Advertisement

ಅಹ್ಮದಾಬಾದ್‌ ಸ್ಪೇಸ್‌ ಆ್ಯಪ್ಲಿಕೇಶನ್‌ ಸೆಂಟರ್‌ನಲ್ಲಿ ಭಾರೀ ಬೆಂಕಿ

05:09 PM May 03, 2018 | udayavani editorial |

ಅಹ್ಮದಾಬಾದ್‌ : ಇಲ್ಲಿನ ಇಸ್ರೋ ಸ್ಪೇಸ್‌ ಆ್ಯಪ್ಲಿಕೇವನ್‌ ಸೆಂಟರ್‌ನಲ್ಲಿ ಇಂದು ಗುರುವಾರ ಭಾರೀ ಬೆಂಕಿ ಅವಘಡ ಸಂಭವಿಸಿರುವುದು ವರದಿಯಾಗಿದೆ. 

Advertisement

ಅತ್ಯಮೂಲ್ಯ ಯಂತ್ರೋಪಕರಣಗಳನ್ನು ಇರಿಸಲಾಗಿರುವ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಕಳವಳಕ್ಕೆ ಕಾರಣವಾಗಿದೆ.

ಬೆಂಕಿ ಅವಘಡದ ಸುದ್ದಿ ತಿಳಿದೊಡನೆಯೇ ಏಳು ಅಗ್ನಿ ಶಾಮಕಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ಅವಘಡದಲ್ಲಿ ಜೀವ ಹಾನಿ ಆದ ವರದಿಗಳಿಲ್ಲ; ಆದರೆ ಸಿಐಎಸ್‌ಎಫ್ ಸಿಬಂದಿಯೋರ್ವರು ಗಾಯಗೊಂಡಿರುವುದಾಗಿ ಗೊತ್ತಾಗಿದೆ. 

ಬೆಂಕಿಯನ್ನು ಪೂರ್ತಿಯಾಗಿ ನಂದಿಸಲು ಕನಿಷ್ಠ ಎರಡು-ಮೂರು ತಾಸುಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next