ನವದೆಹಲಿ: ರಷ್ಯಾದಿಂದ ಭಾರತ ಕಳೆದ ತಿಂಗಳು ಪ್ರತಿ 1.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ಈ ಪ್ರಮಾಣ ಸಾಂಪ್ರದಾಯಿಕವಾಗಿ ದೇಶಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ಇರಾಕ್ ಮತ್ತು ಸೌದಿ ಅರೇಬಿಯಾದಿಂದ ತರಿಸಿಕೊಳ್ಳುವ ಒಟ್ಟು ಪ್ರಮಾಣಕ್ಕಿಂತ ಹೆಚ್ಚಾಗಿದೆ.
ಸತತವಾಗಿ ಐದನೇ ತಿಂಗಳು ಈ ರೀತಿಯ ಬೆಳವಣಿಗೆಯಾಗುತ್ತಿದೆ ಎಂದು ಇಂಧನ ಪೂರೈಕೆಯ ಬಗ್ಗೆ ಮಾಹಿತಿ ನೀಡುವ “ವೊರ್ಟೆಕ್ಸಾ’ ವರದಿ ಮಾಡಿದೆ.
ಸೌದಿ ಅರೇಬಿಯಾದಿಂದ ಶೇ.16, ಅಮೆರಿಕದಿಂದ ದೇಶ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಶೇ.38 ಇಳಿಕೆಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಶುರು ಮಾಡಿದ ಬಳಿಕ ಈ ಬೆಳವಣಿಗೆಯಾಗಿದೆ. ಸದ್ಯ ದೇಶದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ರಷ್ಯಾ ಪಾಲು ಶೇ.35 ಆಗಿದೆ. ಕಳೆದ ತಿಂಗಳಿಗೆ ಸಂಬಂಧಿಸಿದಂತೆ ಇರಾಕ್‌ನಿಂದ ಪ್ರತಿ ದಿನ 9,39,921 ಬ್ಯಾರೆಲ್ ಕಚ್ಚಾ ತೈಲ ಬರುತ್ತಿದ್ದರೆ, ಸೌರಿ ಅರೇಬಿಯಾದಿಂದ 6,47, 813 ಬ್ಯಾರೆಲ್ ಕಚ್ಚಾ ತೈಲ ಪ್ರತಿ ದಿನ ಪೂರೈಕೆಯಾಗುತ್ತಿತ್ತು. ಅಮೆರಿಕವನ್ನು ಹಿಂದಿಕ್ಕಿ ಯುಇಒ ಭಾರತಕ್ಕೆ 4,04, 570 ಬ್ಯಾರೆಲ್ ಕಚ್ಚಾ ತೈಲ ದೇಶಕ್ಕೆ ಪೂರೈಕೆ ಮಾಡುತ್ತಿತ್ತು. ಇರಾಕ್ ಮತ್ತು ಸೌದಿ ಅರೇಬಿಯಾದಿಂದ 16 ತಿಂಗಳಿಗೆ ಹೋಲಿಕೆ ಮಾಡಿದರೆ ದೇಶಕ್ಕೆ ಕನಿಷ್ಠ ತೈಲ ಪೂರೈಕೆಯಾಗಿದೆ.