Advertisement

ಸುಂದರ ಪರಿಸರಕ್ಕಾಗಿ ಸ್ವಚ್ಛತೆ ಕಾಪಾಡಿಕೊಳ್ಳಿ

08:55 PM Jul 21, 2019 | Team Udayavani |

ನೆಲಮಂಗಲ: ಸುಂದರ ಹಾಗೂ ನೈರ್ಮಲ್ಯದ ಪರಿಸರಕ್ಕಾಗಿ ಸಮಾಜದ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಾಪಂ ಇಒ ಎಚ್‌.ಆರ್‌ ಹನುಮಂತರಾಯಪ್ಪ ಸಲಹೆ ನೀಡಿದರು. ತಾಲೂಕಿನ ವಿಶ್ವೇಶ್ವರಪುರ ಗ್ರಾಪಂ ಆವರಣದಲ್ಲಿ ಆಯೋಜಿಸಲಾಗಿದ್ದ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ಚಾಲನೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ನಾಗರಿಕರು ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ತ್ಯಾಜ್ಯ ಸಮಸ್ಯೆ ಎದುರಾಗುವುದಿಲ್ಲ. ಮನೆಗಳ ಸುತ್ತಲು, ರಸ್ತೆಗಳ ಬದಿಗಳಲ್ಲಿ ಮರಗಿಡಗಳನ್ನು ಬೆಳೆಸಿಕೊಂಡರೆ ಉತ್ತಮ ಗಾಳಿ ನಮ್ಮದಾಗುತ್ತದೆ. ನಮ್ಮ ಬಡವಾಣೆಯಲ್ಲಿ, ಮನೆಯ ಪಕ್ಕ ತ್ಯಾಜ್ಯ ಹೆಚ್ಚಾಗಿದೆ ಎಂದು ದೂರು ಸಲ್ಲಿಸುವ ಮುಂಚೆ ನಾವು ಮಾಡುವ ತಪ್ಪುಗಳನ್ನು ಮನವರಿಕೆ ಮಾಡಿಕೊಳ್ಳಬೇಕು. ಮೊದಲು ನಾವು ಮನೆ ಮನ ಸ್ವಚ್ಛವಾಗಿರಿಸಿಕೊಂಡರೆ ಸಮಾಜ ಉತ್ತಮವಾಗಿರುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣ ಸುಲಭವಾಗುತ್ತದೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಯಲ್ಲಪ್ಪ ಮಾತನಾಡಿ, ಗ್ರಾಮದಲ್ಲಿ ಎಲ್ಲೆಂದರಲ್ಲಿ ಎದುರಾಗುವ ತ್ಯಾಜ್ಯ ಸಮಸ್ಯೆ ಮುಕ್ತಗೊಳಿಸಲು ಪಂಚಾಯ್ತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಮನೆಗಳ ತ್ಯಾಜ್ಯ ಸಂಗ್ರಹಣೆಗೆ ವಿಶೇಷ ವಾಹನ ಬಿಡಲಾಗಿದೆ. ಮನೆಯಲ್ಲಿಯೇ ಒಣ ಹಾಗೂ ಹಸಿ ಕಸ ವಿಂಗಡಿಸಿ, ತ್ಯಾಜ್ಯ ಸಂಗ್ರಹಣೆ ವಾಹನದಲ್ಲಿ ಹಾಕ‌ಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ಸೊಳ್ಳೆಗಳು ಹೆಚ್ಚಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ.

ಇದರಿಂದಾಗಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ವಿಶ್ವೇಶ್ವರಪುರ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ ಕೃಷ್ಣಪ್ಪ, ಸದಸ್ಯರಾದ ಕೆಂಪೇಗೌಡ, ಸಿದ್ದರಾಜು, ಗಂಗರಾಜು, ಪಿಡಿಒ ರವೀಂದ್ರ, ನರಸಿಂಹ ಮೂರ್ತಿ, ಕಾರ್ಯದರ್ಶಿ ಧನಂಜಯ, ಮುಖಂಡರಾದ ಗಂಗರಾಜು, ಆರೀಫ್, ಇಕ್ಬಾಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next