ಕೋಝಿಕೋಡ್(ಕೇರಳ): ಮಹತ್ವದ ಕಾರ್ಯಾಚರಣೆಯಲ್ಲಿ ಕೇರಳದ ಕಾರಿಪುರ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಕೇನ್, ಹೆರಾಯಿನ್ ಸೇರಿದಂತೆ ಬರೋಬ್ಬರಿ 44 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಪ್ರಯಾಣಿಕರೊಬ್ಬರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಡೈರೆಕ್ಟೋರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್ ಐ) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Woman: ಚಲಿಸುತ್ತಿರುವ ರೈಲು ಕೆಳಗೆ ಸಿಲುಕಿ ಸಾವು ಗೆದ್ದ ಮಹಿಳೆ
ಉತ್ತರಪ್ರದೇಶದ ಮುಜಾಫರ್ ನಗರದ ನಿವಾಸಿ ರಾಜೀವ್ ಕುಮಾರ್ ಎಂಬಾತನಿಂದ ಮೂರುವರೆ ಕೆ.ಜಿ ಕೊಕೇನ್ ಮತ್ತು 1.3 ಕೆಜಿ ಹೆರಾಯಿನ್ ಅನ್ನು ಡಿಆರ್ ಐನ ಕೊಚ್ಚಿನ ವಲಯ ಘಟಕದ ಕ್ಯಾಲಿಕಟ್ ಪ್ರಾದೇಶಿಕ ಘಟಕ ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ಆರೋಪಿ ರಾಜೀವ್ ಕುಮಾರ್ ನಿಂದ ವಶಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಮೊತ್ತ 44 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ವರದಿ ಹೇಳಿದೆ.
ಏರ್ ಅರೇಬಿಯಾ ವಿಮಾನದಲ್ಲಿ ರಾಜೀವ್ ಕುಮಾರ್ ಕೀನ್ಯಾದ ನೈರೋಬಿಯಿಂದ ಶಾರ್ಜಾದ ಮೂಲಕ ಕೇರಳಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯಿಂದ ಒಟ್ಟು 4.08 ಕೆ.ಜಿ ಮಾದಕವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿರುದಾಗಿ ಅಧಿಕಅರಿಗಳು ತಿಳಿಸಿದ್ದಾರೆ.
ಆರೋಪಿ ಕೊಕೇನ್ ಮತ್ತು ಹೆರಾಯಿನ್ ಅನ್ನು ಶೂ, ಹ್ಯಾಂಡ್ ಪರ್ಸ್ ಗಳಲ್ಲಿ ಅಡಗಿಸಿಟ್ಟು ಸಾಗಿಸಲು ಯತ್ನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಡ್ರಗ್ಸ್ ಕಳ್ಳಸಾಗಣೆಯ ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಯುತ್ತಿದೆ ಎಂದು ಡಿಆರ್ ಐ ತಿಳಿಸಿದೆ.