Advertisement

ಶಾಲಾ ಅವಧಿಗೆ ಬಸ್‌ ವ್ಯವಸ್ಥೆ ಕಲ್ಪಿಸಿ

09:23 AM Jul 02, 2019 | Team Udayavani |

ಕುಷ್ಟಗಿ: ಶಾಲಾ ಅವಧಿ ಬಸ್‌ ಸೇವೆ ಕಲ್ಪಿಸಬೇಕೆಂದು ಒತ್ತಾಯಿಸಿ ತಾಲೂಕಿನ ನೀರಲೂಟಿ ಗ್ರಾಮದ ವಿದ್ಯಾರ್ಥಿಗಳು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಸಂತೋಷಕುಮಾರ ಅವರಿಗೆ ಮನವಿ ಸಲ್ಲಿಸಿದರು.

Advertisement

ಹಿರೇಮನ್ನಾಪೂರ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ಬೆಳಗ್ಗೆ 9:30ಕ್ಕೆ ಆರಂಭಗೊಂಡು ಸಂಜೆ 5 ಗಂಟೆಯವರೆಗೆ ನಡೆಯುತ್ತದೆ. ಈ ಅವಧಿಗೆ ಬಸ್‌ ಸೇವೆ ಕಲ್ಪಿಸಬೇಕು. ಆದರೆ ಈಗಿನ ವ್ಯವಸ್ಥೆಯಲ್ಲಿ ಹುಲಿಯಾಪೂರದಿಂದ ಬೆಳಗಿನ ಜಾವ 6:45ಕ್ಕೆ ನಿರ್ಗಮಿಸುತ್ತಿದ್ದು, ನೀರಲೂಟಿ ಗ್ರಾಮಕ್ಕೆ 7 ಗಂಟೆಗೆ, ಹಿರೇಮನ್ನಾಪೂರಕ್ಕೆ 7:30ಕ್ಕೆ ತಲುಪಿ 8:30ರ ವೇಳೆ ಕುಷ್ಟಗಿ ತಲುಪುವ ವ್ಯವಸ್ಥೆ ಇದೆ. ಆದರೆ ಈ ವ್ಯವಸ್ಥೆಯಿಂದ ನೀರಲೂಟಿಯ ಪ್ರೌಢಶಾಲಾ ವಿದ್ಯಾರ್ಥಿಗಳು, 9:30ಕ್ಕೆ ಶುರುವಾಗುವ ಶಾಲೆಗೆ ಎರಡೂವರೆ ತಾಸು ಮುಂಚಿತವಾಗಿ ಆಗಮಿಸಬೇಕಿದ್ದು, ಸಂಜೆ ತಡವಾಗಿ ಮನೆ ಸೇರುವಂತಾಗಿದೆ. ಹೀಗಾಗಿ ಶಾಲೆಯ ವೇಳೆಗೆ ಸರಿಹೊಂದುವಂತೆ ಬಸ್‌ ಸೇವೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ಗ್ರಾಮಸ್ಥರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಸಂತೋಷಕುಮಾರ ಮಾತನಾಡಿ, ಶಾಲೆಗಳು ಏಕಕಾಲಕ್ಕೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಅವಧಿ ಬಸ್‌ ಬೇಕೆನ್ನುವ ಬೇಡಿಕೆ ತಪ್ಪಲ್ಲ. ಪ್ರತಿ ಗ್ರಾಮಕ್ಕೂ ಬಸ್‌ ವ್ಯವಸ್ಥೆ ಮಾಡಬೇಕಾಗುತ್ತದೆ. ಆ ವ್ಯವಸ್ಥೆ ಅಸಾಧ್ಯ. ಬಸ್‌ ಸಂಚರಿಸುವ ಗ್ರಾಮಗಳ ಗ್ರಾಮಸ್ಥರೊಂದಿಗೆ ಚರ್ಚಿಸಿ ಸೂಕ್ತ ಸಮಯಕ್ಕೆ ಅರ್ಧ ಗಂಟೆ ಹೆಚ್ಚು ಕಡಿಮೆಯಾದರೂ ಹೊಂದಾಣಿಕೆಗೆ ಸಹಮತವಿದ್ದರೆ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದರು. ದುರಗಪ್ಪ ಹರಿಜನ, ಶಿವಪುತ್ರಯ್ಯ ಹಿರೇಮಠ, ಹನಮಂತಪ್ಪ ನಿಡಗುಂದಿ, ಯಮನೂರಗೌಡ ಪೊಲೀಸಪಾಟೀಲ, ಹನಮಂತಪ್ಪ ದಾಸರ, ಸಂಗಪ್ಪ ಅಂಗಡಿ, ಬಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next