ಮುಂಬಯಿ: ಕಳೆದ ವಾರ ಚಂಡಮಾರುತದ ಸಮಯದಲ್ಲಿ ತಾತ್ಕಾಲಿ ಕವಾಗಿ ಸ್ಥಗಿತಗೊಂಡಿದ್ದ ಮೂರು ಜಂಬೋ ಕೇಂದ್ರಗಳ ನಿರ್ವಹಣ ಕಾರ್ಯಗಳನ್ನು ಬಿಎಂಸಿ ಕೈಗೆತ್ತಿಕೊಂಡಿದೆ.
ಚಂಡಮಾರುತದಿಂದ ತೀವ್ರ ಹಾನಿ ಆಗಿಲ್ಲ ದಿದ್ದರೂ ಇತರ ನಿರ್ವಹಣ ಕಾರ್ಯಗಳನ್ನು ಕೈಗೊಳ್ಳಲು ನಿಗಮ ನಿರ್ಧರಿಸಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಜಂಬೋ ಕೇಂದ್ರಗಳು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ), ಮುಲುಂಡ್ ಮತ್ತು ದಹಿಸರ್‌ನಲ್ಲಿವೆ. ಆಮ್ಲಜನಕ ಮತ್ತು ವೆಂಟಿಲೇಟರ್ ಸೌಲಭ್ಯಗಳು ಸಹಿತ ರೋಗಿಗಳಿಗೆ 4,000 ಹಾಸಿಗೆಗಳ ಸಾಮರ್ಥ್ಯವನ್ನು ಈ ಮೂರು ಜಂಬೋ ಕೋವಿಡ್ ಕೇರ್ ಕೇಂದ್ರಗಳು ಹೊಂದಿವೆ.
ಇಲ್ಲಿ ದಾಖಲಾಗಿರುವ ಎಲ್ಲ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ದೈನಂದಿನ ಪ್ರಕರಣಗಳ ಪ್ರಮಾಣವೂ ಕುಸಿಯುತ್ತಿದ್ದು, ಹಾಸಿಗೆಗಳ ಬಿಕ್ಕಟ್ಟು ಉಂಟಾಗುವುದಿಲ್ಲ ಎಂದು ಹೆಚ್ಚುವರಿ ಪುರಸಭೆ ಆಯುಕ್ತ ಮತ್ತು ಸಾರ್ವಜನಿಕ ಆರೋಗ್ಯದ ಉಸ್ತುವಾರಿ ಸುರೇಶ್ ಕಾಕಾನಿ ಹೇಳಿದರು.
ಮುಂಬಯಿಯಲ್ಲಿ ಸುಮಾರು ಶೇ. 67ರಷ್ಟು ಹಾಸಿಗೆಗಳು ಖಾಲಿ ಇವೆ. ಜೂ. 1ರಂದು ಅಥವಾ ಬಳಿಕ ಈ ಸೌಲಭ್ಯವು ಪುನರಾರಂಭಗೊಳ್ಳಲಿದೆ. ನಾವು ಈ ಸಮ ಯವನ್ನು ಸೌಲಭ್ಯಗಳ ನಿರ್ವಹಣೆ ಕಾರ್ಯಕ್ಕೆ ಬಳಸುತ್ತಿದ್ದೇವೆ. ರೋಗಿಗಳು ಇದ್ದಾಗ ಅದು ಸಾಧ್ಯವಾಗಲಿಲ್ಲ. ನಾವು ಮೂಲ ಸೌಕರ್ಯವನ್ನು ನವೀಕರಿಸುತ್ತಿದ್ದೇವೆ. ಇದ ರಿಂದ ಆಮ್ಲಜನಕ ಪೂರೈಕೆ ಸುಗವಾಗುತ್ತದೆ. ಹಾಸಿಗೆ ಸಾಮರ್ಥ್ಯ ಮೊದಲಿನಷ್ಟೇ ಇರಲಿದೆ. ವಿಸ್ತರಣೆಗೆ ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ಉಪ ಮುನ್ಸಿಪಲ್ ಕಾರ್ಪೊರೇಶನ್ ಪರಾಗ್ ಮಸೂರ್ಕರ್ ಹೇಳಿದ್ದಾರೆ.
10 ತಿಂಗಳಿಗಿಂತ ಹೆಚ್ಚು ಕಾಲದಿಂದ ನಿರ್ವಹಣೆ ಮಾಡಿಲ್ಲ. ಎಸಿಯನ್ನು ಸರಿಪಡಿಸಲಾಗುತ್ತಿದ್ದು, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ
¿ದುರಸ್ತಿಗೊಳಿಸಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ಮತ್ತೆ ತೆರೆಯುವ ಯೋಜನೆ ಇದೆ ಎಂದು ಮುಲುಂಡ್ ಜಂಬೋ ಸೌಲಭ್ಯದಲ್ಲಿ ದುರಸ್ತಿ ಕಾರ್ಯಗಳ ಬಗ್ಗೆ ನಿಗಾ ವಹಿಸುತ್ತಿರುವ ಮುಲುಂಡ್‌ನ ಬಿಜೆಪಿ ಶಾಸಕ ಮಿಹಿರ್ ಕೋಟೆ ಚಾ ಹೇಳಿದ್ದಾರೆ.