ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಲ್ಲಿ ಸಾವಿರಾರು ಭಕ್ತರು ಇಂದು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಕೇವಲ 5,000 ಭಕ್ತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.
ಮಕರ ಇಂದು ಸಂಜೆ 6:42ಕ್ಕೆ ಸರಿಯಾಗಿ ಪೊನ್ನಂಬಲಮೇಡು ಗಿರಿಯಲ್ಲಿ ಜ್ಯೋತಿ ಕಾಣಿಸಿಕೊಂಡಿತ್ತು. ಈ ವೇಳೆ ಭಕ್ತರ ಹರ್ಷೋದ್ಗಾರ ಮತ್ತು ಆಯ್ಯಪ್ಪ ನಾಮಸ್ಮರಣೆ ಮುಗಿಲು ಮುಟ್ಟಿತ್ತು.
ಈ ಬಾರಿ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವ ಭಕ್ತರಿಗೆ ಮಾತ್ರ ದೇಗುಲಕ್ಕೆ ಪ್ರವೇಶ ನೀಡಲಾಗಿತ್ತು.
ಗರುಡ ದರ್ಶನ ಪಡೆದು ಮಕರಜ್ಯೋತಿ ಕಣ್ತುಂಬಿಕೊಂಡ ಭಕ್ತರು ಪುನೀತರಾಗಿದ್ದಾರೆ. ಮಕರಜ್ಯೋತಿ ದರ್ಶನವಾಗುತ್ತಿದ್ದಂತೆ ಅಯ್ಯಪ್ಪನ ಸ್ಮರಣೆ ಮುಗಿಲು ಮುಟ್ಟಿತು. ಈ ವೇಳೆ ಅಯ್ಯಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಇದನ್ನೂ ಓದಿ: ಶಬರಿಮಲೆ ಕ್ಷೇತ್ರ ಎಲ್ಲಾ ಧರ್ಮೀಯರ ಭಕ್ತಿಯ ತಾಣ: ರಾಮಣ್ಣ ದೇವಾಡಿಗ