Advertisement

ಸರಳ ಮದುವೆ ಮಾಡಿ ಆರ್ಥಿಕ ಸಬಲರಾಗಿ

05:56 AM Jan 07, 2019 | Team Udayavani |

ಕಲಬುರಗಿ: ಆಧುನಿಕ ಯುಗದಲ್ಲಿ ಮೌಲ್ಯಯುತ ಶಿಕ್ಷಣದಿಂದ ಸಮಾಜ ಪರಿವರ್ತನೆ ಶಿಕ್ಷಣ ಅತ್ಯವಶ್ಯಕವಾಗಿದ್ದು, ನಿಮ್ಮ ಮಕ್ಕಳ ಮದುವೆಯನ್ನು ಅತ್ಯಂತ ಸರಳವಾಗಿ ಆಗಿ ಆರ್ಥಿಕವಾಗಿ ಭದ್ರವಾಗಿ ಎಂದು ಅಖೀಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಗೌರವಾಧ್ಯಕ್ಷ ಡಾ| ಬಿ.ಪಿ. ಬುಳ್ಳಾ ಹೇಳಿದರು.

Advertisement

ನಗರದ ಕಸ್ತೂರಬಾಯಿ ಪಿ. ಬುಳ್ಳಾ ಸಾಂಸ್ಕೃತಿಕ ಸಭಾ ಭವನದಲ್ಲಿ ಶ್ರೀ ಮಾತಾ ಮಾಣಿಕೇಶ್ವರಿ ವಧು-ವರರ ಕೇಂದ್ರದಿಂದ ನಡೆದ ರಾಜ್ಯಮಟ್ಟದ ವಧು-ವರರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ ಪ್ರಾಚಾರ್ಯರಾದ ಬಸಂತಬಾಯಿ ಡಿ. ಅಕ್ಕಿ ಮಾತನಾಡಿ, ಸಂಘ, ಸಂಸ್ಥೆಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಉತ್ತಮ ಕುಟುಂಬದ ನಿರ್ವಹಣೆಗೆ ಸರ್ಕಾರಿ ನೌಕರಿ ಅನಿವಾರ್ಯ ಆಗಬಾರದು. ಆರೋಗ್ಯವಂತ ಮಕ್ಕಳಿದ್ದರೆ ಮಾತ್ರ ಮದುವೆ ಮಾಡಿ ಎಂದು ಸಲಹೆ ನೀಡಿದರು.

ಮಾಹಿತಿ ಕೇಂದ್ರದ ಗೌರವಾಧ್ಯಕ್ಷರಾದ ಅಶೋಕ ಚಾಂದಕವಟೆ, ಅಧ್ಯಕ್ಷರಾದ ಸೂರ್ಯಕಾಂತ ಗುಡ್ಡಡಗಿ, ಬಾಬುರಾವ ಜಮಾದಾರ, ಉಮಾದೇವಿ ಸರಡಗಿ, ವಿಜಯಲಕ್ಷ್ಮೀ ಜಮಾದಾರ, ಸಾಯಬಣ್ಣ ವಡಗೇರಿ, ಶ್ರೀಮಂತ ಪಟ್ಟೇದ, ಅಂಬಣ್ಣ ಜಮಾದಾರ, ಶಿವಾಜಿ ತಳವಾರ, ಸೂರ್ಯಕಾಂತ ಚರಪಳ್ಳಿ, ಹೊನ್ನಪ್ಪ ಪಟ್ಟೇದ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಧರ್ಮರಾಜ ಜವಳಿ ಸ್ವಾಗತಿಸಿದರು, ಮಲ್ಲಿಕಾರ್ಜುನ ನಾಟೀಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಪ್ಪ ಜಿ. ಮಹಾಗಾಂವ ನಿರೂಪಿಸಿದರು, ಸಿದ್ದಣ್ಣ ಸರಡಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next