Advertisement

State Govt;ಕಾರಾಗೃಹ ಇಲಾಖೆಗೆ ಮೇಜರ್‌ ಸರ್ಜರಿ: 43 ಮಂದಿ ಜೈಲು ಅಧಿಕಾರಿ, ಸಿಬಂದಿ ವರ್ಗಾವಣೆ

12:05 AM Sep 14, 2024 | Team Udayavani |

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಹಾಗೂ ರೌಡಿಶೀಟರ್‌ ವಿಲ್ಸನ್‌ಗಾರ್ಡನ್‌ ನಾಗನಿಗೆ ವಿಶೇಷ ಆತಿಥ್ಯ ಕಲ್ಪಿಸಿದ ಘಟನೆ ಬೆಳಕಿಗೆ ಬಂದ ಬಳಿಕ ಕಾರಾಗೃಹ ಇಲಾಖೆ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿತ್ತು. ಈ ಬೆನ್ನಲ್ಲೇ ಕಾರಾಗೃಹ ಮತ್ತು ಸುಧಾರಣ ಇಲಾಖೆಗೆ ಮೇಜರ್‌ ಸರ್ಜರಿ ಮಾಡಲಾಗಿದೆ.

Advertisement

ಆಡಳಿತಾತ್ಮಕ ದೃಷ್ಟಿಯಿಂದ ಕಾರಾಗೃಹ ಮತ್ತು ಸುಧಾರಣ ಇಲಾಖೆಯ ರಾಜ್ಯದ ವಿವಿಧ ಕಾರಾಗೃಹಗಳ ಜೈಲರ್‌ಗಳು, ಮುಖ್ಯ ವೀಕ್ಷಕರು, ವೀಕ್ಷಕರು, ವಾರ್ಡರ್‌ ಸೇರಿ 43 ಮಂದಿಯನ್ನು ಏಕಕಾಲಕ್ಕೆ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.

ಜೈಲರ್‌ ಶಂಭು ಷಣ್ಮುಖಪ್ಪ ವೆನ್ನಾಲ- ಕೇಂದ್ರ ಕಾರಾಗೃಹ ಬೆಂಗಳೂರು, ಮುಖ್ಯ ವೀಕ್ಷಕಿ ಸುಮಿತ್ರಾ ಎಂ. ರಾಠೊಡ- ಕೇಂದ್ರ ಕಾರಾಗೃಹ ವಿಜಯಪುರ, ಹೆಡ್‌ ವಾರ್ಡರ್‌ ಗಣಪತಿ- ಸಾಗರ ಉಪ ಕಾರಾಗೃಹ, ಹೆಡ್‌ ವಾರ್ಡರ್‌ ಬಸವರಾಜ ಜಾಧವ- ಕೇಂದ್ರ ಕಾರಾಗೃಹ ಧಾರವಾಡ, ಹೆಡ್‌ ವಾಡರì ಪ್ರಭು- ಕೇಂದ್ರ ಕಾರಾಗೃಹ ಕಲಬುರಗಿ, ಮುಖ್ಯ ವೀಕ್ಷಕಿ ಶೈಲ ಸಿ.ಕೆ.- ಜಿಲ್ಲಾ ಕಾರಾಗೃಹ ದಾವಣಗೆರೆ, ವೀಕ್ಷಕ- ಜಿ.ಜಿ.ಮಂಜುನಾಥ- ತಾಲೂಕು ಉಪ ಕಾರಾಗೃಹ ಹುಬ್ಬಳ್ಳಿ, ವೀಕ್ಷಕ ಸಂತೋಷ್‌ ಕರಿಯಣ್ಣನವರ- ಜಿಲ್ಲಾ ಕಾರಾಗೃಹ ದಾವಣಗೆರೆ, ವೀಕ್ಷಕ ಶಿವಾನಂದ ಧನಪಾಲ್‌ ಕಾಂಬಳೆ-ಕೇಂದ್ರ ಕಾರಾಗೃಹ ವಿಜಯಪುರ, ವೀಕ್ಷಕ ಶಿವ ಲಮಾಣಿ- ಜಿಲ್ಲಾ ಕಾರಾಗೃಹ ಗದಗ, ವೀಕ್ಷಕ ನೂರಲಿ ಹುಸೇನಸಾಬ ಮುಜಾವರ-ಕೇಂದ್ರ ಕಾರಾಗೃಹ ವಿಜಯಪುರ, ವೀಕ್ಷಕ ಶಿವಕುಮಾರ್‌- ಕೇಂದ್ರ ಕಾರಾಗೃಹ ಕಲಬುರಗಿ, ವೀಕ್ಷಕ ಮಂಜುನಾಥ ಕಟಗಿ- ಹಾವೇರಿ ಜಿಲ್ಲಾಕಾರಾಗೃಹಕ್ಕೆ ವರ್ಗಾವಣೆ ಸೇರಿ ಒಟ್ಟು 43 ಮಂದಿ ಜೈಲು ಅಧಿಕಾರಿ-ಸಿಬಂದಿಯನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ವರ್ಗಾವಣೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next