Advertisement

Music Academy ಶಿಷ್ಯವೇತನಕ್ಕೆ ವೀಡಿಯೋ ಮಾಡಿ ಅರ್ಜಿ ಸಲ್ಲಿಸಿ

12:22 AM Jul 26, 2024 | Team Udayavani |

ಬೆಂಗಳೂರು: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಈ ಬಾರಿ ಶಿಷ್ಯ ವೇತನಕ್ಕೆ ಅಭ್ಯರ್ಥಿಗಳನ್ನು ಭಿನ್ನ ರೀತಿಯಲ್ಲಿ ಆಯ್ಕೆ ಮಾಡಲಿದೆ. ಸಂಗೀತ, ನೃತ್ಯ ಅಭ್ಯರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಉದ್ದೇಶದಲ್ಲಿ ಈ ಬಾರಿ ಅಭ್ಯರ್ಥಿಗಳು ತಾವಿರುವ ಸ್ಥಳದಲ್ಲೇ ವೀಡಿಯೋ ಚಿತ್ರೀಕರಣ ಮಾಡಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕಳೆದ 2 ವರ್ಷಗಳಿಂದ ಅನೇಕ ಕಾರಣಗಳಿಂದಾಗಿ ಶಿಷ್ಯವೇತನ ನೀಡಿರಲಿಲ್ಲ. ಈಗ ಎರಡೂ ವರ್ಷದ್ದು ಸೇರಿಸಿ 200 ಮಂದಿಗೆ ತಲಾ 10 ಸಾವಿರ ರೂ. ನೀಡಲಾಗುತ್ತಿದೆ ಎಂದರು. ಈ ಹಿಂದೆ 16-24ರ ವಯೋಮಿತಿಯವರನ್ನು ಸಂದರ್ಶನ ಮಾಡಿ ಶಿಷ್ಯ ವೇತನಕ್ಕೆ ಆಯ್ಕೆ ಮಾಡಲಾಗುತ್ತಿತ್ತು.

ಆದರೆ ದೂರದೂರುಗಳಿಂದ ಬರುವವರಿಗೆ ಬಸ್‌ ಪ್ರಯಾಣ, ತಂಗುವ ವ್ಯವಸ್ಥೆ ಸೇರಿದಂತೆ ಹಲವು ರೀತಿಯ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಕಾಡೆಮಿ ಈ ನಿರ್ಧಾರಕ್ಕೆ ಬಂದಿದೆ. ಆಯಾ ಕಲಾ ಪ್ರಕಾರಕ್ಕೆ ಅನುಗುಣವಾಗಿ ಅಭ್ಯರ್ಥಿಗಳು ಚಿತ್ರೀಕರಿಸಿ ಕಳುಹಿಸಿ ಕೊಟ್ಟ ಪೆನ್‌ಡ್ರೈವ್‌ ಅನ್ನು ತೀರ್ಪುಗಾರರು ಪರಿಶೀಲಿಸಿ ಶಿಷ್ಯವೇತನಕ್ಕೆ ಆಯ್ಕೆ ಮಾಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next