Advertisement
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಗರದ ಅನನ್ಯ ಕಾಲೇಜಿನಲ್ಲಿ ವಿದ್ಯಾರ್ಥಿ, ಯುವಜನರಿಗಾಗಿ ಆಯೋಜಿಸಿದ್ದಮಾನಸಿಕ ಆರೋಗ್ಯ ಕುರಿತ ಆನ್‌ಲೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನಸಿಕ ಆರೋಗ್ಯಕ್ಕೆ ಮಹತ ನೀಡಿ: ಪ್ರತಿವ್ಯಕ್ತಿಯ ದೇಹಕ್ಕೂ ಮನಸ್ಸಿಗೂ ನೇರ ಸಂಬಂಧವಿದ್ದು, ದೈಹಿಕ ಆರೋಗ್ಯಕ್ಕೆ ನೀಡುವ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಾಗಿದೆ. ಆದರೆ ಬಹಳಷ್ಟು ಜನ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದರು.
Related Articles
Advertisement
ಆರೋಗ್ಯವೂ ವೃದ್ಧಿ: ತುಮಕೂರು ನಗರ ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಾತನಾಡಿ, ಕೋವಿಡ್‌ನ ಈ ಸೂಕ್ಷ್ಮ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನರ ಜವಾಬ್ದಾರಿ ಕುಟುಂಬಗಳಲ್ಲಿ ಹೆಚ್ಚಿನದಿದೆ. ಹಿಂದೆಲ್ಲಾ ಅವಶ್ಯಕ ಮತ್ತು ಅನಾವಶ್ಯಕ ಎಂದು ಯೋಚಿಸದೆ ಹಣ ಖರ್ಚು ಮಾಡುವವರಿದ್ದರು. ಈಗ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿರುವುದರಿಂದ ಯಾವುದೇವಸ್ತುಗಳನ್ನು ಕೊಳ್ಳುವ ಮುನ್ನ ಒಮ್ಮೆಯೋಚಿಸಬೇಕು. ಪೋಷಕರೊಂದಿಗೆಮಾತನಾಡಬೇಕು. ಪರಸ್ಪರ ಕೌಟುಂಬಿಕ ವಾತಾವರಣದಲ್ಲಿ ಕುಳಿತು ಮಾತನಾಡುವ ಪ್ರವೃತ್ತಿ ಹೆಚ್ಚಾದಂತೆಲ್ಲಾ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ವರಾನ ಗ್ಲೋಬಲ್ ಟ್ರಸ್ಟಿ ಎಚ್.ಹರೀಶ್, ಅನನ್ಯ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವಾಸ್, ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ದೇವಕಿ ಪ್ರಸಾದ್, ಎನ್.ಜೆ. ಯತೀಶ್ ಇತರರು ಇದ್ದರು.