Advertisement

ಶಿಕ್ಷಕ ವೃತ್ತಿಯ ಗೌರವ-ಘನತೆ- ಪಾವಿತ್ರ್ಯತೆ ಕಾಪಾಡಿಕೊಳ್ಳಿ

12:36 PM Nov 28, 2021 | Team Udayavani |

ಅಮೀನಗಡ: ವಿದ್ಯಾರ್ಥಿಗಳ ಮತ್ತು ಶಾಲೆಯ ಏಳ್ಗೆಯನ್ನೇ ಗುರಿಯಾಗಿಟ್ಟುಕೊಂಡು ದಕ್ಷ ಪ್ರಾಮಾಣಿಕ ಸಮರ್ಥ ಆಡಳಿತ ನಿರ್ವಹಿಸಿದ ನಿವೃತ್ತ ಉಪ ಪ್ರಾಚಾರ್ಯ ಎ.ಎಚ್‌.ಬೆಲ್ಲದ ಅವರ ಸೇವೆ ಅವಿಸ್ಮರಣೀಯ ಎಂದು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಡಾ| ಎಸ್‌.ಸಿ.ರಂಜಣಗಿ ಹೇಳಿದರು.

Advertisement

ಸೂಳೇಭಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್‌ ಉದ್ಘಾಟನೆ, ನಿವೃತ್ತ ಉಪ-ಪ್ರಾಚಾರ್ಯರು ಮತ್ತು ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಯ ಪಾಲನೆ, ಉತ್ತಮ ವಾಗ್ಮಿ, ಅಪಾರ ವಿಷಯ ಜ್ಞಾನದೊಂದಿಗೆ ಸಮಾಜ, ಪಾಲಕ, ವಿದ್ಯಾರ್ಥಿ ಹಾಗೂ ಸಿಬ್ಬಂದಿಯೊಂದಿಗೆ ಸೌಜನ್ಯದ ಸಂಬಂಧ ಹೊಂದಿದ್ದು ನಿವೃತ್ತ ಉಪಪ್ರಾಚಾರ್ಯ ಎ.ಎಚ್‌.ಬೆಲ್ಲದ ಗುರುಗಳ ವಿಶೇಷವಾಗಿದೆ ಎಂದರು.

ಪ್ರಾಚಾರ್ಯ ಬಿ.ಡಿ. ದೋಟಿಹಾಳ ಮಾತನಾಡಿದರು. ಸನ್ಮಾನ ಸ್ವೀಕರಿಸಿ ವಿಶ್ರಾಂತ ಉಪ-ಪ್ರಾಚಾರ್ಯ ಎ. ಎಚ್‌.ಬೆಲ್ಲದ ಮಾತನಾಡಿ, ಜೀವಗಳಿಗೆ ಜೀವನ ನೀಡುವ ಏಕೈಕ ವೃತ್ತಿ ಎಂದರೆ ಶಿಕ್ಷಕ ವೃತ್ತಿ. ಇದರಷ್ಟು ಶ್ರೇಷ್ಠವಾದ ವೃತ್ತಿ ಇನ್ನೊಂದಿಲ್ಲ. ಎಲ್ಲ ವೃತ್ತಿಗಿಂತ ಪವಿತ್ರವಾದ ವೃತ್ತಿ ಎಂದರೆ ಶಿಕ್ಷಕ ವೃತ್ತಿ. ವೃತ್ತಿಯ ಗೌರವ, ಘನತೆ, ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪ- ಪ್ರಾಚಾರ್ಯ ಹನಮಪ್ಪ ಹಾಲನ್ನವರ, ನಾಗೇಶ ಗಂಜಿಹಾಳ, ವರ್ಗಾವಣೆ‌ಗೊಂಡ ಶಿಕ್ಷಕರಾದ ಎಸ್‌. ಆರ್‌.ಎಲಿಗಾರ, ಹಿರಿಯ ಶಿಕ್ಷಕಿ ಪಿ.ಎಸ್‌.ಗಿರಿಯಪ್ಪನವರ, ಶಿಕ್ಷಕ ಮಹ್ಮದ ಇರ್ಫಾನ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next