Advertisement

ಪಾರಂಪರಿಕ ತಾಣಕ್ಕೆ ಬೆಂಕಿ

09:57 AM Nov 01, 2019 | Hari Prasad |

ಟೋಕಿಯೊ: ಜಪಾನ್‌ನ ಒಕಿನಾವ ದ್ವೀಪದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಯುನೆಸ್ಕೋ ಗುರುತಿಸಿರುವ ಪಾರಂಪರಿಕ ತಾಣವಾದ ಶುರಿ ಕ್ಯಾಸಲ್‌ ಬಹುತೇಕ ನಾಶವಾಗಿದೆ. ಶುರಿ ಕ್ಯಾಸಲ್‌ ಭಾಗಶಃ ಅಗ್ನಿಗೆ ಆಹುತಿಯಾಗಿದ್ದು, ರಕ್ಷಣಾ ಕಾರ್ಯಕರ್ತರು 12 ಗಂಟೆಗಳ ಕಾಲ ಬೆಂಕಿ ಜತೆ ಸೆಣಸಾಡಿ ಹತೋಟಿಗೆ ತಂದಿದ್ದಾರೆ. ಒಕಿನಾವದ ಸಾಂಕೇತಿಕ ರಾಜಧಾನಿ ನಹಾದ ಅರಮನೆಯ ಮಧ್ಯಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಬಳಿಕ ಅದು ಇತರ ಕಟ್ಟಡಗಳಿಗೂ ವ್ಯಾಪಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next