Advertisement

ಮಹಿಷಿ ವರದಿ ಜಾರಿಗಾಗಿ ಉರುಳು ಸೇವೆ

10:51 AM Nov 12, 2021 | Team Udayavani |

ಸೇಡಂ: ಸ್ಥಳೀಯ ಸಿಮೆಂಟ್‌ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದೇ, ಹೊರ ರಾಜ್ಯದವನ್ನು ಪರಿಗಣಿಸಿ ನೌಕರಿ ನೀಡುತ್ತಿರುವುದನ್ನು ಖಂಡಿಸಿ, ಸರೋಜಿನಿ ಮಹಿಷಿ ವರದಿ ಪ್ರಕಾರ ಶೇ.80 ಕನ್ನಡಿಗರಿಗೆ ನೌಕರಿ ನೀಡುವಂತೆ ಆಗ್ರಹಿಸಿ ಕರವೇ (ಶೆಟ್ಟಿ) ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಅಧಿಕಾರಿಗಳೆದುರು ಉರುಳು ಸೇವೆ ಮಾಡಿದ್ದಾರೆ.

Advertisement

ತಾಲೂಕಿನ ಕೋಡ್ಲಾ- ಬೆನಕನಹಳ್ಳಿಯ ಶ್ರೀ ಸಿಮೆಂಟ್‌ ಎದುರು ಕನ್ನಡಿಗರಿಗಾದ ಅನ್ಯಾಯ ಖಂಡಿಸಿ ಕರವೇ ಕೈಗೊಂಡ ಉಪವಾಸ ಸತ್ಯಾಗ್ರಹದ ವೇಳೆ ಉರುಳು ಸೇವೆ ಮಾಡಿ, ಕಾರ್ಖಾನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬಿಹಾರ, ರಾಜಸ್ಥಾನ, ತೆಲಂಗಾಣದವರಿಗೆ ಶ್ರೀ ಸಿಮೆಂಟ್‌ ಕಾರ್ಖಾನೆಯಲ್ಲಿ ಮೊದಲ ಆದ್ಯತೆ ನೀಡಿ, ಸ್ಥಳೀಯ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಉದ್ಯೋಗವಿಲ್ಲದೆ ಸ್ಥಳೀಯ ಯುವಕರು ಬದುಕು ನಡೆಸುವುದು ದುಸ್ತರವಾಗಿದೆ. ವಾರದೊಳಗೆ ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ಕಾರ್ಖಾನೆಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಮಹೇಶ ಪಾಟೀಲ, ಶ್ರೀನಿವಾಸರೆಡ್ಡಿ ಮದನಾ, ದೇವು ನಾಟಿಕಾರ ಕಾಚವಾರ, ಸಂಜಪ್ಪ ನೀಲಿ, ಪ್ರವೀಣ ಕೋಡ್ಲಾ, ಸುರೇಶರೆಡ್ಡಿ ಮದನಾ, ಮಲ್ಲಿಕಾರ್ಜುನ ಕಾಕಲವಾರ, ವಿಠuಲರಾವ್‌, ಚಂದ್ರಶೇಖರ ಪೂಜಾರಿ, ರವಿಸಿಂಗ ಇಮಡಾಪೂರ, ಚನ್ನಬಸಪ್ಪ ಬೆನಕನಹಳ್ಳಿ, ಗುಂಡಪ್ಪ ಪೂಜಾರಿ, ಆಶಪ್ಪ ತಳವಾರ, ಭಿಮಾಶಂಕರ ನಾಟೀಕಾರ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next