ವಾಷಿಂಗ್ಟನ್ : ಪಾಕಿಸ್ಥಾನಕ್ಕೆ ಸರ್ವ ಬಗೆಯ ಆರ್ಥಿಕ ನೆರವನ್ನು ನಿಲ್ಲಿಸುವ ಮಸೂದೆಯೊಂದನ್ನು ಅಮೆರಿಕದ ಸಂಸತ್ತಿನಲ್ಲಿ ನಿನ್ನೆ ಮಂಗಳವಾರ ಮಂಡಿಸಲಾಗಿದ್ದು ಇದು ಇಸ್ಲಾಮಾಬಾದ್‌ಗೆ ಒದಗಿರುವ ಭಾರೀ ದೊಡ್ಡ ಹಿನ್ನಡೆ ಎಂದು ತಿಳಿಯಲಾಗಿದೆ.
ಟ್ರಂಪ್ ಆಡಳಿತೆ ಕಳೆದ ತಿಂಗಳಲ್ಲಿ ಪಾಕಿಸ್ಥಾನಕ್ಕೆ ಸಿಗಲಿದ್ದ 255 ಬಿಲಿಯ ಡಾಲರ್ ಮಿಲಿಟರಿ ನೆರವನ್ನು ಅಮಾನತು ಮಾಡಿದ ಬಳಿಕದಲ್ಲಿ ಕಂಡುಬಂದಿರುವ ಗಂಭೀರ ವಿದ್ಯಮಾನವಾಗಿದೆ.
ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯಾಚರಿಸುವ ತಾಲಿಬಾನ್, ಹಕ್ಕಾನಿ ಮತ್ತಿತರ ಉಗ್ರ ಸಂಘಟನೆಗೆ ಸರ್ವ ರೀತಿಯ ನೆರವು, ಪೋಷಣೆ ನೀಡುತ್ತಿರುವುದನ್ನು ನಿಲ್ಲಿಸುವಂತೆ ಎಷ್ಟು ಬಾರಿ ಕೇಳಿಕೊಂಡರೂ ಪಾಕಿಸ್ಥಾನ ಅದನ್ನು ನಿಲ್ಲಸಿದಿರುವುದು ಅಮೆರಿಕಕ್ಕೆ ಭಾರೀ ನಿರಾಶೆ, ಅಸಂತೃಪ್ತಿ ಉಂಟಾಗಿದೆ.
ಪಾಕಿಸ್ಥಾನಕ್ಕೆ ಸಕಲ ಬಗೆಯ ಆರ್ಥಿಕ ನೆರವನ್ನು ನಿಲ್ಲಿಸುವ ಮಸೂದೆಗೆ ಅಮೆರಿಕದ ಪ್ರತಿನಿಧಿ ಸಭೆಯು ಸೆನೆಟನ್ನು ಸೇರಿಕೊಂಡಿರುವುದು ಮಂಗಳವಾರದ ಮಹತ್ತರ ವಿದ್ಯಮಾನವಾಗಿದೆ ಎಂದು ಪಾಕಿಸ್ಥಾನ ರಾಷ್ಟ್ರೀಯ ದೈನಿಕ ಡಾನ್ ವರದಿ ಮಾಡಿದೆ.
ಪಾಕಿಗೆ ಎಲ್ಲ ಆರ್ಥಿಕ ನೆರವನ್ನು ನಿಲ್ಲಿಸುವ ಮಸೂದೆಯನ್ನು ದಕ್ಷಿಣ ಕ್ಯಾಲಿಪೋರ್ನಿಯದ ಸಂಸದ ಮಾರ್ಕ್ ಸ್ಯಾನ್‌ಫರ್ಡ್ ಮತ್ತು ಕೆಂಟುಕಿ ಸಂಸದ ಥಾಮಸ್ ಮ್ಯಾಸ್ಸೀ ಅವರು ನಿನ್ನೆ ಸದನದಲ್ಲಿ ಮಂಡಿಸಿದರು.