Advertisement

ಟ್ರಂಪ್ ಗೆ ಮೆಚ್ಚುಗೆ ; ಪಾಕ್ ಗೆ ಟಾಂಗ್ ; ನವ ಭಾರತದ ಚಿತ್ರಣ ತೆರೆದಿಟ್ಟ ಪ್ರಧಾನಿ ಮೋದಿ

09:30 AM Sep 23, 2019 | Hari Prasad |

ಈ ದೃಶ್ಯ ಕಲ್ಪನಾತೀತವಾದುದಾಗಿದೆ ಎಂದು ಹಿಂದಿಯಲ್ಲಿ ಭಾಷಣ ಪ್ರಾರಂಭಿಸಿದ ಮೋದಿ.

Advertisement

– ನಾವಿವತ್ತು ಇಲ್ಲಿ ಹೊಸ ಇತಿಹಾಸ ಮತ್ತು ಹೊಸ ಬಾಂಧವ್ಯ ರೂಪುಗೊಳ್ಳುವುದನ್ನು ಕಾಣುತ್ತಿದ್ದೇವೆ.

– ಭಾರತ ಮತ್ತು ಅಮೆರಿಕಾದ ಹೊಸ ಬಾಂಧವ್ಯದ ಶಕ್ತಿ ಇಲ್ಲಿ ಅನಾವರಣಗೊಂಡಿದೆ.

– ನಾನು ಶತಕೋಟಿ ಭಾರತೀಯರ ಆದೇಶದ ಮೇಲೆ ಕಾರ್ಯ ನಿರ್ವಹಿಸುವ ಸಾಮಾನ್ಯ ವ್ಯಕ್ತಿಯಾಗಿದ್ದೇನೆ. ನೀವು ಹೌಡಿ ಮೋದಿ ಎಂದು ಕೆಳಿದರೆ, ನಾನು ಭಾರತದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಎಂದು ಹೇಳುತ್ತೇನೆ. ವಿವಿಧ ಭಾಷೆಗಳಲ್ಲಿ ‘ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ ಮೋದಿ’

– ನಿಮಗೆ ಆಶ್ಚರ್ಯವಾಗಬಹುದು. ನಾನು ಹೇಳಿದ್ದು ‘ಎಲ್ಲಾ ಚೆನ್ನಾಗಿದೆ’ ಎಂದು ಭಾರತದ ವಿವಿಧ ಭಾಷೆಗಳಲ್ಲಿ ನಾನು ಹೇಳಿದ್ದೇನೆ. ನಮ್ಮಲ್ಲಿರುವ ಭಾಷಾ ವೈವಿಧ್ಯತೆಯೇ ನಮ್ಮ ಶಕ್ತಿಯಾಗಿದೆ. ನಾವೆಲ್ಲರೂ ವೈವಿಧ್ಯತೆಯಲ್ಲಿ ಏಕತೆಯನ್ನು ಅದ್ಭುತವಾಗಿ ಮಾಡಿದೆ.

Advertisement

– ನಮ್ಮಲ್ಲಿ ವೈವಿಧ್ಯತೆಯೇ ಪ್ರಜಾಪ್ರಭುತ್ವವನ್ನು ಏಕರಥದಲ್ಲಿ ಕೊಂಡೊಯ್ಯುತ್ತಿದೆ. ಇಲ್ಲಿ ಸೇರಿರುವ 50 ಸಾವಿರ ಜನ ನಮ್ಮ ದೇಶದ ವೈವಿಧ್ಯತೆಯ ಪ್ರತಿನಿಧಿಗಳಾಗಿದ್ದಾರೆ.


– 610 ಮಿಲಿಯನ್ ಮತದಾರರು ಈ ಬಾರಿಯ ಮತದಾನದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲೂ 80 ಮಿಲಿಯನ್ ಯುವಮತದಾರರು ಮೊದಲ ಬಾರಿಗೆ ಮತ ಚಲಾಯಿಸಿದ್ದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರತಿನಿಧಿಗಳು ಆರಿಸಿ ಬಂದಿದ್ದೂ ಇತಿಹಾಸವಾಗಿದೆ.

– ಇದೆಲ್ಲವೂ ಯಾರಿಂದ ಸಾಧ್ಯವಾಯಿತೆಂದು ಕೇಳಿದರೆ, ಇದೆಲ್ಲಾ ಮೋದಿಯ ಕಾರಣದಿಂದ ಆದದ್ದಲ್ಲ, ಬದಲಾಗಿ ಹಿಂದೂಸ್ಥಾನಿವಾಸಿಗಳ ಕಾರಣದಿಂದ ಸಾಧ್ಯವಾಯಿತು.

– ಇಂದು ಭಾರತದಲ್ಲಿ ಅತೀಹೆಚ್ಚು ಚರ್ಚೆಯಾಗುತ್ತಿರುವ ವಿಚಾರವೇ ‘ವಿಕಾಸ’. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬುದು ನಮ್ಮ ಮೂಲಮಂತ್ರವಾಗಿದೆ. ನಮ್ಮ ಬಹುದೊಡ್ಡ ಸಂಕಲ್ಪವೇ ‘ನವ ಭಾರತ’. ಇದನ್ನು ಪೂರ್ಣಗೊಳಿಸುವುದಕ್ಕೆ ನಾವೆಲ್ಲಾ ಆಹೋರಾತ್ರಿ ಶ್ರಮಪಡುತ್ತಿದ್ದೇವೆ.

– ನಾವಿಂದು ನಮಗೆ ಸ್ಪರ್ಧೆ ನೀಡುತ್ತಿದ್ದೇವೆ ; ನಾವಿಂದು ನಮ್ಮಲ್ಲಿ ಬದಲಾವಣೆ ಕಾಣುತ್ತಿದ್ದೇವೆ

– ನಮ್ಮ ಗುರಿ ಎತ್ತರದ್ದಾಗಿದೆ ಮತ್ತು ನಾವು ಉನ್ನತವಾದುದನ್ನೇ ಸಾಧಿಸುತ್ತಿದ್ದೇವೆ.

– ಗ್ರಾಮೀಣ ಭಾರತದ ಸ್ವಚ್ಛತೆ 50 ವರ್ಷಗಳಿಂದ 38% ಇತ್ತು. ಕಳೆದ ವರ್ಷಗಳಲ್ಲಿ ನಾವು 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದೇವೆ.

– ಅಡುಗೆ ಅನಿಲ, ಗ್ರಾಮೀಣ ರಸ್ತೆ ಅಭಿವೃದ್ಧಿ, ಬ್ಯಾಂಕ್ ಖಾತೆ ತೆರೆಯುವಿಕೆ, ಮೂಲಭೂತ ಸೌಕರ್ಯ ಅಭಿವೃದ್ದಿ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ದೇಶದಲ್ಲಿ ಸಾಮಾನ್ಯ ಪ್ರಜೆಯೊಬ್ಬನ ಸ್ಥಿತಿಗತಿ ಉತ್ತಮಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ.

– ದೇಶದಲ್ಲಿ ಸಾಮಾನ್ಯ ಪ್ರಜೆಯೊಬ್ಬನ ಸ್ಥಿತಿಗತಿ ಉತ್ತಮಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ.


– ಇವತ್ತು ‘ಮಾಹಿತಿ’ ಎನ್ನುವುದು ತೈಲದಷ್ಟೇ ಮಹತ್ವದ್ದಾಗಿದೆ. ಅದಕ್ಕಿಂದು ಬಂಗಾರದ ಬೆಲೆ ಇದೆ. ಅತೀ ಕಡಿಮೆ ದರದಲ್ಲಿ ‘ಡೇಟಾ’ ಲಭ್ಯವಾಗುವ ದೇಶವಿದ್ದರೆ ಅದು ಭಾರತದಲ್ಲಿ ಮಾತ್ರ. ನಮ್ಮಲ್ಲಿ 1 ಜಿಬಿ ಡಾಟಾದ ಬೆಲೆ ಬಹಳ ಕಮ್ಮಿಇದೆ. ಡಿಜಿಟಲ್ ಇಂಡಿಯಾ ನಿರ್ಮಾಣದಲ್ಲಿ ಡೇಟಾಗಳ ಪಾತ್ರ ಮಹತ್ವದ್ದಾಗಿದೆ.

– ಹೊಸ ಪಾಸ್ ಪೋರ್ಟ್ ಮಾಡಿಸಿಕೊಳ್ಳುವುದು ನಮ್ಮಲ್ಲಿ ಸುಲಭವಾಗಿದೆ. ಹಾಗೆಯೇ ತೆರಿಗೆ ಪಾವತಿ ವಿಧಾನವನ್ನೂ ಸಹ ಸುಧಾರಿಸಲಾಗಿದೆ. ಈ ಆಗಸ್ಟ್ 31ರಂದು ಒಂದೇ ದಿನ 5 ಮಿಲಿಯನ್ ಜನರು ತಮ್ಮ ಇನ್ ಕಂ ಟ್ಯಾಕ್ಸ್ ಅನ್ನು ಆನ್ ಲೈನ್ ಮೂಲಕ ಪಾವತಿಸಿದ್ದಾರೆ.

– ‘ವೆಲ್ಫೇರ್’ ಗೆ ಕೊಟ್ಟಷ್ಟೇ ಮಹತ್ವವನ್ನು ‘ಫೇರ್ ವೆಲ್’ ಕೂಡಾ ನಾವು ನೀಡುತ್ತಿದ್ದೇವೆ. ಹಳೆಯ ಕಾನೂನುಗಳಿಗೆ ನಾವು ಈಗಾಗಲೇ ತಿಲಾಂಜಲಿ ನೀಡಿದ್ದೇವೆ. ಜಿ.ಎಸ್.ಟಿ. ಜಾರಿಗೆ ತರುವ ಮೂಲಕ ಹೊಸ ಸಾಧನೆಯನ್ನು ಮಾಡಿದ್ದೇವೆ. ಏಕ ದೇಶ ಏಕ ತೆರಿಗೆ ಪದ್ಧತಿ ನಮ್ಮಲ್ಲಿ ಜಾರಿಗೊಂಡಿದೆ. ಹಲವಾರು ಬೇನಾಮಿ ಕಂಪೆನಿಗಳಿಗೆ ನಾವು ಫೇರ್ ವೆಲ್ ನೀಡಿದ್ದೇವೆ.

– ಒಬ್ಬನೇ ಒಬ್ಬ ಭಾರತೀಯ ವಿಕಾಸದಿಂದ ದೂರ ಉಳಿಯುವುದನ್ನು ನಾವು ಸಹಿಸುವುದಿಲ್ಲ.

– ನಮಗೆ ದಶಕಗಳಿಂದ ತಲೆನೋವಾಗಿದ್ದ ಒಂದು ವಿಷಯಕ್ಕೆ ನಾವು ಮೊನ್ನೆ ಮೊನ್ನೆಯಷ್ಟೇ ‘ಫೇರ್ ವೆಲ್’ ನೀಡಿದ್ದೇವೆ. (ಭಾರೀ ಕರಾಡತನ) ಅದೇ 370ನೇ ವಿಧಿ. ಈ ವಿಧಿ ಜಮ್ಮು ಕಾಶ್ಮೀರ ಮತ್ತು ಲಢಾಕ್ ಪ್ರದೇಶದ ಜನರ ಅಭಿವೃದ್ಧಿಗೆ ಬಹುದೊಡ್ಡ ತೊಡಕಾಗಿತ್ತು.

– ಅಲ್ಲಿ ಮಹಿಳೆಯರು, ಬಡವರು, ಮಕ್ಕಳು ಮತ್ತು ದಲಿತರ ಮೇಲೆ ನಡೆಯುತ್ತಿದ್ದ ಶೋಷಣೆಗಳಿಗೆ ಅಂತ್ಯ ಹಾಡಲಾಗಿದೆ. ನಮ್ಮ ಈ ನಿರ್ಧಾರವನ್ನು ಸಂಸತ್ತಿನ ಎರಡೂ ಸದನಗಳೂ ಭಾರೀ ಬಹುಮತದಿಂದ ಇದನ್ನು ಸಮರ್ಥಿಸಿಕೊಂಡಿವೆ. ಇದಕ್ಕಾಗಿ ನಮ್ಮ ದೇಶದ ಎಲ್ಲಾ ಸಂಸದರಿಗೂ ನೀವೆಲ್ಲರೂ ಸ್ಟ್ಯಾಂಡಿಂಗ್ ಒವೇಶನ್’ ನೀಡಬೇಕು.

– ನಮ್ಮ ಈ ನಿರ್ಧಾರ ಆತಂಕವಾದಿಗಳಿಗೆ ಮತ್ತು ಆತಂಕವಾದವನ್ನು ಪೋಷಿಸುವವರಿಗೆ ತಲೆನೋವಾಗಿದೆ. ಅಮೆರಿಕಾದ 9/11 ಆಗಿರಬಹುದು ಮುಂಬಯಿಯ 26/11 ಇರಬಹುದು ಇದರ ಸಂಚುದಾರರು ಎಲ್ಲಿ ಅಡಗಿದ್ದಾರೆ ಎಂದು ವಿಶ್ವಕ್ಕೇ ಗೊತ್ತಿದೆ. ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ನಿರ್ಣಾಯಕ ಸಮರ ನಡೆಸುವ ಸಮಯ ಬಂದಿದೆ.

– ಆತಂಕವಾದದ ವಿರುದ್ಧ ಪ್ರಬಲ ಮನೋಬಲದಿಂದ ಹೋರಾಡುತ್ತಿರುವ ಅಧ್ಯಕ್ಷ ಟ್ರಂಪ್ ಅವರಿಗೂ ಒಂದು ಸ್ಟ್ಯಾಂಡಿಂಗ್ ಒವೇಶನ್ ನೀಡಬೇಕು ಎಂದು ಮನವಿ ಮಾಡಿದ ಪ್ರಧಾನಿ ಮೋದಿ.

– ‘ಸಂಕಷ್ಟಗಳ ಆಗಸದಲ್ಲೇ ನನ್ನ ಭರವಸೆಗಳ ಅರಮನೆ ಇದೆ’. ಭಾರತ ಇಂದು ಸಮಸ್ಯೆಗಳನ್ನು ಮೂಲದಿಂದಲೇ ಪರಿಹರಿಸುತ್ತಿದೆ. 5 ಟ್ರಿಲಿಯನ್ ಆರ್ಥಿಕತೆಯತ್ತ ನಮ್ಮ ಚಿತ್ತ ನೆಟ್ಟಿದೆ. ಇಲ್ಲಿ ನಾವು ಜನಸ್ನೇಹಿ, ಹೂಡಿಕೆದಾರ ಸ್ನೇಹಿ ಪರಿಸರವನ್ನು ನಿರ್ಮಿಸಿದ್ದೇವೆ. ನಮ್ಮ ಬೆಳವಣಿಗೆ ದರ ಸರಾಸರಿ 7ರ ಮಟ್ಟದಲ್ಲಿದೆ.

– ಟ್ರಂಪ್ ನನ್ನನ್ನು ‘ಟಫ್ ನೆಗೋಷಿಯೇಟರ್’ ಎಂದು ಕರೆಯುತ್ತಾರೆ ಆದರೆ ಟ್ರಂಪ್ ಅವರೇನೂ ಚೌಕಾಶಿ ಮಾಡುವುದರಲ್ಲಿ ಕಡಿಮೆಯೆನಿಲ್ಲ, ಅವರಿಂದ ನಾನು ಬಹಳಷ್ಟು ಕಲಿಯುತ್ತಿದ್ದೇನೆ.

– ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಛೇರಿಗಳು ಅನಿವಾಸಿ ಭಾರತೀಯರ ಪಾಲಿನ ಆಪತ್ಬಾಂಧವ ಕೇಂದ್ರಗಳಾಗಿವೆ.

‘ಥ್ಯಾಂಕ್ಯೂ ಹ್ಯೂಸ್ಟನ್ ; ಥ್ಯಾಂಕ್ಯೂ ಅಮೆರಿಕಾ’ ಎಂದು ಭಾಷಣ ಮುಗಿಸಿದ ಮೋದಿ.

ವೇದಿಕೆಯಿಂದ ಎಲ್ಲರಿಗೂ ತಲೆಬಾಗಿ ನಮಿಸಿದ ಪ್ರಧಾನಿ ಮೋದಿ. ಬಳಿಕ ಅಧ್ಯಕ್ಷ ಟ್ರಂಪ್ ಬಳಿ ಆಗಮಿಸಿ ಅವರ ಕೈ ಹಿಡಿದು ಸಭಾಂಗಣಕ್ಕೆ ಒಂದು ಸುತ್ತು ಹಾಕುತ್ತಿರುವ ಪ್ರಧಾನಿ ಮೋದಿ.

Advertisement

Udayavani is now on Telegram. Click here to join our channel and stay updated with the latest news.

Next