ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 5 ಕೆಜಿ ಸುಧಾರಿತ ಸ್ಫೋಟಕ ಸಾಧನದೊಂದಿಗೆ (ಐಇಡಿ) ಉಗ್ರಗಾಮಿಯೊಬ್ಬನನ್ನು ಬಂಧಿಸಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.
ಕಾಶ್ಮೀರ ವಲಯ ಪೊಲೀಸರ ಟ್ವೀಟ್ ಪ್ರಕಾರ, “ಪುಲ್ವಾಮಾ ಪೊಲೀಸರು ಭಯೋತ್ಪಾದಕ ಸಹಚರ ಇಶ್ಫಾಕ್ ಅಹ್ಮದ್ ವಾನಿ ಅನ್ನು ಬಂಧಿಸುವ ಮತ್ತು ಐಇಡಿ (ಸುಮಾರು 5-6 ಕೆಜಿ) ವಶಪಡಿಸಿಕೊಳ್ಳುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇದನ್ನೂ ಓದಿ:ಜೂಜಾಟದ ವೇಳೆ ಪೊಲೀಸ್ ದಾಳಿ: ಭೀತಿಯಿಂದ ಓಡುವಾಗ ಬಾವಿಗೆ ಬಿದ್ದು ಯುವಕ ಮೃತ್ಯು
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ರಜೌರಿ ಸೆಕ್ಟರ್‌ನಲ್ಲಿ ಉಗ್ರರನ್ನು ಹೊರಹಾಕಲು ಪಡೆಗಳು ತೆರಳಿದಾಗ ಭಯೋತ್ಪಾದಕರು ಪ್ರಚೋದಿಸಿದ ಸ್ಫೋಟದಲ್ಲಿ ಐವರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು.