Advertisement

ನ್ಯಾಯಾಂಗ ಗೌರವ ಕಾಪಾಡಿ: ನ್ಯಾ.ಫ‌ಣಿಂದ್ರ

04:02 PM Sep 02, 2019 | Team Udayavani |

ಕೆ.ಆರ್‌.ಪೇಟೆ: ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಗೌರವವಿರುವ ಜತೆಗೆ ನ್ಯಾಯಾಲಯಗಳನ್ನು ದೇವಸ್ಥಾನಕ್ಕಿಂತಲೂ ಹೆಚ್ಚಿನ ಭಕ್ತಿಯಿಂದ ಜನಸಾಮಾನ್ಯರು ಕಾಣುತ್ತಿದ್ದು, ಅವರ ಗೌರವಕ್ಕೆ ತಕ್ಕಂತೆ ನಾವುಗಳು ನ್ಯಾಯವನ್ನು ಒದಗಿಸ ಬೇಕಾಗುತ್ತದೆ ಎಂದು ಹೈಕೋರ್ಟ್‌ ನ್ಯಾ. ಕೆ.ಎನ್‌.ಫ‌ಣೀಂದ್ರ ತಿಳಿಸಿದರು.

Advertisement

ಅವರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನೂತನ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಜನಸಾಮಾನ್ಯರು ಹಾಗೂ ಕಕ್ಷಿದಾರರ ಭಾವನೆಗಳಿಗೆ ಪೂರಕವಾಗಿ ವಕೀಲರು ಬದ್ಧತೆಯಿಂದ ವಾದವನ್ನು ಮಂಡಿಸಿ ಶೀಘ್ರವೇ ನ್ಯಾಯವು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಣ್ಣ-ಪುಟ್ಟ ಪ್ರಕರಣಗಳನ್ನು ವಕೀಲರು ತಮ್ಮ ಮಟ್ಟದಲ್ಲಿಯೇ ಬಗೆಹರಿಸಿ ಕಳಿಸಿಕೊಡುವ ಮೂಲಕ ಕೋರ್ಟ್‌ಗೆ ಅಲೆಯುವುದನ್ನು ತಡೆಯಬೇಕು ಎಂದರು.

ದೇಶದ ಜನಸಂಖ್ಯೆಯ ಶೇ.20ರಷ್ಟು ಜನರು ಮಾತ್ರ ನ್ಯಾಯಾಲಯಗಳ ಸದ್ಭಳಕೆ ಮಾಡಿಕೊಳ್ಳುತ್ತಿದ್ದು, ಉಳಿದ ಶೇ. 80 ಜನರು ನ್ಯಾಯಾಲಯದ ಪರಿಮಿತಿಯೊಳಗೆ ಬರದೇ ತಮ್ಮ ವ್ಯಾಪ್ತಿಯಲ್ಲಿಯೇ ರಾಜಿ-ಸಂಧಾನದ ಮೂಲಕ ನ್ಯಾಯವನ್ನು ಪಡೆದುಕೊಳ್ಳುತ್ತಿರುವುದು ನಮ್ಮ ಕಣ್ಣಮುಂದೆ ಇದ್ದು, ಎಲ್ಲರಿಗೂ ಸರಳವಾಗಿ ನ್ಯಾಯಾಲಯಗಳಲ್ಲಿ ನ್ಯಾಯವನ್ನು ಪಡೆದುಕೊಳ್ಳುವಂತೆ ಮಾಡುವುದು ವಕೀಲರ ಜವ್ದಾರಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಜಿ.ವಿಜಯಕುಮಾರಿ ಮಾತನಾಡಿ, ಕೆ.ಆರ್‌.ಪೇಟೆ ತಾಲೂಕು ಲೋಕ ಅದಾಲತ್‌ ಕಾರ್ಯಕ್ರಮ ಹಾಗೂ ರಾಜಿಸಂಧಾನ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ವಕೀಲರ ಸಮಸ್ಯೆಗಳನ್ನು ಖುದ್ದಾಗಿ ಕಂಡು ಪರಿಹಾರಕ್ಕೆ ಈಗಾಗಲೇ ಮುಂದಾಗಿರುವ ನಾನು ವಕೀಲರ ಸಂಘದ ಕಟ್ಟಡದ ಕಾಮಗಾರಿಯ ನಿರ್ಮಾಣಕ್ಕೂ ಹೈ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದ್ದೇನೆ. ಕಳೆದ ವರ್ಷವೇ ನ್ಯಾಯಾಲಯ ಸಂಕೀರ್ಣದ ಕಾಮಗಾರಿಯು ಆರಂಭವಾಗಬೇಕಿದ್ದು ಅನಿವಾರ್ಯವಾಗಿ ತಡವಾಗಿದ್ದು ಎಂಜಿನಿಯರ್‌ಗಳು ಕಾಮಾಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜತೆಗೆ ಆದಷ್ಟು ಬೇಗನೆ ಕಟ್ಟಡವನ್ನು ನಿರ್ಮಾಣ ಮಾಡುವಂತೆ ತಿಳಿಸಿದರು.

Advertisement

ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಕೃಷ್ಣಪ್ರಸಾದರಾವ್‌, ಅಪರ ನ್ಯಾಯಾಧೀಶ ಬಸವರಾಜಪ್ಪ ತುಳಸಪ್ಪನಾಯಕ, ಕಿರಿಯಶ್ರೇಣಿ ನ್ಯಾಯಾಲಯದ ನ್ಯಾ. ಫಾರೂಕ್‌ ಝಾರೆ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಿ.ಆರ್‌.ಚಂದ್ರಮೌಳಿ, ಎಚ್.ಎಲ್.ವಿಶಾಲ್ರಘು, ವಕೀಲರ ಸಂಘದ ಅಧ್ಯಕ್ಷ ಎಂ.ಆರ್‌.ರಾಜೇಶ್‌, ಹಿರಿಯ ವಕೀಲ ಬಿ.ಎಲ್.ದೇವರಾಜು, ಜಿ.ಆರ್‌.ಅನಂತರಾಮಯ್ಯ, ಪಿಡಬ್ಲ್ಯೂಡಿ ಎಂಜಿನಿಯರ್‌ ಎಚ್.ಆರ್‌.ಹರ್ಷ, ಸರ್ಕಲ್ ಇನ್ಸ್‌ಪೆಕ್ಟರ್‌ ಕೆ.ಎನ್‌.ಸುಧಾಕರ್‌, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಜಗಧೀಶ, ಪ್ರಧಾನ ಕಾರ್ಯದರ್ಶಿ ಕೆ.ಎನ್‌.ಪಾಂಡು, ಜಂಟಿ ಕಾರ್ಯದರ್ಶಿ ಎಂ.ವಿ.ಪ್ರಭಾಕರ್‌ ಸೇರಿದಂತೆ ವಕೀಲರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next