Advertisement

ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಲಿ

05:12 PM Dec 17, 2019 | Suhan S |

ದೇವನಹಳ್ಳಿ: ಪ್ರತಿಯೊಬ್ಬರಿಗೂ ಕಾನೂನು ಅರಿವು ಕಾರ್ಯಕ್ರಮ ತಲುಪಬೇಕು. ಕಾನೂನಿನಲ್ಲಿ ಜನರಿಗೆ ಹಲವಾರು ರೀತಿಯ ಸೌಲಭ್ಯಗಳು ಇವೆ. ಅವುಗಳನ್ನು ತಿಳಿದು ಕೊಳ್ಳಬೇಕು. ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ಹೋಗಿ ಕಾನೂನಿನ ಅರಿವು ಮೂಡಿಸಬೇಕು ಎಂದು ಎಂದು 5 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಹರೀಶ್‌ ತಿಳಿಸಿದರು.

Advertisement

ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ, ತಾಲೂಕು ಆಡಳಿತ ವರ್ಗ ಮತ್ತು ಪೊಲೀಸ್‌ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಜನರಿಗೆ ಕಾನೂನಿನಲ್ಲಿರುವ ಸೌಲಭ್ಯಗಳ ಮಾಹಿತಿ ಕೊರತೆ ಇದೆ. ಅದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಕಾನೂನಿನ ಬಗ್ಗೆ ತಿಳಿವಳಿಕೆ ಜಾಗೃತಿ ಅತ್ಯವಶ್ಯಕವಾಗಿದೆ ಎಂದರು.

ಉಚಿತ ಕಾನೂನು ನೆರವು:ಆರ್ಥಿಕ ತೊಂದರೆ ಇದ್ದವರಿಗೆ ಉಚಿತವಾಗಿ ಕಾನೂನು ನೆರುವು ನೀಡಲಾಗುತ್ತದೆ. ಕಾನೂನು ಪಂಡಿತರು ನೀಡುವ ಉಚಿತ ಉಪನ್ಯಾಸವನ್ನು ಫ‌ಲಾಭವಿಗಳು ಸದುಪಯೋಗಪಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು. ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ದಿಲೀಪ್‌ ಕುಮಾರ್‌ ಮಾತನಾಡಿ, ಸಾಕ್ಷರತಾ ರಥವು ನಾಲ್ಕು ದಿನಗಳ ಕಾಲ ತಾಲೂಕಿನ ವಿವಿಧೆಡೆ ಸಂಚರಿಸಲಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದ ಜನರಿಗೆ ಯಾವ ರೀತಿಯ ಕಾನೂನುಗಳು ಇವೆ ಎಂಬುವುದನ್ನು ಅರಿಯಲು ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆಗಳ ಮಾಹಿತಿ ಕೈಪಿಡಿ ನೀಡಲಾಗಿದೆ. ಕಾನೂನು ನೆರವು ಮತ್ತು ಹಕ್ಕನ್ನು ಪ್ರತಿಪಾದಿಸಲು ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಅಫ‌ಘಾತ ಪ್ರಕರಣಗಳು, ಮಹಿಳೆ ಮತ್ತು ಮಕ್ಕಳ ಮೇಲೆ ಶೋಷಣೆ , ಜೀತ ಪದ್ದತಿ, ಗರ್ಭಪಾತ ಭ್ರೂಣ ಹತ್ಯೆ , ಲೈಂಗಿಕ ದೌರ್ಜನ್ಯ, ರಸ್ತೆ ಸುರಕ್ಷತೆ, ಮೊದಲಾದ ಹಲವಾರು ಪ್ರಕರಣಗಳು, ಜಾಗೃತಿ ಕಾನೂನು ಅಡಿಯಲ್ಲಿ ಇರುವ ಶಿಕ್ಷೆ ,ಪರಿಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

Advertisement

ಈ ವೇಳೆ ಅಪರ ಸಿವಿಲ್‌ ನ್ಯಾಯಾಧೀಶೆ ಯೋಗೇಶ್ವರಿ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ, ಉಪಾಧ್ಯಕ್ಷ ಜಯ ರಾಮಪ್ಪ, ಕಾರ್ಯದರ್ಶಿ ಎಚ್‌ ಸಿ ಆನಂದ್‌, ಖಜಾಂಚಿ ಆನಂದ್‌, ದೇವನಹಳ್ಳಿ ಪೋಲೀಸ್‌ ಇನ್ಸ್‌ ಪೆಕ್ಟರ್‌ ಸಿದ್ದರಾಜು, ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next