Advertisement
ಈಶ್ವರನಿಂದ ಸ್ಥಾಪಿತವಾದ ಪೀಠಗಳಲ್ಲಿ ಇದೇಮೊದಲನೆಯದಾದ್ದರಿಂದ ಇದಕ್ಕೆ ‘ಆದಿ ಚುಂಚನಗಿರಿಪೀಠ’ವೆಂಬ ಹೆಸರು ಬಂದಿದೆ. ಈಶ್ವರನು ಈ ಪೀಠವನ್ನು ಸಿದ್ಧಯೋಗಿಗೆ ಬಿಟ್ಟುಕೊಡುವಾಗ ತಾನೇ ಸ್ವತಃ ಇದರ ಮಹತ್ವವನ್ನು ಹೀಗೆ ವರ್ಣಿಸಿರುತ್ತಾನೆ.
Related Articles
Advertisement
ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯ: ಗಂಗಾಧರೇಶ್ವರನ ಆಶೀರ್ವಾದ ಪಡೆದ ಆರಣಿಯಪಾಳೇಗಾರರ ಬಗೆಗೆ ಮತ್ತು ಶ್ರೀ ಗಂಗಾಧರೇಶ್ವರ ದೇವಾಲಯದ ಬಗೆಗೆ ಒಂದು ಕಥೆ ಪ್ರಚಲಿತವಾಗಿದೆ.ಚುಂಚನಗಿರಿಯ ಸಮೀಪದಲ್ಲಿಯೇ ಹಿಂದೆ ಆರಣಿಎಂಬ ಪಾಳೆಯಗಾರರ ಸಂಸ್ಥಾನವಿತ್ತು. ಆ ಪಾಳೆಯಗಾರನಿಗೆ ಬಹುಕಾಲದವರೆಗೆ ಮಕ್ಕಳಿರಲಿಲ್ಲ. ಆಗ ಅವನು ಗಂಡು ಸಂತಾನವಾದರೆಗಿಣ್ಣಿಲ್ಲದ ಬಿದಿರಿನಲ್ಲಿ ತೊಟ್ಟಿಲು ಮಾಡಿಸುತ್ತೇನೆಂದುಹರಕೆ ಮಾಡಿಕೊಂಡನು. ಅಂತಹ ಬಿದಿರುಚುಂಚನಗಿರಿಯಲ್ಲಿದೆಯೆಂದು ತಿಳಿದು, ಬಿದಿರನ್ನುಕಡಿಯಲು ಮೇದರನನ್ನು ಕಳುಹಿಸಿದನು.ಮೇದರು ಬಿದಿರನ್ನು ಕಡಿಯಲು ಪ್ರಾಣವುಳ್ಳವರನ್ನು ಹನನ ಮಾಡಿದಂತೆ ರಕ್ತವು ಚಿಮ್ಮಿತು. ಮೇದರು ಭಯಭ್ರಾಂತರಾದರು. ಆಗ ಒಂದುಅಶರೀರವಾಣಿಯು ಕೇಳಿ ಬಂತು. “ನಾನು ಈಶ್ವರನು-ಚುಂಚನಕಟ್ಟೆ ಕ್ಷೇತ್ರವನ್ನು ಶ್ರೀರಾಮ ದೇವರಿಗೆಬಿಟ್ಟುಕೊಟ್ಟು, ಚುಂಚ-ಕಂಚರೆಂಬ ರಾಕ್ಷಸರನ್ನುಸಂಹರಿಸುವುದಕ್ಕಾಗಿ ಇಲ್ಲಿಗೆ ಬಂದು ಅವರನ್ನು ಸಂಹರಿಸಿ ಈ ಬಿದಿರಿನ ನೆರಳಲ್ಲಿ ನೆಲೆಸಿರುವೆನು.
ಈ ವಿಷಯವನ್ನು ಪಾಳೆಗಾರರಿಗೆ ತಿಳಿಸಿ, ಒಂದು ದೇವಾಲಯವನ್ನು ಕಟ್ಟಿಸುವಂತೆ ಹೇಳಿ, ಮೇದರು ಹಿಂದಿರುಗಿ ನೋಡದೆ ಹೋಗುವಂತೆ ಎಚ್ಚರಿಸಿತು. ಶ್ರೀ ಕ್ಷೇತ್ರದ ಸೋಪಾನದ ಪಕ್ಕದಲ್ಲಿರುವ ಮಂಟಪದಲ್ಲಿಈಗಲೂ ಆ ಮೇದರ ತಲೆಗಳಂತಿರುವ ಶಿಲೆಗಳನ್ನು ನೋಡಬಹುದು.
ಶ್ರೀ ಆಕಾಶ ಭೈರವ, ಚೇಳೂರ ಕಂಬ: ಚುಂಚನಗಿರಿಯದಕ್ಷಿಣೋತ್ತರವಾಗಿ ಎರಡು ಶಿಖರಗಳಿವೆ. ಉತ್ತರಕ್ಕೆಇರುವ ಶಿಖರಕ್ಕೆ ‘ಗಳಿಗೆಗಲ್ಲು ಎಂದು ಹೆಸರು. ಇದನ್ನುಆಕಾಶಭೈರವನೆಂದು ಕರೆಯುತ್ತಾರೆ.
ಚೋಳೂರು ಕಂಬ: ದಕ್ಷಿಣ ಭಾಗದಲ್ಲಿರುವ ಶಿಖರಕ್ಕೆ “ಚೇಳೂರು ಕಂಬ’ ಎಂಬ ಹೆಸರು ಇದೆ. ಇದರ ಸುತ್ತಲೂ ಹಳತಾದ ಬಂಡೆಗಳು ಒಡೆದು ಭಯಂಕರವಾದ ಗುಹೆಗಳಾಗಿವೆ. ಇದನ್ನು ಹತ್ತುವ ದಾರಿಯು ಸ್ವಲ್ಪ ಕಠಿಣವಾಗಿದೆ.
ಉತ್ಸವಗಳು: ಆದಿಚುಂಚನಗಿರಿಯ ಪ್ರಥಮ ಪೀಠಾಕಾರಿಗಳಾದ ಸಿದ್ಧಯೋಗಿಯ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಗಂಗಾಧರೇಶ್ವರ, ಭೈರವೇಶ್ವರ, ಪಾರ್ವತಿ ದೇವಿಮೊದಲಾದ ದೇವರುಗಳಿಗೆ ಶೈವಾಗಮಶಾಸ್ತ್ರೋಕ್ತವಾಗಿನಿತ್ಯೋತ್ಸವ, ತೆಪೋ›ತ್ಸವ, ಮಾಸೋತ್ಸವ,ವರ್ಷೋತ್ಸವಗಳು ನಡೆಯುತ್ತವೆ. ಹಿಂ
ದಿನ ಸಂಪ್ರದಾಯದಂತೆ ಈಗಿನ ಪೀಠಾಪತಿಗಳು ಶಿವರಾತ್ರಿ, ವಿಜಯದಶಮಿ, ಕಾಮನ ಹುಣ್ಣಿಮೆಗಳಲ್ಲಿ ಪೂಜಾಭಿಷೇಕವನ್ನು ನೆರವೇರಿಸುವರು. ಪ್ರತಿನಿತ್ಯವಿಶೇಷವಾದ ಅಭಿಷೇಕ, ಸಹಸ್ರ ನಾಮ ಪೂಜೆ ಮತ್ತು ಉತ್ಸವಗಳು ನಡೆಯುವವು. ಮಹಾನವಮಿ, ಮಹಾಶಿವರಾತ್ರಿ ರಥೋತ್ಸವದಂದು ಪೀಠಾಪತಿಗಳು ಉಪವಾಸವಿದ್ದು, ಮಂಗಳ ಸ್ನಾನ ಮಾಡಿ ಕಿರೀಟ ಧಾರಣೆ ಮಾಡಿ ದಿವ್ಯ ವಸ್ತ್ರ ಪೀತಾಂಬರಗಳಿಂದ ಅಲಂಕೃತರಾಗಿ, ಸಮಸ್ತ ಬಿರುದು ಬಾವಲಿ ವಾದ್ಯಗಳ ಸಮೇತ ಪೀಠಾರೋಹಣ ಮಾಡಿ ಭಕ್ತ ಸಮೂಹಕ್ಕೆ ದರ್ಶನ ಕೊಟ್ಟ ಮೇಲೆ ಸಿದ್ಧ ಸಿಂಹಾಸನಾರೋಹಣ ಮಾಡುವರು.