ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳಿಗೆ ಮೇಜರ್ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ),ಲೋಕಾಯುಕ್ತ ಎಡಿಜಿಪಿಗಳ ಜತೆಗೆ 20 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.
ಉತ್ತರ ವಲಯ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಅವರನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಅಪರಾಧ) ನೇಮಕ ಮಾಡಲಾಗಿದ್ದು, ನಗರ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಎನ್.ಸತೀಶ್ ಕುಮಾರ್ ಅವರನ್ನು ರಾಜ್ಯ ಮೀಸಲು ಪೊಲೀಸ್ ಡಿಐಜಿಯಾಗಿ ನೇಮಕ ಮಾಡಲಾಗಿದೆ.
ಎಸಿಬಿ ಎಡಿಜಿಪಿಯಾಗಿದ್ದ ಅಲೋಕ್ ಮೋಹನ್ ಅವರನ್ನು ರೈಲ್ವೆ ಬೆಂಗಳೂರು ವಲಯದ ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಿರುವ ಸರ್ಕಾರ, ಈ ಹುದ್ದೆಗೆ ಯಾರನ್ನೂ ನೇಮಿಸಿಲ್ಲ. ಲೋಕಾಯುಕ್ತ ಎಡಿಜಿಪಿಯಾಗಿದ್ದ ಸಂಜಯ್ ಸಹಾಯ್ ಅವರನ್ನು ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ.
ಅರಣ್ಯ ವಿಭಾಗದ ಎಡಿಜಿಪಿಯಾಗಿದ್ದ ಡಾ.ಅಲಿಕನಾ ಎಸ್.ಮೂರ್ತಿಗೆ ಲೋಕಾಯುಕ್ತ ಎಡಿಜಿಪಿ ಹುದ್ದೆ ನೀಡಲಾಗಿದೆ.
ಉಳಿದಂತೆ ಪಿ.ಎಸ್.ಸಂಧು- ಸಂಚಾರ ಮತ್ತು ರಸ್ತೆಸುರಕ್ಷತಾ ಆಯುಕ್ತರು, ಬೆಂಗಳೂರು; ಡಾ.ಪಿ.ರವೀಂದ್ರನಾಥ್- ಎಡಿಜಿಪಿ, ಅರಣ್ಯ ವಿಭಾಗ, ಬೆಂಗಳೂರು;ಸಂದೀಪ್ ಪಾಟೀಲ್- ಜಂಟಿ ಆಯುಕ್ತರು, ನಗರ ಸಶಸOಉ ಮೀಸಲು ಪಡೆ, ಬೆಂಗಳೂರು; ಡಾ.ಪಿ.ಎಸ್.ಹರ್ಷ-ಡಿಐಜಿ, ಬಂದೀಖಾನೆ ವಿಭಾಗ, ಬೆಂಗಳೂರು; ಕೆ.ಟಿ.ಬಾಲಕೃಷ್ಣ- ಎಸ್‌ಪಿ,ಗುಪ್ತಚರ ವಿಭಾಗ (ಆಡಳಿತ),ಬೆಂಗಳೂರು; ಪಿ.ರಾಜೇಂದ್ರ ಪ್ರಸಾದ್-ಎಸ್‌ಪಿ, ವೈರ್‌ಲೆಸ್ ವಿಭಾಗ, ಬೆಂಗಳೂರು; ಡಾ.ರಾಮ್‌ನಿವಾಸ್ ಸಪೆಟ್- ಎಸ್‌ಪಿ, ಎಸಿಬಿ, ಬೆಂಗಳೂರು;ಇದಾ ಮಾರ್ಟಿನ್ ಮಾರ್ಬಾನಿಯಾಂಗ್- ಡಿಸಿಪಿ, ಪಶ್ಚಿಮವಿಭಾಗ, ಬೆಂಗಳೂರು.
ಡಾ.ಭೀಮಾಶಂಕರ್- ಎಸ್‌ಪಿ, ರೈಲ್ವೆ, ಬೆಂಗಳೂರು;ಜಿ.ರಾಧಿಕಾ- ಸಹಾಯಕ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕರು, ಡಿಜಿಪಿ ಕಚೇರಿ, ಬೆಂಗಳೂರು;ಹನುಮಂತರಾಯ- ಎಸ್‌ಪಿ, ಯಾದಗಿರಿ; ಎಸ್.ಗಿರೀಶ್-ಡಿಸಿಪಿ (ಅಪರಾಧ), ಬೆಂಗಳೂರು; ಡಾ.ಎ.ಎನ್.ಪ್ರಕಾಶ್‌ಗೌಡ- ಎಸ್‌ಪಿ, ಹಾಸನ;ಕೆ.ವಿ.ಜಗದೀಶ್- ಡಿಸಿಪಿ, ಪೂರ್ವ ವಿಭಾಗ, ಸಂಚಾರ, ಬೆಂಗಳೂರು; ಎನ್.ಚೈತ್ರಾ-ಎಸ್‌ಪಿ,ನಾಗರಿಕ ಹಕ್ಕುಗಳ ನಿರ್ದೇಶನಾಲಯ, ಬೆಂಗಳೂರು.