ಬನಹಟ್ಟಿ: ರಬಕವಿ-ಬನಹಟ್ಟಿ ನಗರ ಪ್ರದೇಶದ ಜನರಿಗೆ ಕುಡಿಯುವ ನೀರಿನ ಜೀವನದಿಯಾಗಿರುವ ಕೃಷ್ಣಾ ನದಿ ಸಂಪೂರ್ಣ ಬತ್ತಿದೆ. ಇದರಿಂದ ರಬಕವಿ-ಬನಹಟ್ಟಿ ಸಮೀಪ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಮಹಿಷವಾಡಗಿ ಬ್ಯಾರೇಜ್ ಖಾಲಿಯಾಗಿದೆ. ಉಳಿದಿರುವ ನೀರು ಇನ್ನೊಂದು ವಾರ ಮಾತ್ರ ಬರುತ್ತದೆ. ಇನ್ನೂ ಗ್ರಾಮೀಣ ಪ್ರದೇಶದ ಲಕ್ಷಾಂತರ ಜನ- ಜಾನುವಾರುಗಳು, ಸಾವಿರಾರೂ ಎಕರೆಯಷ್ಟು ಭೂಮಿಯಲ್ಲಿ ಬೆಳೆದ ನಿಂತ ಬೆಳೆಗಳು ಮುಂಬರುವ ದಿನಗಳಲ್ಲಿ ಭೀಕರ ಜಲಕ್ಷಾಮ ಎದುರಿಸಲಿವೆ.
ಈ ಬಾರಿ ಬೇಸಿಗೆ ಪ್ರಾರಂಭದಲ್ಲಿಯೇ ಕೃಷ್ಣಾ ನದಿ ಸಂಪೂರ್ಣ ಬತ್ತಿದ್ದು, ಮುಂಬರುವ ದಿನಗಳಲ್ಲಿ ಭೀಕರ ನೀರಿನ ಪರಿಸ್ಥಿತಿ ಎದುರಿಸಲು ಈ ಭಾಗದ ಜನರು ಮಾನಸಿಕ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜನರು ಈಗಾಗಲೇ ಬ್ಯಾರೆಲ್, ಸಿಂಟೆಕ್ಸ್
ಖರೀದಿಗೆ ಮುಂದಾಗಿದ್ದಾರೆ. ಇತ್ತ ರೈತ ಬೆಳೆದ ಬೆಳೆಗಳಿಗೆ ನೀರಿನ ಚಿಂತೆ ನಡೆಸಿದರೆ, ನಗರ ಪ್ರದೇಶದ ಜನರು
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಟ್ಟರೆ ಮಾತ್ರ ಈ ಸಮಸ್ಯೆಗೆ ಪರಿಹಾರ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದರೂ ಎಷ್ಟು ಶೀಘ್ರ ಆಗುತ್ತದೆಯೋ ಅದರ ಮೇಲೆ ಬರ ಪರಿಸ್ಥಿತಿ ನಿರ್ವಹಣೆ ಅವಲಂಬಿಸಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿ¨
ಕೃಷ್ಣಾ ನದಿ ಬತ್ತಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಬೋರ್ ವೆಲ್, ಬಾವಿಗಳಿಂದ ಸಾರ್ವಜನಿಕರಿಗೆ ನೀರು ಪೂರೈಸುವುದು ಅವಶ್ಯ. ಸಾರ್ವಜನಿಕರಿಗೆ ನೀರು ಪೂರೈಸಲಿಚ್ಛಿಸುವ ಖಾಸಗಿ ಬೋರ್‌ವೆಲ್ ಹಾಗೂ ಬಾವಿಗಳಿಗೆ ಹೊಸದಾಗಿ ಮೀಟರ್ ಅಳವಡಿಸಿ ಮತ್ತು ಅದಕ್ಕೆ ತಗಲುವ ವಿದ್ಯುತ್ ಬಿಲ್ಲನ್ನು ನಗರಸಭೆಯಿಂದ ಭರಿಸಲಾಗುವುದು.
ಆರ್.ಎಂ. ಕೊಡಗೆ, ಪೌರಾಯುಕ್ತರು, ರಬಕವಿ-ಬನಹಟ್ಟಿ ನಗರಸಭೆ
ಆರ್.ಎಂ. ಕೊಡಗೆ, ಪೌರಾಯುಕ್ತರು, ರಬಕವಿ-ಬನಹಟ್ಟಿ ನಗರಸಭೆ