Advertisement

ಗುಂಡೇಟಿನಿಂದ ಸರ್ವತ್ರ ರಕ್ಷಣೆ : ಬುಲೆಟ್‌ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಮೇಜರ್‌

10:03 AM Dec 26, 2019 | Hari Prasad |

ಹೊಸದಿಲ್ಲಿ: ಮರೆಯಿಂದ ಹಾರಿ ಬರುವ ಗುಂಡೇಟಿನಿಂದ ಯೋಧರು ತಪ್ಪಿಸಿಕೊಳ್ಳಲು ಭಾರತೀಯ ಸೇನೆ ಅಧಿಕಾರಿಯೊಬ್ಬರು ವಿಶೇಷ ಬುಲೆಟ್‌ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ್ದಾರೆ. ಮೇಜರ್‌ ಅನೂಪ್‌ ಮಿಶ್ರಾ ತಯಾರಿಸಿರುವ ಈ ಬುಲೆಟ್‌ ಪ್ರೂಫ್ ಜಾಕೆಟ್‌ಗೆ ‘ಸರ್ವತ್ರ’ ಎಂದು ಹೆಸರಿಸಲಾಗಿದೆ. 10 ಮೀಟರ್‌ ದೂರದಿಂದ ಹಾರಿ ಬರುವ ಗುಂಡಿನಿಂದಲೂ (ಸ್ನೈಪರ್‌ ದಾಳಿಯ ಗುಂಡು) ಪಾರಾಗುವಂತೆ ರಕ್ಷಾ ಕವಚ ತಯಾರಿಸಲಾಗಿದೆ.

Advertisement

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಕಡೆಯಿಂದ ಗುಂಡು ಹಾರಿದಾಗ ನಮ್ಮ ಯೋಧರಿಗೆ ಈ ಸರ್ವತ್ರ ಸಂಪೂರ್ಣ ರಕ್ಷಣೆ ನೀಡಲಿದೆ. ಪುಣೆಯ ಮಿಲಿಟರಿ ಎಂಜಿನಿಯರ್‌ ಕಾಲೇಜಿನಲ್ಲಿ ಈ ಮಾದರಿಯ ಜಾಕೆಟ್‌ ಅಭಿವೃದ್ಧಿಪಡಿಸಿದ್ದು, ಕುತ್ತಿಗೆಯಿಂದ ಪಾದದವರೆಗೆ ರಕ್ಷಣೆ ನೀಡಲಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

ಸ್ವದೇಶಿ ಬುಲೆಟ್‌ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿರುವ ಮಿಶ್ರಾ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಆರ್ಮಿ ಡಿಸೈನ್‌ ಬ್ಯೂರೋ ಎಕ್ಸ್‌ಲೆನ್ಸ್‌ ಅವಾರ್ಡ್‌ ಪ್ರದಾನ ಮಾಡಿದ್ದಾರೆ. ಸೇನೆಯ ಯೋಧರಿಗೆ ಇದೇ ಮಾದರಿಯ ಜಾಕೆಟ್‌ ಒದಗಿಸಲು ಸೇನೆಯು ಟೆಂಡರ್‌ ಕರೆಯುವ ನಿರೀಕ್ಷೆ ಇದೆ.

ಈ ವಿಭಿನ್ನ ಜಾಕೆಟ್‌ ಅಭಿವೃದ್ಧಿಪಡಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅನೂಪ್‌ ಮಿಶ್ರಾ, ಕಾರ್ಯಾಚರಣೆಯೊಂದರಲ್ಲಿ ಬುಲೆಟ್‌ ಹಾರಿ ಬಂದು ತಮಗೆ ತಗುಲಿತು. ಬುಲೆಟ್‌ ಪ್ರೂಫ್ ಜಾಕೆಟ್‌ ಧರಿಸಿದ್ದರೂ ಗಂಭೀರ ಗಾಯಗೊಂಡು, ಕೂದಲೆಳೆ ಅಂತರದಿಂದ ಪಾರಾದೆ. ಹೀಗಾಗಿ ಸಂಪೂರ್ಣ ರಕ್ಷಣೆ ನೀಡುವಂತೆ ನಾನೇ ಈ ಜಾಕೆಟ್‌ ತಯಾರಿಸಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next