Advertisement

ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಿ

12:55 PM Jun 23, 2017 | Team Udayavani |

ಪಿರಿಯಾಪಟ್ಟಣ: ಎಲ್ಲರೂ ಆರೋಗ್ಯವಂತರಾಗಿ ನೆಮ್ಮದಿಯ ಬದುಕು ಕಾಣಲು ಮನೆಯ ಸುತ್ತಮುತ್ತಲ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಪಂಚವಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೀರಭದ್ರಶೆಟ್ಟಿ ಹೇಳಿದರು.

Advertisement

ತಾಲೂಕಿನ ಪಂಚವಳ್ಳಿ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಗ್ರಾಪಂ ಮತ್ತು ನವ್ಯದಿಶ ಗ್ರಾಮೀಣ ಕೂಟ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಬೀದಿ ನಾಟಕಗಳ ಮೂಲಕ ನೀರು ಮತ್ತು ನೈರ್ಮಲ್ಯ ಜಾಗೃತಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶೌಚಾಲಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಸೇವಿಸುತ್ತಿರುವ ಆಹಾರ ಮತ್ತು ಕುಡಿಯುವ ನೀರು ಶುದ್ಧವಾಗಿದ್ದರೆ, ಆರೋಗ್ಯವು ಉತ್ತಮವಾಗಿರುತ್ತದೆ. ಸ್ವತ್ಛ ಸಮಾಜಕ್ಕಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರತಿ ಮನೆಯಲ್ಲಿ ನೀರು ನೈರ್ಮಲ್ಯ ಮತ್ತು ಶೌಚಾಲಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಹಳ್ಳಿಗಳಲ್ಲೂ ಬೀದಿ ನಾಟಕಗಳ ಮೂಲಕ ಶೌಚಾಲಯದ ಮಹತ್ವ ಕುರಿತು ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಪಂಚವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 9 ಹಳ್ಳಿಗಳು, 3477 ಕುಟುಂಬಗಳಿದ್ದು, ಇದರಲ್ಲಿ 3022 ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಲಾಗಿ ಕೇವಲ 455 ಕುಟುಂಬಗಳು ಮಾತ್ರ ಶೌಚಾಯಲ ನಿರ್ಮಿಸಿಲ್ಲ, ಇದರಲ್ಲಿ 1562 ಕುಟುಂಬಗಳು ನಲ್ಲಿ ಸಂಪರ್ಕ ಪಡೆದುಕೊಂಡಿವೆ, 3 ಸಮುದಾಯ ಭವನಗಳಿದ್ದು, 2 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಂದಿವೆ. ಕಳೆದ 2016-17ನೇ ಸಾಲಿನಲ್ಲಿ 500 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಮುಂದಿನ 2017 ಅಕ್ಟೋಬರ್‌ 2ರೊಳಗೆ ಪಂಚಾಯಿತಿಯನ್ನು ಬಯಲು ಮುಕ್ತ ಶೌಚ ಪಂಚಾಯಿತಿಯನ್ನಾಗಿ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಶೌಚಾಲಯದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು. ನವ್ಯದೀಶಾ ಗ್ರಾಮೀಣ ಕೂಟದ ಸಂಯೋಜಕ ರೋಹನ್‌ ಮಲ್ಲಿಕ್‌, ಡಿ.ಒ ಚಿದಾನಂದ, ಗ್ರಾಪಂ ಅಧ್ಯಕ್ಷೆ ಕವಿತಾಲೋಕೇಶ್‌, ಸದಸ್ಯರಾದ ಹೆಚ್‌.ಪಿ.ಮಹದೇವ್‌, ವಿಜಯಕುಮಾರಿ, ವಸಂತ, ರುಕ್ಮಿಣಿ, ಗ್ರಾಪಂ ಲೆಕ್ಕ ಸಹಾಯಕಿ ಹರಿಣಿ, ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜು, ನವ್ಯದೀಶಾ ಗ್ರಾಮೀಣ ಕೂಟದ ಸದಸ್ಯರು, ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next