Advertisement

ಮನೆ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿ

04:58 PM Mar 11, 2022 | Team Udayavani |

ಸಂಡೂರು: ಮನೆ ಮುಂಭಾಗದ ನೀರಿನ ತೊಟ್ಟಿ, ಬ್ಯಾರೆಲ್‌, ಚಿಪ್ಪು, ಬಾಟಲ್‌ಗ‌ಳಲ್ಲಿ ಈಡಿಸ್‌ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇವು ಮನುಷ್ಯರಿಗೆ ಕಚ್ಚುವುದರಿಂದ ರೋಗಗಳು ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತವೆ. ಆದ್ದರಿಂದ ಕಡ್ಡಾಯವಾಗಿ ಮನೆ ಮುಂಭಾಗ ಮತ್ತು ಹಿಂಬದಿ ಸ್ವತ್ಛತೆ ಕಾಪಾಡುವುದು ಅತಿ ಅಗತ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಶಿವಪ್ಪ ಹೇಳಿದರು.

Advertisement

ತೋರಣಗಲ್ಲು ಜನತಾ ಕಾಲೋನಿಯಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಡೆಂಘೀ, ಚಿಕೂನ್‌ ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ ಕುರಿತು ಗುಂಪು ಸಭೆಗಳ ಮೂಲಕ ಜಾಗೃತಿ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು.

ಸೊಳ್ಳೆಗಳ ನಿಯಂತ್ರಿಸಲು ವಾರದಲ್ಲಿ ಎರಡು ಬಾರಿ ನೀರು ಶೇಖರಿಸುವ ಡ್ರಮ್‌, ಬ್ಯಾರಲ್‌, ಗಡಿಗೆ, ಸಿಮೆಂಟ್‌ ತೊಟ್ಟಿಗಳನ್ನು ಸ್ವತ್ಛವಾಗಿ ತೊಳೆದು ಒಣಗಿದ ನಂತರ ನೀರು ಶೇಖರಿಸಿ ಮುಚ್ಚಳ ಅಥವಾ ಬಟ್ಟೆಗಳಿಂದ ಕಟ್ಟಿ ಸೊಳ್ಳೆ ಮೊಟ್ಟೆಗಳು ಇಡದಂತೆ ಎಚ್ಚರಿಕೆ ವಹಿಸಬೇಕು. ಚರಂಡಿಯಲ್ಲಿ ಕಸಕಡ್ಡಿ ಹಾಕಬಾರದು. ವ್ಯರ್ಥ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗಬೇಕು ಎಂದು ಹೇಳಿದರು.

ಆರೋಗ್ಯ ಸಿಬ್ಬಂದಿ ಚಲುವರಾಜ, ಸ್ಥಳೀಯರಾದ ದೇವೇಂದ್ರಪ್ಪ, ಹನುಮಂತಪ್ಪ, ಕಾಶೀಂಬಿ, ರೇಷ್ಮಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next