Advertisement
ಝೂಮ್ ಯಾಕೆ ಬೇಕು?ವಾಸ್ತವವಾಗಿ ಚೀನಾ ಮೂಲದ ಎರಿಕ್ ಯುವಾನ್ 1997ರಲ್ಲಿಯೇ ಅಮೆರಿಕಕ್ಕೆ ಹೋದರು. ಅಲ್ಲಿಯೇ 2011ರಲ್ಲಿ ಝೂಮ್ ಕಮ್ಯುನಿಕೇಷನ್ಸ್ ಆರಂಭಿಸಿದರು. 2013ರಲ್ಲಿ ವಿಡಿಯೊ ಸಂವಾದ ಆ್ಯಪ್ ಬಿಡುಗಡೆ ಮಾಡಿದರು. ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದವರೇ ಜಾಸ್ತಿ. ನಂತರ ಅಸಾಮಾನ್ಯ ವೇಗದಲ್ಲಿ ಬೆಳೆದ ಇದು, ಈಗ ದಿನವೊಂದಕ್ಕೆ 30 ಕೋಟಿ ಬಳಕೆದಾರರನ್ನು ಹೊಂದಿದೆ. ಕೊರೊನಾ ಬಂದ ಮೇಲೆ ಸಭೆಗಳನ್ನು ಆನ್‌ಲೈನ್‌ನಲ್ಲೇ ನಡೆಸಬೇಕಾಗಿರುವುದರಿಂದ ಝೂಮ್‌ಗೆ ಇನ್ನಷ್ಟು ಜನಪ್ರಿಯತೆ ಬಂದಿದೆ. ಈ ಆ್ಯಪ್ ಬಳಸಿ 40 ನಿಮಿಷ, 100 ಜನರೊಂದಿಗೆ ಉಚಿತವಾಗಿ ಸಭೆ ನಡೆಸಬಹುದು.
ಝೂಮ್ ಒಂದೇ ಬಾರಿಗೆ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದನ್ನು ನೋಡಿ ಜಗತ್ತಿನ ಇತರೆ ಸಾಫ್ಟ್ವೇರ್ ದೈತ್ಯರಾದ ಗೂಗಲ್, ಫೇಸ್‌ಬುಕ್‌ಗಳು ಬೆಚ್ಚಿಬಿದ್ದಿವೆ. ಈ ಪೈಕಿ ಗೂಗಲ್ ತನ್ನ ಮೀಟ್ ಆ್ಯಪನ್ನು ಉಚಿತವಾಗಿಸಿದೆ. ಅದಕ್ಕೂ ಮುನ್ನ ಮೀಟ್ ಅನ್ನು ಹಣ ಕೊಟ್ಟು ಬಳಸಬೇಕಾಗಿತ್ತು. ಇದೇ ದಾರಿಯಲ್ಲಿ ಫೇಸ್‌ಬುಕ್ ಕೂಡ ಹೊರಟಿದೆ. ಭಾರತದ್ದೇ ಆ್ಯಪ್ ಸೃಷ್ಟಿಸಲು ಕೇಂದ್ರ ಕರೆ
ಝೂಮ್‌ಗೆ ವಿಪರೀತ ಬೇಡಿಕೆ ಬಂದಿದ್ದರೂ, ಅದರಲ್ಲಿ ಭದ್ರತಾಲೋಪವಿದೆ. ಜನರ ಖಾಸಗಿ ಮಾಹಿತಿಗಳು ಬಯಲಾಗುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಭಾರತದಲ್ಲೇ ಝೂಮ್ ಮಾದರಿಯ ಆ್ಯಪ್ ಸೃಷ್ಟಿಸಲು ಕರೆ ನೀಡಿದೆ. ಪರಿಣಾಮ 10 ಕಂಪನಿಗಳ ಅಂತಿಮ ಪಟ್ಟಿ ತಯಾರಿಸಲಾಗಿದೆ. ಎಚ್‌ಸಿಎಲ್ ಟೆಕ್ನಾಲಜೀಸ್, ಜೊಹೊ ಕಾರ್ಪ್, ಪೀಪಲ್‌ಲಿಂಕ್, ಅರಿಯಾ ಟೆಲಿಕಾಮ್, ಸೈಬರ್‌ಹಾರಿಜನ್ ಕಾರ್ಪ್, ಇನ್‌ಸ್ಟ್ರೈವ್ ಸಾಫ್ಟ್ಲ್ಯಾಬ್ಸ್, ಡಾಟಾ ಎಂಜಿನಿಯರ್ಸ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ಕಂಪನಿಗಳು.
Related Articles
ಮೊದಲ ಸುತ್ತಲ್ಲೇ ಆಯ್ಕೆಯಾದ ಎಲ್ಲ ಕಂಪನಿಗಳಿಗೂ ತಲಾ 5 ಲಕ್ಷ ರೂ. ನೀಡಲಾಗುತ್ತದೆ. ಎರಡನೇ ಸುತ್ತಿನಲ್ಲಿ ಮೂರು ಅಂತಿಮ ಆ್ಯಪ್‌ಗ್ಳನ್ನು ಆರಿಸಲಾಗುತ್ತದೆ. ಅವಕ್ಕೆ ತಲಾ 20 ಲಕ್ಷ ರೂ. ನೀಡಲಾಗುತ್ತದೆ. ಅಂತಿಮವಾಗಿ ಆಯ್ಕೆಯಾದ ಒಂದು ಕಂಪನಿಗೆ ತಮ್ಮ ಆ್ಯಪನ್ನು ಕೇಂದ್ರ ಹಾಗೂ ರಾಜ್ಯ
ಸರ್ಕಾರಿ ಕಂಪನಿಗಳಲ್ಲಿ ಅಳವಡಿಸಲು ಅನುಮತಿ ನೀಡಲಾಗುತ್ತದೆ. ಜೊತೆಗೆ ಒಂದು ಕೋಟಿ ರೂ.ಗಳನ್ನು 4 ವರ್ಷಗಳ ಮಟ್ಟಿಗೆ ನೀಡಲಾಗುತ್ತದೆ. 2ನೇ ವರ್ಷದಿಂದ ಮತ್ತೆ ತಲಾ 10 ಲಕ್ಷ ರೂ. ನೀಡಲಾಗುತ್ತದೆ.
Advertisement
ದೇಶದ್ದೇ ಯಾಕೆ ಬೇಕು?ಡಾಟಾ ಎಂಜಿನಿಯರ್ಸ್ ಮುಖ್ಯಸ್ಥ ಅಜಯ್ ಪ್ರಕಾರ ದೇಶದ ಸಾಫ್ಟ್ವೇರ್ ಹೊಂದುವುದರಿಂದ ಹಲವು ಅನುಕೂಲಗಳಿವೆ. ಮುಖ್ಯವಾಗಿ, ಈ ಆ್ಯಪನ್ನು ಎಲ್ಲ ಭಾರತೀಯ ಭಾಷೆಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಬಹುದು. ಅಂದರೆ ಸಾಫ್ಟ್ವೇರ್‌ಗಳಲ್ಲಿ ಭಾರತೀಯ ಲಿಪಿಗಳಿರಲು ಸಾಧ್ಯ. ಡೊಮೈನ್ ನಿಯಂತ್ರಣ ಭಾರತದಲ್ಲೇ ಇರುತ್ತದೆ. ವಿಡಿಯೊವನ್ನು ಕಾನೂನು ರಕ್ಷಣೆ ಕಾರಣದಿಂದ ಮುದ್ರಿಸಿಕೊಳ್ಳಬಹುದು. ಅದರ ಭದ್ರತಾ ಸಂಕೇತಗಳನ್ನೂ ನಮ್ಮಲ್ಲೇ ಇಟ್ಟುಕೊಳ್ಳಬಹುದು. ಆದರೆ ವಿದೇಶಿ ಆ್ಯಪ್‌ಗ್ಳಲ್ಲಿ ಈ ಸೌಲಭ್ಯಗಳು ಸಾಧ್ಯವಿಲ್ಲ.