Advertisement

ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಿ; ಸಚಿವ ಕಾರಜೋಳ

05:45 PM Jun 25, 2022 | Team Udayavani |

ಲೋಕಾಪುರ: ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿವಿಧ ಯೋಜನೆಯಡಿ ನೀಡುವ ಅನುದಾನವನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಪಟ್ಟಣದಲ್ಲಿ ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 2 ಕೋಟಿ 39 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 24 ವಾಣಿಜ್ಯ ಸಂಕಿರ್ಣಗಳ ಬೃಹತ್‌ ಕಟ್ಟಡ ಉದ್ಘಾಟನೆ, 2 ಕೋಟಿ ರೂ.ಗಳಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯಭವನ ಭೂಮಿಪೂಜೆ, ಲೋಕಾಪುರ -ಹಲಕಿ ಗ್ರಾಮದವರೆಗಿನ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವ 33 ಕೋಟಿ ರೂ. ವೆಚ್ಚ ಕಾಮಗಾರಿಗೆ ಭೂಮಿಪೂಜೆ, 6 ಕೋಟಿ ವೆಚ್ಚದಲ್ಲಿ ಲೋಕಾಪುರ- ರಾಮದುರ್ಗ ರಸ್ತೆಯಲ್ಲಿರುವ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಪಟ್ಟಣ ಪಂಚಾಯಿತಿ ವತಿಯಿಂದ 15ನೇ ಹಣಕಾಸಿನ ಯೋಜನೆಯಡಿ 2.70 ಕೋಟಿ ಹಾಗೂ 2022-23 ನೇ ಸಾಲಿನ ಅಮೃತ ನಗರೋತ್ಥನ ಹಂತ 4 ರ ಅನುದಾನ 5 ಕೋಟಿ, ಎಸ್‌ಎಫ್‌ಸಿ ಅನುದಾನ 57 ಲಕ್ಷ ರೂ.ಗಳು ಒಟ್ಟು 8 ಕೋಟಿ 16 ಲಕ್ಷ ರೂ.ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.

ಮುಖಂಡರಾದ ಲೋಕಣ್ಣ ಕತ್ತಿ, ಭೀಮಪ್ಪ ಹಲಕಿ, ಎಂ.ಎಂ.ವಿರಕ್ತಮಠ, ಶಿವನಗೌಡ ಪಾಟೀಲ, ವೀರೇಶ ಪಂಚಕಟ್ಟಿಮಠ, ಪ್ರಕಾಶ ಚುಳಕಿ, ಯಮನಪ್ಪ ಹೊರಟ್ಟಿ, ಬಿ.ಎಲ್‌.ಬಬಲಾದಿ, ವ್ಹಿ.ಎಂ.ತೆಗ್ಗಿ, ಪರಮಾನಂದ ಟೋಪಣ್ಣವರ, ಮಾರುತಿ ರಂಗಣ್ಣವರ, ವಿನೋದ ಘೋರ್ಪಡೆ, ಸಿ.ಎ.ಪಾಟೀಲ, ಸಿದ್ರಾಮಪ್ಪ ದೇಸಾಯಿ, ಬೀರಪ್ಪ ಮಾಯಣ್ಣವರ, ವಸಂತಗೌಡ ಪಾಟೀಲ, ಹಣಮಂತ ಕುಡಚಿ, ಕಾಶಲಿಂಗ ಮಾಳಿ, ಅಧಿಕಾರಿಗಳಾದ ತಹಶೀಲ್ದಾರ್‌ ವಿನೋದ ಹತ್ತಳ್ಳಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರ ಎಸ್‌.ಎಸ್‌.ಸಾವನ, ಇಂಜನಿಯರ್‌ ಗಳಾದ ಅಶೋಕ ಕ್ಯಾದಗೇರಿ, ವಿನೋದ ಸಂಕೆಣ್ಣವರ, ಪಪಂ ಮುಖ್ಯಾ ಧಿಕಾರಿ ಮಾರುತಿ ನಡುವಿನಕೇರಿ, ಸಮಾಜ ಕಲ್ಯಾಣಾಧಿಕಾರಿ ಮೋಹನ ಕೊರಡ್ಡಿ, ಉಪತಹಶೀಲ್ದಾರ್‌ ಎಂ.ಬಿ.ಪಾಂಡವ, ಸಿಪಿಐ ಅಯ್ಯನಗೌಡ ಪಾಟೀಲ, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next