Advertisement
ಮಾತಿಗಿಳಿದ ನಿರ್ದೇಶಕ ಮಾ.ಚಂದ್ರು, “ಇದೊಂದು ಕುಡಿಯುವ ನೀರಿನ ಸಮಸ್ಯೆ ಮೇಲೆ ಸಾಗುವ ಕಥೆ. ಉತ್ತರಕರ್ನಾಟಕದಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ನೀರಿಗೆ ಹಾಹಾಕಾರ ಇರುವುದು ಗೊತ್ತೇ ಇದೆ. ಬರ ಇರುವಂತಹ ಒಂದು ಹಳ್ಳಿಯಲ್ಲಿ ಕುಡಿಯೋಕು ನೀರು ಇಲ್ಲದೆ ಅಲ್ಲಿನ ಜನ ಒದ್ದಾಡುತ್ತಾರೆ. ಸರ್ಕಾರ, ಅಧಿಕಾರಿಗಳಿಂದ ಆಗದಂತಹ ಕೆಲಸವನ್ನು ಆ ಊರಿನ ಐದು ಮಕ್ಕಳು ಮಾಡುತ್ತಾರೆ. ಅವರು ಆ ಊರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಯಾವ ಜಾಡು ಹಿಡಿಯುತ್ತಾರೆ ಎಂಬುದು ಕಥೆ. ಇಲ್ಲಿ ಮಾಸ್ಟರ್ ನಿಶಾಂತ್ ಟಿ. ರಾಥೋಡ್, ಮಾಸ್ಟರ್ ಅಂಕಿತ್ ನವನಿಧಿ, ಬೇಬಿ ಲಕ್ಷ್ಮೀಶ್ರೀ, ಮಾಸ್ಟರ್ ರಂಗಸ್ವಾಮಿ, ಮಾಸ್ಟರ್ ರೋಹಿತ್ ಗೌಡ, ಮಾಸ್ಟರ್ ವಿಘ್ನೇಶ್, ಬ್ಯಾಂಕ್ ಜನಾರ್ದನ್, ಉಮೇಶ್ ಇತರರು ನಟಿಸುತ್ತಿದ್ದಾರೆ. ಈ ಹಿಂದೆ “ಮೂಕ ಹಕ್ಕಿ’ ನಿರ್ಮಿಸಿದ್ದ ಚಂದ್ರಕಲಾ ಅವರು ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. “ಕಳೆದ ಬಾರಿ ವಿತರಣೆ ಸರಿಹೋಗದಿದ್ದರಿಂದ “ಮೂಕಹಕ್ಕಿ’ ಸೋಲುಂಡಿತು. ಆದರೆ, ಮಾಧ್ಯಮಗಳಿಂದ ಉತ್ತಮ ಪ್ರಶಂಸೆ ಸಿಕ್ಕಿತ್ತು. ಅದೇ ಧೈರ್ಯದಿಂದ ಈ ಬಾರಿ ಮಕ್ಕಳ ಚಿತ್ರ ಮಾಡುತ್ತಿದ್ದೇನೆ. ಈ ಮೂಲಕ ಒಂದು ಸಂದೇಶ ಕೊಡುವ ಪ್ರಯತ್ನ ನನ್ನದು. ಒಳ್ಳೆಯ ಕಥೆ, ಉದ್ದೇಶ ಇಲ್ಲಿರುವುದರಿಂದ ನಿಮ್ಮಗಳ ಸಹಕಾಚರ ಬೇಕು’ ಎಂದರು ಚಂದ್ರಕಲಾ.
Advertisement
ಬೆಟ್ಟದ ಮೇಲೊಂದು ಚಿತ್ರ ಮಾಡಿ
12:15 PM Jan 26, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.