ಮಹೀಂದ್ರಾ ಕಂಪನಿಯು ಸದ್ಯದಲ್ಲೇ 7 ಆಸನಗಳುಳ್ಳ, ಮಧ್ಯಮ ಗಾತ್ರದ ಎಸ್‌ಯುವಿಯನ್ನು ಇದೇ ತಿಂಗಳು ಬಿಡುಗಡೆ ಮಾಡಲಿದ್ದು, ಇದಕ್ಕೆ “ಎಕ್ಸ್‌ಯುವಿ 700′ ಎಂದು ನಾಮಕರಣ ಮಾಡಿದೆ.
ಇದೇ ಸೆಪ್ಟೆಂಬರ್‌ನಲ್ಲಿ “ಎಕ್ಸ್‌ಯುವಿ ಸೆವೆನ್ ಡಬಲ್ ಒ’ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಇದಕ್ಕೆ ಈ ಮೊದಲು ಮಹಿಂದ್ರಾ ಅಲ್ಟಾರಾಸ್ ಎಂದು ಕರೆಯಲಾಗಿತ್ತು. ಇದನ್ನು ಎಕ್ಸ್‌ಯುವಿ 500 ಕಾರಿನ ಮುಂದಿನ ಆವೃತ್ತಿ ಎಂದು ಹೇಳಲಾಗಿದ್ದು, ಎಕ್ಸ್‌ಯುವಿ 700 ಬಿಡುಗಡೆಯಾಗುತ್ತಿದ್ದಂತೆ, ಎಕ್ಸ್‌ಯುವಿ 500 ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕಂಪನಿ ತೀರ್ಮಾನಿಸಿದೆ.
ಹೆಚ್ಚು ಪ್ರೀಮಿಯಂ ಲುಕ್ ಇರುವಂತೆ ಹೊಸ ಕಾರಿನ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸಗಳನ್ನು ಬದಲಿಸಲಾಗಿದೆ. ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆಗಳು, 360 ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತಿತರ ಹೊಸ ಫೀಚರ್‌ಗಳನ್ನೂ ಹೊಂದಿರಲಿವೆ.
ಇದನ್ನೂ ಓದಿ :ದೇಶೀಯ ವಿಮಾನಗಳಲ್ಲಿ ಲಂಚ್‌ಗೆ “ಬ್ರೇಕ್’! ಕೇಂದ್ರ ಸರ್ಕಾರ ಸೂಚನೆ