Advertisement

ಮನ ಮಟ್ಟುವ ಮೈಥಿಲಿಯ ಸೀತೆ

12:25 PM Nov 11, 2017 | Team Udayavani |

ಈಗಾಗಲೇ 23 ಪ್ರದರ್ಶನ ಕಂಡಿರುವ ಏಕವ್ಯಕ್ತಿ ನಾಟಕ “ಮೈಥಿಲಿ’ ರಾಜಧಾನಿಯಲ್ಲಿ ಮತ್ತೂಮ್ಮೆ ವೇದಿಕೆ ಮೇಲೆ ತೆರೆದುಕೊಳ್ಳುತ್ತಿದೆ. ಶಿವಮೊಗ್ಗದ ಸ್ಫೂರ್ತಿ ಸಾಂಸ್ಕೃತಿಕ ಸಂಸ್ಥೆ ಪ್ರಸ್ತುತಪಡಿಸುವ ಈ ನಾಟಕದಲ್ಲಿ ಸುಪ್ರಿಯಾ ಎಸ್‌. ರಾವ್‌ ಅವರ ಏಕವ್ಯಕ್ತಿ ಅಭಿನಯ, ಮಾತುಗಾರಿಕೆ ಪ್ರೇಕ್ಷಕರನ್ನು ರಂಜಿಸಲಿದೆ.

Advertisement

ರಚನೆ, ವಿನ್ಯಾಸ, ನಿರ್ದೇಶನ ಡಾ. ಸಾಸ್ವೆಹಳ್ಳಿ ಸತೀಶ್‌ ಅವರದು. ಸಂತೋಷ್‌ ಕಟ್ಟೆ ಸಂಗೀತ ನಾಟಕಕ್ಕಿದ್ದು, ಹರಿಗೆ ಗೋಪಾಲ ಸ್ವಾಮಿ ಬೆಳಕು ಸಂಯೋಜಿಸಿದ್ದಾರೆ. ಸೀತೆಯ ಜೀವನದಲ್ಲಿನ ತಲ್ಲಣಗಳು, ಆದ ಅನ್ಯಾಯಗಳನ್ನು ಪ್ರಶ್ನಿಸುತ್ತಾ, ವೀರೋಚಿತ ಘಟನೆಗಳ ಹಿಂದಿನ ಕಹಿಸತ್ಯಗಳನ್ನು ತೆರೆದಿಡುತ್ತಾ, ಮೈಥಿಲಿ ನಾಟಕದ ಸೀತೆ ಪ್ರೇಕ್ಷಕರ ಮನದಲ್ಲಿ ಕೂರುತ್ತಾಳೆ.

ಎಲ್ಲಿ?: ಕಲಾಗ್ರಾಮ, ಮಲ್ಲತ್ತಹಳ್ಳಿ
ಯಾವಾಗ?: ನ.15, ಬುಧವಾರ, ಸಂ.7
ಪ್ರವೇಶ: ಉಚಿತ 

Advertisement

Udayavani is now on Telegram. Click here to join our channel and stay updated with the latest news.

Next