Advertisement

ಪೌರಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಿ

04:49 PM Nov 30, 2019 | Suhan S |

ಶ್ರೀರಂಗಪಟ್ಟಣ: ಪ್ರತಿದಿನ ಕಸ ತೆರವು ಮಾಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಹೇಳಿದರು.

Advertisement

ಪುರಸಭೆ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಿಮ್ಮಿಂದ ಪಟ್ಟಣ ಸ್ವತ್ಛವಾಗಿದೆ. ಹಾಗೆ ಪಟ್ಟಣ ಸ್ವತ್ಛವಾಗಿರುವುದರಿಂದಲೇ ನಾಗರೀಕರ ಆರೋಗ್ಯ ಉತ್ತಮವಾಗಿದೆ. ಆದ್ದರಿಂದ ಪ್ರತಿದಿನ ಕಸದಲ್ಲೇ ಜೀವಿಸುವನಿಮ್ಮಗಳ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪೌರಕಾರ್ಮಿಕರು ಸ್ವತ್ಛತೆಯ ಕೆಲಸ ಮುಗಿದ ಕೂಡಲೇ ವೈಯಕ್ತಿಕ ಸ್ವತ್ಛತೆಗೂ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಆರೋಗ್ಯದಲ್ಲಿ ಏನೇ ಸಮಸ್ಯೆಗಳು ಉದ್ಭವಿಸಿದರೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಮೈಸೂರು ಅಪೋಲೋ ಆಸ್ಪತ್ರೆಯ ಡಾ.ಶುಭಾ, ಡಾ.ಅಕ್ಷತಾ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದರು. ಸಕ್ಕರೆ ಕಾಯಿಲೆ, ಬಿಪಿ, ಹೃದಯ ಸಮಸ್ಯೆ ಇತರ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಿ ಉಚಿತವಾಗಿ ಔಷಧ ವಿತರಣೆಮಾಡಲಾಯಿತು. ಪುರಸಭೆಯ ಎಂಜಿನಿಯರ್‌ ವಿಜಯ ಆರೋಗ್ಯ ಇಲಾಖೆ ಪರೀಕ್ಷಕ, ಸಮುದಾಯ ಸಂಘಟಕ ನಾಗೇಂದ್ರ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next