Advertisement

Thirthahalli: ತೀರ್ಥಹಳ್ಳಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ, ರಥ ಎಳೆದು ಸಂತಸ ಪಟ್ಟ ಭಕ್ತವೃಂದ

04:45 PM Jan 15, 2024 | Team Udayavani |

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮಕರ ಸಂಕ್ರಮಣದ ಅಂಗವಾಗಿ ಶ್ರೀ ರಾಮೇಶ್ವರನಿಗೆ ವಿಶೇಷ ಪೂಜೆ ಹಾಗೂ ರಥೋತ್ಸವ ಅದ್ದೂರಿಯಾಗಿ ನೆರವೇರಿಸಲಾಯಿತು.

Advertisement

ಬೆಳಗ್ಗೆ 11.30ರ ಸುಮಾರಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀರಾಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿತು. ನಂತರ ರಥೋತ್ಸವವು ಅದ್ದೂರಿಯಾಗಿ ನಡೆಯಿತು. ಮಲೆನಾಡ ಭಾಗದಲ್ಲಿ ರೈತರು ತಮ್ಮಲ್ಲಿ ಬೆಳೆದ ಪೈರುಗಳನ್ನು ತೆಗೆಯುವ ಸಂಧರ್ಭದಲ್ಲಿ ಆಚರಿಸುವ ಒಂದು ಹಬ್ಬ. ಜನವರಿಯ ಮಧ್ಯಭಾಗದಲ್ಲಿ ಈ ಹಬ್ಬ ಬರುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ತಮ್ಮ ಗ್ರಾಮ ದೇವತೆಗೆ ಅರ್ಪಿಸುವ ಸಂಪ್ರದಾಯ ರೂಡಿಯಲ್ಲಿದೆ. ಮಲೆನಾಡಿನಲ್ಲಿ ಈ ಹಬ್ಬ ದಂದು ಎಳ್ಳು ಬೆಲ್ಲ ಹಂಚುವ ಅಭ್ಯಾಸ ರೂಡಿಯಲ್ಲಿದೆ. ಸುಗ್ಗಿ ಹಬ್ಬ ಎಂದು ಇನ್ನೊಂದು ಹೆಸರು ಇದೆ.

ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ರಾಮೇಶ್ವರನ ಕೃಪೆಗೆ ಪಾತ್ರರಾದರು ನಂತರ ಸರ್ವರಿಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಜಾತ್ರೆಯ ಸೊಬಗಿನ ಕೊನೆಯ ದಿನವಾದ್ದರಿಂದ ಸೊಮವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: Team India; ಯಶಸ್ವಿ ಜೈಸ್ವಾಲ್ ಈ ಆಟಗಾರನನ್ನು ಮೀರಿ ಬೆಳೆದಿದ್ದಾರೆ: ಆಕಾಶ್ ಚೋಪ್ರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next