Advertisement
ಶುಕ್ರವಾರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿನ ಕೃಷಿ ಕೇಂದ್ರದ ಸಭಾಭವನದಲ್ಲಿ ಜಿಪಂ, ಕೃಷಿ ಇಲಾಖೆ ಸಿಂದಗಿ ಹಾಗೂ ಕೃಷಿಕ ಸಮಾಜ ಸಿಂದಗಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಅಧ್ಯಯನ ಮಾಡಿದ ರೈತರ ಭಾಗಪ್ಪಗೌಡ ಪಾಟೀಲ ಮಾತನಾಡಿ, ರೈತರಿಗೆ ಅಧ್ಯಯನ ಅತ್ಯವಶ್ಯಕ. ತಾಲೂಕು ಕೃಷಿಕ ಸಮಾಜದ ವತಿಯಿಂದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಕಾರ್ಯದರ್ಶಿ ಸಹಾಯಕ ಕೃಷಿ ನಿರ್ದೇಶಕ ಡಾ| ಎಚ್.ವೈ. ಸಿಂಗೆಗೊಳ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ರೈತರಿಗೆ ಮಹಾರಾಷ್ಟರದಲ್ಲಿನ ಆಧುನಿಕ ಕೃಷಿಪದ್ಧತಿ ಅಧ್ಯಯನ ಮಾಡಲು ಕೈಗೊಂಡಿದ್ದ ಪ್ರವಾಸ ಅತ್ಯಂತ ಮಹತ್ವದ್ದಾಗಿತ್ತು. ನಾವೆಲ್ಲರೂ ಅಧ್ಯಯನ ಮಾಡಿಕೊಂಡು ಬಂದು ನಮ್ಮ ಸುತ್ತಮುತ್ತಲಿನ ರೈತರಿಗೆ ಅರಿವು ಮೂಡಿಸಿದ್ದೇವೆ ಎಂದರು. ಕಲಕೇರಿಯ ಸಂಗಾರೆಡ್ಡಿ ದೇಸಾಯಿ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ತಾಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ಸಹಾಯಕ ಕೃಷಿ ನಿರ್ದೇಶಕ ಡಾ| ಎಚ್.ವೈ. ಸಿಂಗೆಗೊಳ ಅವರು ಮಾತನಾಡಿದರು. ರೈತರಾದ ನಿಂಗನಗೌಡ ಪಾಟೀಲ, ಸಿದ್ರಾಮಪ್ಪ ಚಿಂಚೊಳ್ಳಿ, ಜಿ.ಸಿ. ಮಾರ್ಸನಳ್ಳಿ, ಗುರುಪಾದ ನೆಲ್ಲಗಿ, ರಾಜು ಸಾತಿಹಾಳ, ಮಹಾಂತೇಶ ಉಪ್ಪಿನ, ಪರಶುರಾಮ ಹೂನಳ್ಳಿ, ಶಾಂತಗೌಡ ಬಿರಾದಾರ, ಮಹೆಬೂಬ ರಂಜಣಗಿ, ಬಸಣ್ಣ ಕಡಗಂಚಿ, ಎ.ಎಂ.ಬಿರಾದಾರ, ಶ್ರೀನಿವಾಸ ಓಲೇಕಾರ, ಕೃಷಿ ಅಧಿಕಾರಿಗಳಾದ ಸಿ.ಎಸ್.ವಾಲೀಕಾರ, ಆರ್.ಬಿ. ಸೀತಿಮನಿ, ಜಿ.ಎಸ್.ರಾಠೊಡ, ಡಿ.ಎಸ್.ಅವಜಿ, ಎಲ್.ಆರ್.ರಾಠೊಡ, ಎಸ್.ಸಿ.ಚೌದ್ರಿ, ಎ.ಆರ್. ನಾಯಕ, ಎಸ್.ಕೆ.ಮಸಳಿ, ಸುಧಾಕರ ಇಸೂರ, ಅನಿಲ ಬರಡೋಲ ರೈತರು ಭಾಗವಹಿಸಿದ್ದರು.