Advertisement

Karnataka ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; ಮಂಗಳೂರು ಕಮಿಷನರ್, ಉಡುಪಿ ಎಸ್ ಪಿ ಬದಲಾವಣೆ

09:43 AM Sep 05, 2023 | Team Udayavani |

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಈ ಬಗ್ಗೆ ಆದೇಶ ಹೊರಬಿದ್ದಿದ್ದು, ಲಕ್ಷ್ಮಣ ನಿಂಬರಗಿ ಸೇರಿ ಹಲವರ ಟ್ರಾನ್ಸ್ ಫರ್ ಮಾಡಲಾಗಿದೆ.

Advertisement

ಮಂಗಳೂರು ನಗರ ಕಮಿಷನರ್ ಕುಲದೀಪ್ ಜೈನ್ ಅವರನ್ನು ವರ್ಗಾಯಿಸಿ ಅವರ ಜಾಗಕ್ಕೆ ಅನುಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಉಡುಪಿ ಎಸ್ ಪಿ ಅಕ್ಷಯ್ ಹಾಕೇ ಮಚ್ಚಿಂದ್ರ ಅವರ ಬದಲಿಗೆ ಡಾ ಅರುಣ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ಅಪರಾಧ ವಿಭಾಗದ ಡಿಐಜಿ ಡಾ ಶರಣಪ್ಪ ಅವರನ್ನು ಮೈಸೂರು ಪೊಲೀಸ್ ಅಕಾಡೆಮಿ ಡಿಐಜಿ ಆಗಿ ವರ್ಗಾಯಿಸಲಾಗಿದೆ.

ರಾಜ್ಯ ಕ್ರೈಮ್ ರೆಕಾರ್ಡ್ ಬ್ಯೂರೊ ಎಸ್ ಪಿ ವರ್ತಿಕಾ ಕಟಿಯಾರ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಸಂಚಾರ ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

Advertisement

ಗುಪ್ತಚರ ವಿಭಾಗದ ಎಸ್ ಪಿ ಸಂತೋಷ್ ಬಾಬು ಅವರನ್ನು ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಅಪರಾಧ ವಿಭಾಗದ ಡಿಸಿಪಿ ಯತೀಶ್ಚಂದ್ರ ಜಿ ಎಚ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಅವರನ್ನು ಬೆಳಗಾವಿ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಕಾರ್ಕಳ ನಕ್ಸಲ್ ನಿಗ್ರಹ ಪಡೆ ಎಸ್ ಪಿ ನಿಕಮ್ ಪ್ರಕಾಶ್ ಅಮೃತ್ ವೈರ್ ಲೆಸ್ ವಿಭಾಗದ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ತುಮಕೂರು ಎಸ್ ಪಿ ರಾಹುಲ್ ಕುಮಾರ್ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಡಿ ದೇವರಾಜ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಉಡುಪಿ ಕರಾವಳಿ ರಕ್ಷಣಾ ಪಡೆ ಎಸ್ ಪಿ ಅಬ್ದುಲ್ ಅಹದ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ವೈಟ್ ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಅವರನ್ನು ಬೆಂಗಳೂರು ಪಶ್ಚಿಮ ವಲಯ ಡಿಸಪಿಯಾಗಿ ವರ್ಗಾಯಿಸಲಾಗಿದೆ.

ಬೆಳಗಾವಿ ಎಸ್ ಪಿ ಸಂಜೀವ್ ಎಂ ಪಾಟೀಲ್ ಅವರನ್ನು ವೈಟ್ ಫೀಲ್ಡ್ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಕೆ ಪರಶುರಾಮ ಅವರನ್ನು ಗುಪ್ತಚರ ಎಸ್ ಪಿಯಾಗಿ ನೇಮಿಸಲಾಗಿದೆ.

ವಿಜಯಪುರ ಎಸ್ ಪಿ ಆನಂದ್ ಕುಮಾರ್ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯ ವಿಭಾಗದ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ ಡಿಸಿಪಿ ಸುಮನ್ ಪನ್ನೇಕರ್ ಅವರನ್ನು ಸಹಾಯಕ ಪೊಲೀಸ್ ಮಹಾನಿರೀಕ್ಷಕರಾಗಿ ವರ್ಗಾಯಿಸಲಾಗಿದೆ.

ಗುಪ್ತಚರ ಎಸ್ ಪಿ ದೆಕ್ಕಾ ಕಿಶೋರ್ ಬಾಬು ಅವರನ್ನು ಕಲಬುರಗಿ ಪೊಲೀಸ್ ತರಬೇತಿ ಸಂಸ್ಥೆಯ ಎಸ್ ಪಿ ಮತ್ತು ಪ್ರಾಂಶುಪಾಲರಾಗಿ ನೇಮಿಸಲಾಗಿದೆ.

ಕೆಎಸ್ಆರ್ ಪಿ ಕಮಾಂಡೆಂಟ್ ಕೋನಾ ವಂಶಿ ಕೃಷ್ಣ ಅವರನ್ನು ಬೆಂಗಳೂರು ಕಮಾಂಡ್ ಸೆಂಟರ್ ಡಿಸಿಪಿಯಾಗಿ ನೇಮಿಸಲಾಗಿದೆ.

ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಕ್ರೈಮ್ ರೆಕಾರ್ಡ್ ಬ್ಯೂರೋದ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಬೆಂಗಳೂರು ಸಂಚಾರ ದಕ್ಷಿಣ ಡಿಸಿಪಿ ಮೊಹಮ್ಮದ್ ಸುಜೀತಾ ಅವರನ್ನು ಹಾಸನ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಕಲಬುರಗಿ ಪೊಲೀಸ್ ತರಬೇತಿ ಸಂಸ್ಥೆಯ ಎಸ್ ಪಿ ಮತ್ತು ಪ್ರಾಂಶುಪಾಲ ಅರುಣ್ ಕೆ ಅವರನ್ನು ಉಡುಪಿ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಬಾಗಲಕೋಟೆ ಎಸ್ ಪಿ ಜಯಪ್ರಕಾಶ್ ಅವರನ್ನು ಗುಪ್ತಚರ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಶೇಖರ್ ಎಚ್ ತೆಕ್ಕನವರ್ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಸಿಐಡಿ ಎಸ್ ಪಿ ಸಾರಾ ಫಾತಿಮಾ ಅವರನ್ನು ಬೆಂಗಳೂರು ಸಂಚಾರ ಪೂರ್ವ ವಲಯದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಗುಪ್ತಚರ ಎಸ್ ಪಿ ಸೋನಾವನೆ ರಿಷಿಕೇಶ್ ಭಗವಾನ್ ಅವರನ್ನು ವಿಜಯಪುರ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಪೊಲೀಸ್ ಅಕಾಡೆಮಿ ಮೈಸೂರು ನಿರ್ದೇಶಕ ಲೋಕೆಶ್ ಭರಮಪ್ಪ ಅವರನ್ನು ಅದೇ ಸಂಸ್ಥೆಯ ಎಸ್ ಪಿ ಮತ್ತು ಉಪ ನಿರ್ದೇಶಕರಾಗಿ ನಿಯೋಜಿಸಲಾಗಿದೆ.

ಬೆಂಗಳೂರು ಕೇಂದ್ರ ವಲಯ ಡಿಸಿಪಿ ಶ್ರೀನಿವಾಸ ಗೌಡ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗ-2 ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಕೃಷ್ಣಕಾಂತ್ ಅವರನ್ನು ಆಡಳಿತ ವಿಭಾಗದ ಸಹಾಯಕ ಪೊಲೀಸ್ ಮಹಾನಿರೀಕ್ಷಕರಾಗಿ ನೇಮಿಸಲಾಗಿದೆ.

ಕಲಬುರಗಿ ಗುಪ್ತಚರ ವಿಭಾಗದ ಎಸ್ ಪಿ ಅಮರನಾಥ್ ರೆಡ್ಡಿ ಅವರನ್ನು ಬಾಗಲಕೋಟೆ ಎಸ್ ಪಿಯಾಗಿ ನೇಮಿಸಲಾಗಿದೆ.

ಹಾಸನ್ ಎಸ್ ಪಿ ಹರಿರಾಂ ಶಂಕರ್ ಅವರನ್ನು ಗುಪ್ತಚರ ಎಸ್ ಪಿಯಾಗಿ ವರ್ಗಾಯಿಸಲಾಗಿದೆ

ಕಲಬುರಗಿ ಕಾನೂನು ಸುವ್ಯವಸ್ಥೆ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಅವರನ್ನು ಕಲಬುರಗಿ ಎಸ್ ಪಿಯಾಗಿ ನೇಮಿಸಲಾಗಿದೆ.

ಅಂಶು ಕುಮಾರ್ ಅವರನ್ನು ಉಡುಪಿ ಕರಾವಳಿ ರಕ್ಷಣಾ ಪಡೆ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಕನಿಕಾ ಸಿಕ್ರಿವಾಲ್ ಅವರನ್ನು ಕಲಬುರಗಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿದೆ.

ಕೌಶಲ್ ಚೌಸ್ಕೆ ಅವರನ್ನು ಬೆಂಗಳೂರು ವಿಧಿವಿಜ್ಞಾನ ವಿಭಾಗದ ಜಂಟಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ

ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿ ರವೀಂದ್ರ ಕಾಶಿನಾಥ್ ಗಡಾಡಿ ಅವರನ್ನು ಗುಪ್ತಚರ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next