Advertisement

50 ಬಾರಿ ರಕ್ತದಾನ ಮಾಡಿ ಸರ್ಕಾರಿ ನೌಕರರಿಬ್ಬರು ಮಾದರಿ

06:03 PM Jun 15, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಕಂದಾಯ ಇಲಾಖೆಯ ಶಿರಸ್ತೇದಾರಮಂಜುನಾಥ್‌ 50 ಬಾರಿ, ಆರೋಗ್ಯ ಇಲಾಖೆಯಲ್ಯಾಬ್‌ ಟೆಕ್ನೀಷಿಯನ್‌ ಆಗಿರುವ ಟಿ.ಟಿ.ನರಸಿಂಹ 45 ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

Advertisement

ರಕ್ತದಾನಿಗಳ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ಮತ್ತೂಬ್ಬರ ಜೀವನ ಉಳಿಸುತ್ತಿರುವ ಈ ಇಬ್ಬರ ಸೇವೆ ನೆನೆಯಲೇಬೇಕಿದೆ. ಕೊರೊನಾ ಸೋಂಕಿನ ಪ್ರಭಾವದಿಂದಪ್ರಸಕ್ತ ಸಾಲಿನಲ್ಲಿ ರಕ್ತದಾನಿಗಳ ಕೊರತೆಕಾಡುತ್ತಿದೆ. ಲಸಿಕೆ ಪಡೆದ ಬಳಿಕ ಕನಿಷ್ಠ 2ತಿಂಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲ.ಇದರಿಂದ ಜಿಲ್ಲೆಯಲ್ಲಿ ರೆಡ್‌ಕ್ರಾಸ್‌ ರಕ್ತನಿಧಿಕೇಂದ್ರದಲ್ಲಿ ನಿರೀಕ್ಷಿತ ರಕ್ತ ಸಂಗ್ರಹ ಆಗುತ್ತಿಲ್ಲ.

ನಿಜವಾದ ಹೀರೋ: ಈ ಮಧ್ಯೆ ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಹಕ್ಕುದಾಖಲೆ ವಿಭಾಗದಲ್ಲಿ ಶಿರಸ್ತೇದಾರ್‌ ಆಗಿರುವ ಕೆ.ಎನ್‌.ಎಂಮಂಜುನಾಥ್‌ 50 ಬಾರಿ ರಕ್ತದಾನ ಮಾಡಿದ್ದಾರೆ.ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿಗರ್ಭಿಣಿಯೊಬ್ಬರಿಗೆ ಮೊದಲ ಬಾರಿಗೆ ರಕ್ತದಾನಮಾಡಿದ್ದ ಇವರು, ಹಲವು ಅಮೂಲ್ಯ ಜೀವ ಉಳಿಸಿ ನಿಜವಾದ ಹೀರೋ ಆಗಿದ್ದಾರೆ.

3 ತಿಂಗಳಿಗೊಮ್ಮೆ ರಕ್ತದಾನ: ಶಿಡ್ಲಘಟ್ಟತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವಮಂಜಣ್ಣ, ರಕ್ತದಾನ ಮಾಡುವುದರಿಂದ ಸಿಗುವತೃಪ್ತಿ ಬೇರೆ ಯಾವುದರಲ್ಲಿ ಸಿಗುವುದಿಲ್ಲಎನ್ನುತ್ತಾರೆ. ಇನ್ನೂ ಶಿಡ್ಲಘಟ್ಟ ತಾಲೂಕಿನ ಕೆ.ಮುತ್ತಕದಹಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ನಿಯೋಜನೆ ಮೇರೆಗೆ ಸೇವೆಸಲ್ಲಿಸುತ್ತಿರುವ ಲ್ಯಾಬ್‌ ಟೆಕೆ°àಷಿಯನ್‌ಟಿ.ಟಿ.ನರಸಿಂಹ, 45 ಬಾರಿ ರಕ್ತದಾನಮಾಡಿದ್ದಾರೆ.

9 ತರಗತಿಯಲ್ಲಿ ಕಾಲಿಗೆ ಪೆಟ್ಟುಬಿದ್ದಿತ್ತು. ಚಿಕ್ಕಬಳ್ಳಾಪುರದ ಸಿ.ಎಸ್‌.ಐಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ರಕ್ತದಾನಮಾಡಲು ಕೆಲವರು ಹಿಂಜರಿದಿದ್ದರು. ಇದರಿಂದಪ್ರಭಾವಿತರಾದ ನರಸಿಂಹ, 3 ತಿಂಗಳಿಗೆ ಒಮ್ಮೆರಕ್ತ ಕೊಡುವ ಅಭ್ಯಾಸ ಮಾಡಿಕೊಂಡಿದ್ದಾರೆ.ಕೇರಂ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆಒಂದು ಬಾರಿ ಆಯ್ಕೆಯಾಗಿದ್ದರು. ಶೆಟಲ್‌ಬ್ಯಾಡ್ಮಿಂಟನ್‌ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆಮಾಡಿದರು. ಚೆಸ್‌ನಲ್ಲಿ ಮೂರು ಬಾರಿ ರಾಜ್ಯಮಟ್ಟಕ್ಕೆ ಹೋಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Advertisement

ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next