Advertisement

ಡಿಜಿಟಲ್‌ ಸುರಕ್ಷೆಗೆ ಆದ್ಯತೆ ಕೊಡಿ: ಮುಖ್ಯಮಂತ್ರಿ

11:41 PM Dec 11, 2021 | Team Udayavani |

ಬೆಂಗಳೂರು: ನಮ್ಮ ಸುರಕ್ಷೆಯನ್ನು ಹೇಗೆ ಮಾಡಿಕೊಳ್ಳುತ್ತೇವೋ, ಅದೇ ರೀತಿ ನಮಗೆ ಸಂಬಂಧಿಸಿದ ಡಿಜಿಟಲ್‌ ದಾಖಲೆಗಳನ್ನೂ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಶನಿವಾರ ಆಯೋಜಿಸಿದ್ದ ಸೈಬರ್‌ ಸುರಕ್ಷಿತ ಕರ್ನಾಟಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೈಬರ್‌ ಕ್ರೈಂಗೂ ಫಿಸಿಕಲ್‌ ಕ್ರೈಂಗೂ ವ್ಯತ್ಯಾಸವಿದೆ. ಸರಕಾರದ ಇಲಾಖೆಗಳಲ್ಲೂ  ಸೈಬರ್‌ ಕ್ರೈಂಗಳಾಗಿರುವ ಉದಾಹರಣೆಗಳು ಇವೆ.  ಬಹಳಷ್ಟು ಜನರು ಮೊಬೈಲ್‌ ಹಾಗೂ ಇತರ ಡಿಜಿಟಲ್‌ ಉಪಕರಣಗಳನ್ನು ಬಳಸುತ್ತಾರೆ. ಆದರೆ, ಅನೇಕರಿಗೆ ಸೈಬರ್‌ ಸುರಕ್ಷೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.

ಬೆಂಗಳೂರಿನ ಎಫ್ಎಸ್‌ಎಲ್‌ ಕೇಂದ್ರ ಹೊಸ ತಂತ್ರಜ್ಞಾನ ಹೊಂದಿದ್ದು,ಸೈಬರ್‌ ಪ್ರಕರಣಗಳನ್ನು ಪತ್ತೆ ಹಚ್ಚಲು ನಮ್ಮ ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ. ಯುವಕರ ಸುರಕ್ಷೆಗೆ ಸರಕಾರ ಸಾಕಷ್ಟು ಕ್ರಮ ತೆಗೆದು ಕೊಂಡಿದೆ. ಡ್ರಗ್ಸ್‌ಗೆ ಕಡಿವಾಣ ಹಾಕು ತ್ತಿದ್ದೇವೆ. ಸೈಬರ್‌ ಮೂಲಕವೇ ನಡೆ ಯವ ಡಾರ್ಕ್‌ವೆಬ್‌ಗೂ ಕಡಿವಾಣ ಹಾಕುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕವಾಗಿದೆ ಹೇಳಿದರು.

ಇದನ್ನೂ ಓದಿ:ಪಂಚ ನದಿ ಯೋಜನೆಗೆ ಮೋದಿ ಚಾಲನೆ; 45 ವರ್ಷಗಳ ಬಳಿಕ ಪಶ್ಚಿಮ ಉ.ಪ್ರ.ದ ಪ್ರಮುಖ ಯೋಜನೆಗೆ ಚಾಲನೆ

Advertisement

ಕ್ರೀಡಾ ಸಚಿವ ಡಾ| ನಾರಾಯಣ ಗೌಡ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ. ದೇಶದಲ್ಲೇ ಪ್ರಥಮವಾಗಿ ಅಭಿಯಾನ ನಡೆಸುತ್ತಿರುವುದಕ್ಕೆ ಸಂತಸವಾಗಿದೆ. ಸೈಬರ್‌ ಕ್ರೈಂ ತಡೆಗಟ್ಟುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಪೀಳಿಗೆಗೆ ತರಬೇತಿ ನೀಡಲು ಸೈಬರ್‌ ಸುರಕ್ಷಿತ ಕರ್ನಾಟಕ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಎನ್‌ಎನ್‌ಎಸ್‌ ಸ್ವಯಂ ಸೇವಕ ರಿಗೆ ತರಬೇತಿ ನೀಡಿ ಅವರ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೈಬರ್‌ ಅಪ ರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಯಲ್ಲೂ ತರಬೇತಿ  ನೀಡಿ, ಪ್ರಮಾಣಪತ್ರ  ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಪೊಲೀಸ್‌ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲೂ ಸೈಬರ್‌ ಸುರಕ್ಷೆ ಸಂಬಂಧ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಸೈಬರ್‌ ಸುರಕ್ಷಿತ ಅಭಿಯಾನದ ರಾಯಭಾರಿ ನಟ ರಮೇಶ್‌ ಅರವಿಂದ್‌ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಗೆಲ್ಲುತ್ತೇವೆಂದು ಆಡಬೇಕು: ಬೊಮ್ಮಾಯಿ
ಬೆಂಗಳೂರು: ಆಟದಲ್ಲಿ ಸೋಲು – ಗೆಲುವು ಇದ್ದೇ ಇರುತ್ತದೆ. ಆದರೆ, ಆಡುವಾಗ ಗೆಲ್ಲುತ್ತೇವೆ ಎಂದೇ ಆಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಮುಕ್ತಾಯವಾದ 70ನೇ ಅಖೀಲ ಭಾರತ ಪೊಲೀಸ್‌ ಚಾಂಪಿಯನ್‌ ಶಿಪ್‌ನಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು. ಯಾವುದೇ  ಆಟಗಾರರು ಸೋಲಬೇಕೆಂದು ಆಡಬಾರದು. ಸೋಲಿಗೆ ಹೆದರಲೂಬಾರದು. ಯಾರು ಸೋಲಲು ಹೆದರುವುದಿಲ್ಲವೋ ಅವರೇ ಗೆಲ್ಲುತ್ತಾರೆ. ಆಟದಿಂದ ಶಿಸ್ತು ಬೆಳೆಯುತ್ತದೆ. ವ್ಯಕ್ತಿತ್ವ ವಿಕಸನವಾಗುತ್ತದೆ ಮತ್ತು ಕ್ರೀಡಾ ಮನೋಭಾವ ಬೆಳೆಯುತ್ತದೆ. ಉತ್ತಮ ಜೀವನ ಶೈಲಿಗೂ ಅನ್ವಯವಾಗುತ್ತದೆ ಎಂದ ಅವರು, ಸೋತವರು ಮುಂದಿನ ಬಾರಿ ಗೆಲ್ಲಲು ಪ್ರಯತ್ನ ಮಾಡಬೇಕೆಂದು ಕಿವಿ ಮಾತು ಹೇಳಿದರು.  ಚಾಂಪಿಯನ್‌ ಶಿಪ್‌ನಲ್ಲಿ  ವಿಜೇತರಾದ ಪಂಜಾಬ್‌ ಪೊಲೀಸ್‌ ಹಾಕಿ ತಂಡ ಹಾಗೂ ಭಾಗವಹಿಸಿದ ವಿವಿಧ ರಾಜ್ಯಗಳ ಹಾಕಿ ಪಟುಗಳಿಗೆ ಅಭಿನಂದಿಸಿದರು.  ಈ ವೇಳೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ, ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next