಷ್‌ ಹಾಗೂ ಮಹಮ್ಮದ್‌ ಸಮದ್‌ ಖಾನ್‌ ಕೂಡ ತಮ್ಮ ಸಂಸ್ಥೆಗಳ ಮೂಲಕ ಕಣ್ಣು ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ.

ಅದರಲ್ಲೂ 1500 ಜನರಿಗೆ ಇದರ ಪ್ರಯೋಜನ ದೊರೆತಿದೆ. ಇದೇ ರೀತಿಯಲ್ಲಿ ಅವರು ಪ್ರತಿ ವಾರ್ಡಿನಲ್ಲಿ ಕೆಲಸ ಮಾಡುವುದೇ ಆದಲ್ಲಿ, ಆರೋಗ್ಯ ಇಲಾಖೆ ಜಿಲ್ಲಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು. ಪ್ರತಿ ವಾರ್ಡ್‌ನಲ್ಲಿ ಜನರ ಆರೋಗ್ಯದ ಕುರಿತು ಪಾಲಿಕೆ ಸದಸ್ಯರು ಕೂಡ ಹೆಚ್ಚು ಆಸಕ್ತಿವಹಿಸಬೇಕು.

ಆನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಕೂಡ ಪ್ರತಿ ವಾರ್ಡ್‌ನಲ್ಲಿ ಇಂತಹ ಕೆಲಸ ಮಾಡಿ ಎಂದು ಹೇಳಿದರು. ಶಿಬಿರ ಸಂಯೋಜಕ ಮಾಜಿ ಮೇಯರ್‌ ಇಕ್ಬಾಲ್‌ ಶಿರಿ°ಫೊÅàಷ್‌ ಮಾತನಾಡಿ, ನಾವು ಒಟ್ಟು 1734 ಜನರ ನೋಂದಣಿ ಮಾಡಿಕೊಂಡಿದ್ದೇವೆ. ಸಮಯದ ಅಭಾವದಿಂದ ಕೇದಲ 1500 ಜನರಿಗೆ ತಪಾಸಣೆ ಮಾಡಲು ಸಾಧ್ಯವಾಯಿತು. ಇದರಲ್ಲಿ 125 ಜನರಿಗೆ ಶಸ್ತ್ರಚಿಕಿತ್ಸೆ ನೀಡಲಾಗುವುದು.  

Advertisement

1100 ಜನರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು. ಬೆಳಗ್ಗೆ 10:00ರಿಂದ ರಾತ್ರಿ 10:00ರ ವರೆಗೆ ಜನರನ್ನು ತಪಾಸಣೆ ಮಾಡಿದ ವೈದ್ಯರ ತಂಡಕ್ಕೆ ಅಭಿನಂದನೆ  ಸಲ್ಲಿಸುವುದಾಗಿ ಹೇಳಿದರು. ಮಾಜಿ ಸಂಸದ ಹಾಗೂ ಹಾಲಿ ಎಂಎಲ್‌ಸಿ ಇಕ್ಬಾಲ್‌ ಅಹಮದ್‌ ಸರಡಗಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅಜೀಜುಲ್ಲಾ ಸರಮಸ್ತ್, ಬಾಬಾ ನಜರ್‌ ಮಹಮದ್‌ಖಾನ್‌ ಶಾದಾಬ್‌ ಫಂಕಷನ್‌ ಹಾಲ್‌ನ ಮೋಹಿದುದ್ದೀನ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next