Advertisement

ಚುರುಕಾದ ಪ್ರಮುಖ ಕಾಮಗಾರಿಗಳು

12:16 PM Jul 30, 2018 | |

ಮಂಜುನಾಥನಗರ ಬಳಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿರುವುದು ಜುಲೈ ತಿಂಗಳಲ್ಲಾದ ಅಭಿವೃದ್ಧಿಯ ಪ್ರಮುಖ ಬೆಳವಣಿಗೆ. ಈ ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡರೆ ಕಾರ್ಡ್‌ ರಸ್ತೆ ಸಿಗ್ನಲ್‌ μÅà ಆಗಲಿದೆ. ಇದರೊಂದಿಗೆ ಎರಡನೇ ಹಂತದ ಮೆಟ್ರೋ ಕಾಮಗಾರಿಗೂ ವೇಗ ದೊರೆತಿದೆ. ಓಕಳಿಪುರ ಅಷ್ಟಪಥ ಬಳಿ ಇರುವ ಅಂಡರ್‌ಪಾಸ್‌ನಲ್ಲಿ ಪೈಪ್‌ಗ್ಳ ಅಳವಡಿಕೆ ಕಾರ್ಯ ಮುಗಿದಿದ್ದು, ಇನ್ನುಮುಂದೆ ಅಲ್ಲಿ ಮಳೆ ನೀರು ನಿಲ್ಲುವುದಿಲ್ಲ  ಎಂದು ಇಂಜಿನಿಯರ್‌ಗಳು ಭರವಸೆ ನೀಡಿದ್ದಾರೆ.

Advertisement

ಯೋಜನೆ – 1
ಯೋಜನೆ: ಈಜೀಪುರ ಮುಖ್ಯರಸ್ತೆ ಮೇಲ್ಸೇತುವೆ 
ವಿವರ: ಕೋರಮಂಗಲದ 100 ಅಡಿ ಮುಖ್ಯ ರಸ್ತೆಯಲ್ಲಿರುವ ಈಜೀಪುರ ಮುಖ್ಯರಸ್ತೆ – ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಸೋನಿ ವರ್ಲ್ಡ್ ಜಂಕ್ಷನ್‌ ಮಾರ್ಗವಾಗಿ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಇದಾಗಿದ್ದು, ಕಾಮಗಾರಿಯಿಂದ ಒಟ್ಟು 7 ಜಂಕ್ಷನ್‌ಗಳು ದಟ್ಟಣೆ ಮುಕ್ತವಾಗಲಿವೆ. 
ಕಾರ್ಯಾದೇಶ ನೀಡಿದ ದಿನಾಂಕ: 04-05-2017
ಕಾಮಗಾರಿ ಆರಂಭ ದಿನಾಂಕ: 24 ಜುಲೈ 2017
ಕಾಮಗಾರಿ ಅವಧಿ: 30 ತಿಂಗಳು
ಈವರೆಗಿನ ಪ್ರಗತಿ: ಶೇ.15
ಅಂದಾಜು ವೆಚ್ಚ: 214 ಕೋಟಿ ರೂ.
ಯೋಜನಾ ವೆಚ್ಚ: 203 ಕೋಟಿ ರೂ.
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: ಜನವರಿ 2020
ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಪ್ರಗತಿ: ಕೇಂದ್ರೀಯ ಸದನ ಜಂಕ್ಷನ್‌ನಿಂದ ಸೋನಿ ವರ್ಲ್ಡ್ ಜಂಕ್ಷನ್‌ವರೆಗೆ ಮೇಲ್ಸೇತುವೆಗಾಗಿ ಪಿಲ್ಲರ್‌ಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ. 
ವಸ್ತುಸ್ಥಿತಿ: ಈಜೀಪುರ ಮುಖ್ಯರಸ್ತೆಯ ಮೇಲ್ಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆ ವಿಭಜಕದಲ್ಲಿ ಮೇಲ್ಸೇತುವೆಗಾಗಿ ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಹತ್ತಾರು ಕಡೆಗಳಲ್ಲಿ ಈಗಾಗಲೇ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಕಾಮಗಾರಿಯಿಂದ ಈ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. 

ಮೇಲ್ಸೇತುವೆ ನಿರ್ಮಾಣಕ್ಕಾಗಿ ಮಣ್ಣಿನ ಪರೀಕ್ಷೆ ಮುಗಿದ ಕಡೆಗಳಲ್ಲಿ ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದ್ದು, ಕೆಲವು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಪಿಲ್ಲರ್‌ಗಳ ನಿರ್ಮಾಣಕ್ಕೆ ಕಬ್ಬಿಣದ ಉಪಕರಣಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾಹಿತಿ ನೀಡಿದರು. 

ಯೋಜನೆ – 2
ಯೋಜನೆ:
ಮುತ್ತುರಾಜ ಜಂಕ್ಷನ್‌ ಅಂಡರ್‌ ಪಾಸ್‌ 
ವಿವರ: ಸಿಲ್ಕ್ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್‌, ಫ‌ುಡ್‌ ವರ್ಲ್ಡ್ ಜಂಕ್ಷನ್‌ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 
ಕಾರ್ಯಾದೇಶ ನೀಡಿದ ದಿನಾಂಕ: 01 ಸೆಪ್ಟಂಬರ್‌ 2015
ಕಾಮಗಾರಿ ಆರಂಭ ದಿನಾಂಕ: ಜನವರಿ 2016
ಕಾಮಗಾರಿ ಅವಧಿ: 18 ತಿಂಗಳು
ಈವರೆಗಿನ ಪ್ರಗತಿ: ಶೇ.35
ಅಂದಾಜು ವೆಚ್ಚ: 190 ಕೋಟಿ ರೂ.
ಯೋಜನಾ ವೆಚ್ಚ: 154.42 ಕೋಟಿ ರೂ. 
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 31 ಡಿಸೆಂಬರ್‌ 2018
ಗುತ್ತಿಗೆದಾರ: ಎಂವಿಆರ್‌ ಇನಾ#† ಪ್ರಾಜೆಕ್ಟ್$Õ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಪ್ರಗತಿ: ಅಂಡರ್‌ಪಾಸ್‌ಗಾಗಿ ಮಣ್ಣು ಅಗೆಯಲಾಗುತ್ತಿದ್ದು, ಬೃಹದಾಕಾರದ ಬಂಡೆ ಕಾಮಗಾರಿಗೆ ಅಡ್ಡ ಬಂದ ಪರಿಣಾಮ ಕಾಮಗಾರಿಯ ವೇಗ ಕಡಿಮೆಯಾಗಿದೆ. ಗುತ್ತಿಗೆದಾರರು ಕಂಟ್ರೋಲ್ಡ್‌ ಬ್ಲಾಸ್ಟಿಂಗ್‌ ಮೂಲಕ ಬಂಡೆ ತೆರವು ಕಾರ್ಯಕೈಗೊಂಡಿದ್ದಾರೆ. 
ವಸ್ತುಸ್ಥಿತಿ: ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಉದ್ದೇಶದಿಂದ ಸಂಪೂರ್ಣ ರಸ್ತೆ ಬಂದ್‌ ಮಾಡಲಾಗಿದೆ. ಆದರೆ, ಬೃಹದಾಕಾರದ ಬಂಡೆ ಸಿಕ್ಕಿರುವುದು ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ. ಅದರ ನಡುವೆಯೂ 140 ಮೀಟರ್‌ ಉದ್ದದ ಅಂಡರ್‌ಪಾಸ್‌ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ. 

ಕಾಮಗಾರಿಗೆ ಅಡ್ಡ ಬಂದಿರುವ ಬಂಡೆಯನ್ನು ಕಂಟ್ರೋಲ್‌ ಬ್ಲಾಸ್ಟಿಂಗ್‌ ಮೂಲಕ ತೆರವುಗೊಳಿಸಲಾಗುತ್ತಿದ್ದು, ಮಣ್ಣು ಅಗೆದಿರುವ ಕಡೆಗಳಲ್ಲಿ ಅಂಡರ್‌ಪಾಸ್‌ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. 

Advertisement

ಯೋಜನೆ – 3
ಯೋಜನೆ: ಮಂಜುನಾಥ ನಗರ ಮೇಲ್ಸೇತುವೆ 
ವಿವರ: ಸಿಗ್ನಲ್‌ ಮುಕ್ತ ಕಾರಿಡಾರ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಶ್ಚಿಮ ಕಾರ್ಡ್‌ ರಸ್ತೆಯ ಬಸವೇಶ್ವರ ನಗರ, ಮಂಜುನಾಥ ನಗರ ಹಾಗೂ ಶಿವನಗರದಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಯೋಜನೆಯಿಂದ ಕಾರ್ಡ್‌ ರಸ್ತೆ ಸಂಪೂರ್ಣ ಸಿಗ್ನಲ್‌ ಮುಕ್ತವಾಗಲಿದೆ. 
ಕಾರ್ಯಾದೇಶ ನೀಡಿದ ದಿನಾಂಕ: 14 ಮಾರ್ಚ್‌ 2016
ಕಾಮಗಾರಿ ಆರಂಭ ದಿನಾಂಕ: 18 ಮಾರ್ಚ್‌ 2016
ಕಾಮಗಾರಿ ಅವಧಿ: 18 ತಿಂಗಳು 
ಈವರೆಗಿನ ಪ್ರಗತಿ: ಶೇ.95
ಅಂದಾಜು ವೆಚ್ಚ: 78.64 ಕೋಟಿ ರೂ.
ಯೋಜನಾ ವೆಚ್ಚ: 89.86 ಕೋಟಿ ರೂ. 
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 17 ಸೆಪ್ಟಂಬರ್‌ 2017
ಗುತ್ತಿಗೆದಾರ: ಎಂ.ವೆಂಕಟರಾವ್‌ ಇನಾ#† ಪ್ರಾಜೆಕ್ಟ್$Õ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಪ್ರಗತಿ: ಮೇಲ್ಸೇತುವೆಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಿರುವ ಅಧಿಕಾರಿಗಳು ಬೀದಿ ದೀಪ, ಲೇನ್‌ ಮಾರ್ಕ್‌ ಮಾಡುವ ಕೆಲಸದಲ್ಲಿ ತೊಡಗಿದ್ದು, ಮೇಲ್ಸೇತುವೆಗೆ ಬಳಸಲಾಗಿದ್ದ ಉಪಕರಣಗಳನ್ನು ತೆರವುಗೊಳಿಸುತ್ತಿದ್ದಾರೆ. 
ವಸ್ತುಸ್ಥಿತಿ: ಮಂಜುನಾಥ ನಗರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ದಿನಾಂಕ ನಿಗದಿಯಾಗದ ಹಿನ್ನೆಲೆಯಲ್ಲಿ ಮೇಲ್ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. 

ಮಂಜುನಾಥ ನಗರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಆ ಹಿನ್ನೆಲೆಯಲ್ಲಿ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಿದ್ದು, ಲೇನ್‌ ಮಾರ್ಕಿಂಗ್‌, ಬೀದಿ ದೀಪ ಅಳವಡಿಕೆಯಂತಹ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದು ಸಹಾಯಕ ಎಂಜಿನಿಯರ್‌ ಹೇಳಿದರು. 

ಯೋಜನೆ – 4
ಯೋಜನೆ: ಓಕಳಿಪುರ ಜಂಕ್ಷನ್‌ ಅಷ್ಟಪಥ
ವಿವರ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್‌ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್‌ ಮುಕ್ತವಾಗಲಿದೆ.
ಕಾಮಗಾರಿ ಆರಂಭ ದಿನಾಂಕ: 14 ಜುಲೈ 2016
ಕಾಮಗಾರಿ ಅವಧಿ: 18 ತಿಂಗಳು
ಈವರೆಗಿನ ಪ್ರಗತಿ: ಶೇ.76
ಯೋಜನಾ ವೆಚ್ಚ: 102.84 ಕೋಟಿ ರೂ.
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 31 ಡಿಸೆಂಬರ್‌ 2017
ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಅಪ್‌ಡೇಟ್‌: ಅಂಡರ್‌ಪಾಸ್‌ನಲ್ಲಿ ಮಳೆನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೈಗೆತ್ತಿಕೊಂಡಿದ್ದ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಕೋಡೆ ವೃತ್ತ ಹಾಗೂ ಆರ್‌.ಜೆ.ಕಲ್ಯಾಣ ಮಂಟಪದ ಬಳಿ ಕಾಂಕ್ರಿಟ್‌ ಎಲಿಮೆಂಟ್‌ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
ವಸ್ತುಸ್ಥಿತಿ: ಮಳೆನೀರು ನಿಲ್ಲದಂತೆ ಕೈಗೆತ್ತಿಕೊಂಡಿದ್ದ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳಿಸಿರುವ ಅಧಿಕಾರಿಗಳು, ಕೋಡೆ ವೃತ್ತದಲ್ಲಿ ಅಂಡರ್‌ಪಾಸ್‌ ನಿರ್ಮಿಸಲು ಉಂಟಾಗಿದ್ದ ಗೊಂದಲ ನಿವಾರಿಸಿದ್ದಾರೆ. ಅದರಂತೆ ಕಾಮಗಾರಿಗಾಗಿ ಕಟ್ಟಡವೊಂದನ್ನು ತೆರವುಗೊಳಿಸಲು ಮಾಲೀಕರ ಒಪ್ಪಿಗೆ ಸಹ ಪಡೆದುಕೊಂಡಿದ್ದಾರೆ. 

ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲದಂತೆ 60 ಮೀಟರ್‌ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಪೂರ್ಣಗೊಳಿಸಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಮಳೆಯಾದಾಗ ಮಳೆ ನೀರು ನಿಲ್ಲುವುದಿಲ್ಲ. ಇನ್ನು ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಲೂಪ್‌ 2 ಕಾಮಗಾರಿ ನಡೆಯುತ್ತಿದ್ದು, ರೈಲ್ವೆ ಹಳಿಗಳಿಗೆ ಕಾಂಕ್ರಿಟ್‌ ಎಲಿಮೆಂಟ್‌ ಅಳವಡಿಕೆ ಕಾರ್ಯ ಬಾಕಿಯಿದೆ ಎಂದು ಸಹಾಯಕ ಎಂಜಿನಿಯರ್‌ ಮಾಹಿತಿ ನೀಡಿದರು. 

ಮೆಟ್ರೋ ಅವಲೋಕನ
ಯೋಜನೆ: ನಮ್ಮ ಮೆಟ್ರೋ 2ನೇ ಹಂತ
ಒಟ್ಟಾರೆ ಯೋಜನೆ ಉದ್ದ: 72.3 ಕಿ.ಮೀ.
ವಿಸ್ತರಿಸಿದ ಮಾರ್ಗ ರೀಚ್‌-3ಸಿ: ಹೆಸರಘಟ್ಟ ಕ್ರಾಸ್‌-ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ 
ಮಾರ್ಗದ ಉದ್ದ: 3.77 ಕಿ.ಮೀ.
ಮಾರ್ಗದ ಒಟ್ಟಾರೆ ಯೋಜನೆ ವೆಚ್ಚ: 1,168.22 ಕೋಟಿ ರೂ. 
ಸಿವಿಲ್‌ ಕಾಮಗಾರಿ ಯೋಜನೆ ವೆಚ್ಚ: 298.65 ಕೋಟಿ ರೂ. 
ಕಾಮಗಾರಿ ಆರಂಭ: 2017ರ ಫೆಬ್ರವರಿ
ಕಾಮಗಾರಿ ಪ್ರಗತಿ: ಶೇ. 10-12
ಬಾಕಿ ಇರುವ ಕಾಮಗಾರಿ: ಎತ್ತರಿಸಿದ ಮಾರ್ಗದ ನಿಲ್ದಾಣ ನಿರ್ಮಾಣ, ಕಂಬಗಳ ನಿರ್ಮಾಣ, ಹಳಿಗಳ ಜೋಡಣೆ, ವಿದ್ಯುತ್‌ ಲೈನ್‌ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ.
ಪೂರ್ಣಗೊಳಿಸುವ ಗುರಿ: 2018ರ ಅಂತ್ಯಕ್ಕೆ

ವಿಸ್ತರಿಸಿದ ಮಾರ್ಗ ರೀಚ್‌-4ಬಿ: ಯಲಚೇನಹಳ್ಳಿ-ಅಂಜನಾಪುರ
ಮಾರ್ಗದ ಉದ್ದ: 6.52 ಕಿ.ಮೀ.
ಮಾರ್ಗದ ಒಟ್ಟಾರೆ ಯೋಜನೆ ವೆಚ್ಚ: 1,765 ಕೋಟಿ ರೂ. 
ಸಿವಿಲ್‌ ಕಾಮಗಾರಿ ಯೋಜನೆ ವೆಚ್ಚ: 508.86 ಕೋಟಿ ರೂ. 
ಕಾಮಗಾರಿ ಆರಂಭ: 2016ರ ಮೇ
ಕಾಮಗಾರಿ ಪ್ರಗತಿ: ಶೇ. 65 (ಸಿವಿಲ್‌ ಕಾಮಗಾರಿ ಮಾತ್ರ)  
ಬಾಕಿ ಇರುವ ಕಾಮಗಾರಿ: ಹಳಿಗಳ ಜೋಡಣೆ, ವಿದ್ಯುತ್‌ ಲೈನ್‌ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ.
ಪೂರ್ಣಗೊಳಿಸುವ ಗುರಿ: 2018ರ ಅಂತ್ಯಕ್ಕೆ

ವಸ್ತುಸ್ಥಿತಿ- ತಡವಾಗಿ ಚಾಲನೆಗೊಂಡ ತುಮಕೂರು ರಸ್ತೆ ಮೆಟ್ರೋ ಕಾಮಗಾರಿ ನಿಧಾನವಾಗಿ ಪಿಕ್‌ಅಪ್‌ ತೆಗೆದುಕೊಂಡಿದೆ. ಈಗಾಗಲೇ ಕಂಬಗಳು ಎದ್ದುನಿಂತಿವೆ. ವಯಾಡಕ್ಟ್ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ರಸ್ತೆ ಬಳಸಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಪ್ರಾಧಿಕಾರದ ಅನುಮತಿ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.

ಉದ್ದೇಶಿತ ಮಾರ್ಗದಲ್ಲಿ 54 ಸ್ವತ್ತುಗಳ ಪೈಕಿ 28 ಸ್ವತ್ತುಗಳನ್ನು ನೆಲಸಮಗೊಳಿಸಲಾಗಿದೆ. ಇನ್ನು ಕನಕಪುರ ರಸ್ತೆ ಮಾರ್ಗದ ಕಾಮಗಾರಿ ಪ್ರಗತಿ ತ್ವರಿತವಾಗಿ ಸಾಗಿದೆ. ಕಂಬಗಳನ್ನು ನಿರ್ಮಿಸಿ, ವಯಾಡಕ್ಟ್ಗಳನ್ನೂ ಹಾಕಲಾಗಿದೆ. ನಿಲ್ದಾಣಗಳು ಪೈಲಿಂಗ್‌, ಕಾನ್‌ಕೋರ್ಸ್‌ ಸ್ಲಾéಬ್‌, ಟ್ರ್ಯಾಕ್‌ ಲೆವೆಲ್‌ ಸ್ಲಾéಬ್‌ಗಳು ಬಹುತೇಕ ಪೂರ್ಣಗೊಂಡಿವೆ.

ವಯಾಡಕ್ಟ್ ರಚನೆಗಳಿಗಾಗಿ 1,028 ಪೈಲ್‌ಗ‌ಳಲ್ಲಿ 858 ಪೂರ್ಣಗೊಂಡಿವೆ. ಅದೇ ರೀತಿ, ನಿಲ್ದಾಣಗಳ 763 ಪೈಲ್‌ಗ‌ಳ ಪೈಕಿ 746 ಪೈಲ್‌ಗ‌ಳ ಅಳವಡಿಕೆ ಮುಗಿದಿದೆ. ಅಷ್ಟೇ ಅಲ್ಲ, ಈಗಾಗಲೇ ಫ್ಲೋರಿಂಗ್‌ಗೆ (ಪೇಂಟಿಂಗ್‌, ಫಿನಿಷಿಂಗ್‌) ಟೆಂಡರ್‌ ಕೂಡ ಕರೆಯಲಾಗಿದೆ. ಆದರೆ, ಇಲ್ಲಿಂದ ಕಾಮಗಾರಿ ಮುಂದೆ ಸಾಗುತ್ತಿಲ್ಲ. 

ವಿಳಂಬಕ್ಕೆ ಕಾರಣ- ಮೆಟ್ರೋ ಯೋಜನೆ ವ್ಯವಸ್ಥಾಪಕ ನಿರ್ದೇಶಕರಿಗೆ ಹೊಸದು. ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ತಿಂಗಳ ಮೇಲಾದರೂ ರೈಲ್ವೆ ಕಂಬಿಗಳ ಪೂರೈಕೆಗೆ ಟೆಂಡರ್‌ ಕರೆದಿಲ್ಲ.

ಹಳಿಗಳ ಜೋಡಣೆಗೂ ಟೆಂಡರ್‌ ಕರೆದಿಲ್ಲ. ಈಗಷ್ಟೇ ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ. ಬಿಎಂಆರ್‌ಸಿಯು ಈ ಕಾಮಗಾರಿ ಪೂರ್ಣಗೊಳಿಸಲು ವರ್ಷದ ಗುರಿ ಇಟ್ಟುಕೊಂಡಿದೆ. ಸದ್ಯದ ಪ್ರಗತಿಯನ್ನು ನೋಡಿದರೆ, ನಿಗದಿತ ಅವಧಿಯಲ್ಲಿ ಇದು ಪೂರ್ಣಗೊಳ್ಳುವುದು ಅನುಮಾನ. 

ಮಾಹಿತಿ: ವೆಂ. ಸುನೀಲ್‌ ಕುಮಾರ್‌, ವಿಜಯ್‌ಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next