Advertisement

ಮೈನ್‌ಪುರಿ ಲೋಕಸಭಾ ಉಪಚುನಾವಣೆ ; ಡಿಂಪಲ್ ಯಾದವ್ ಪರ ಭರ್ಜರಿ ಪ್ರಚಾರ

06:54 PM Dec 04, 2022 | Team Udayavani |

ಮೈನ್‌ಪುರಿ: ಸಮಾಜವಾದಿ ಪಕ್ಷದ ಸಂಸ್ಥಾಪಕರ ರಾಜಕೀಯ ಪರಂಪರೆ ಅಖಂಡವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮುಲಾಯಂ ಸಿಂಗ್ ಯಾದವ್ ಅವರ ಗುರುಗಳ ಕುಟುಂಬ ಸದಸ್ಯರು ಡಿಸೆಂಬರ್ 5 ರಂದು ನಡೆಯಲಿರುವ ಮೈನ್‌ಪುರಿ ಲೋಕಸಭಾ ಉಪಚುನಾವಣೆಗೆ ಅವರ ಸೊಸೆ ಡಿಂಪಲ್ ಯಾದವ್ ಪರ ಪ್ರಚಾರ ಮಾಡುವ ಮೂಲಕ ಒಗ್ಗಟ್ಟು ತೋರಿದ್ದಾರೆ.

Advertisement

ಕಳೆದ ತಿಂಗಳು ಮುಲಾಯಂ ಸಿಂಗ್ ಯಾದವ್ ವಿಧಿವಶ ರಾದ ಕಾರಣ ಅಗತ್ಯವಾಗಿದ್ದ ಉಪಚುನಾವಣೆಯಲ್ಲಿ, ಡಿಂಪಲ್ ಯಾದವ್ ಅವರನ್ನು ಎಸ್‌ಪಿ, ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ ವಿರುದ್ಧ ಕಣಕ್ಕಿಳಿಸಿದೆ.

ಮುಲಾಯಂ ಸಿಂಗ್ ಯಾದವ್ ಅವರ ಶಾಲೆಯ ಶಿಕ್ಷಕ ಉದಯ್ ಪ್ರತಾಪ್ ಸಿಂಗ್ ಮತ್ತು ಅವರ ರಾಜಕೀಯ ಗುರು ಎಂದು ಪರಿಗಣಿಸಲ್ಪಟ್ಟ ನಾಥು ಸಿಂಗ್ ಅವರ ಕುಟುಂಬ ಸದಸ್ಯರು ಎಸ್‌ಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದು, ಮುಲಾಯಂ ಐದು ಬಾರಿ ಗೆದ್ದಿರುವ ಸ್ಥಾನದಿಂದ ಸೊಸೆ ವಿಜಯಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1989 ಮತ್ತು 1991 ರಲ್ಲಿ ಮೈನ್‌ಪುರಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ತೊಂಬತ್ತೊಂದು ವರ್ಷದ ಉದಯ್ ಪ್ರತಾಪ್, ಹೆಚ್ಚಿನ ಸಂಖ್ಯೆಯ ಮತದಾರರು ಡಿಂಪಲ್ ಯಾದವ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.ಒಂದೆರಡು ದಿನಗಳ ಕಾಲ, ನಾನು ಅವರ ಪರವಾಗಿ ಈ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆದರೆ, ಅವರು ಉಪಚುನಾವಣೆಯಲ್ಲಿ ಜಯಗಳಿಸುತ್ತಾರೆ” ಎಂದರು.

ಡಿಂಪಲ್ ಯಾದವ್ ಅವರ ಪತಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಎಸ್‌ಪಿಯ ಉನ್ನತ ನಾಯಕರು ಪಕ್ಷದ ಭದ್ರಕೋಟೆಯಾಗಿರುವ ಕ್ಷೇತ್ರಕ್ಕೆ ಉಪಚುನಾವಣೆಗಾಗಿ ಭರ್ಜರಿ ಪ್ರಚಾರವನ್ನು ನಡೆಸಿದ್ದಾರೆ. ನಾಥು ಸಿಂಗ್ ಅವರ ಮೊಮ್ಮಗ ನೀರಜ್ ಯಾದವ್ ನಮ್ಮ ಇಡೀ ಕುಟುಂಬವು ಮೈನ್‌ಪುರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಡಿಂಪಲ್ ಯಾದವ್ ಪರ ಪ್ರಚಾರ ನಡೆಸುತ್ತಿದೆ ಎಂದು ಹೇಳಿದ್ದಾರೆ.

Advertisement

ಮೈನ್‌ಪುರಿ ಸಂಸದೀಯ ಕ್ಷೇತ್ರವು ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೈನ್‌ಪುರಿ, ಭೋಗಾಂವ್, ಕಿಶ್ನಿ, ಕರ್ಹಾಲ್ ಮತ್ತು ಜಸ್ವಂತ್ ನಗರ. 2022 ರ ವಿಧಾನಸಭಾ ಚುನಾವಣೆಯಲ್ಲಿ, ಎಸ್ ಪಿ ಕರ್ಹಾಲ್, ಕಿಶ್ನಿ ಮತ್ತು ಜಸ್ವಂತ್ ನಗರ ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮೈನ್‌ಪುರಿ ಮತ್ತು ಭೋಗಾಂವ್ ಸ್ಥಾನಗಳನ್ನು ಗೆದ್ದಿತ್ತು. ಅಖಿಲೇಶ್ ಯಾದವ್ ಕರ್ಹಾಲ್ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದು, ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಜಸ್ವಂತ್ ನಗರದಿಂದ ಶಾಸಕರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next