Advertisement

ಮುದಬಾಳ ಕ್ರಾಸ್‌ನಲ್ಲಿ ಬಸ್‌ ನಿಲುಗಡೆ ಮಾಡಿ

03:24 PM Apr 24, 2022 | Team Udayavani |

ಮಸ್ಕಿ: ತಾಲೂಕಿನ ಮುದಬಾಳ ಕ್ರಾಸ್‌ ನಲ್ಲಿ ಸಾರಿಗೆ ಇಲಾಖೆ ಬಸ್‌ಗಳನ್ನು ನಿಲುಗಡೆ ಮಾಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

Advertisement

ರಾಷ್ಟ್ರೀಯ ಹೆದ್ದಾರಿ 150(ಎ) ಜೇವರ್ಗಿ- ಚಾಮರಾಜನಗರ ಮಾರ್ಗದಲ್ಲಿರುವ ತಾಲೂಕಿನ ಮುದಬಾಳ ಕ್ರಾಸ್‌ನಲ್ಲಿ ಪ್ರಯಾಣಿಕರಿಗೆ ಬಸ್‌ ನಿಲ್ದಾಣವಿದ್ದು, ಕುಡಿವ ನೀರು ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳಿವೆ. ಆದರೆ ಇಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಆಗದಿರುವುದರಿಂದ 20ಕ್ಕೂ ಹೆಚ್ಚು ಹಳ್ಳಿಗಳ ಪ್ರಯಾಣಿಕರಿಗೆ ತೊಂದರೆಯಾಗಿದೆ. ಮುದಬಾಳ, ಬುದ್ದಿನ್ನಿ ಎಸ್‌, ಹೂವಿನಭಾವಿ, ಉಸ್ಕಿಹಾಳ, ಕಾಟಗಲ್‌, ಮಾರಲದಿನ್ನಿ, ಪಾಮನಕೆಲ್ಲೂರು, ಬೆಂಚಮರಡಿ, ಇಲಾಲಪೂರ, ಹರ್ವಾಪೂರು, ತುಪ್ಪದೂರು ಸೇರಿದಂತೆ ಇತರೆ ಹಳ್ಳಿಯಿಂದ ಪ್ರಯಾಣಿಸುವ ಜನರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ಗಳನ್ನು ನಿಲುಗಡೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಾಗರಡ್ಡೆಪ್ಪ ದೇವರಮನಿ, ಬಸವರಾಜ ಈಳಿಗೇರ, ಗಂಗಪ್ಪ ತೋರಣದಿನ್ನಿ, ಬಸವರಾಜ ದಿನ್ನಿ, ಮರಿಗೌಡ ಉಸ್ಕಿಹಾಳ, ಬಸನಗೌಡ ಹರ್ವಾಪೂರು ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next