Advertisement

ಮಹೀಂದ್ರಾ ಮ್ಯಾಜಿಕ್‌: ಬಂತು ನೋಡಿ ಹೊಸ ಎಸ್‌ಯುವಿ

09:16 AM Apr 16, 2019 | keerthan |

ಸಣ್ಣ ಗಾತ್ರದ ಎಸ್‌ಯುವಿಗಳು ಅಂದರೆ ಇದೀಗ ಭಾರತೀಯರು ಕಣ್ಣರಳಿಸಿ ನೋಡುತ್ತಾರೆ. ಮಿನಿ ಎಸ್‌ಯುವಿಗಳು ಎಂದರೆ ಅಷ್ಟರ ಮಟ್ಟಿಗೆ ಜನಪ್ರಿಯ. 4 ಮೀಟರ್‌ ಒಳಗಿನ ಎಸ್‌ಯುವಿಗಳು ಜನಪ್ರಿಯವಾಗಿರುವುದರಿಂದಲೇ ಮಾರುತಿ ಬ್ರಿàಝಾ, ಟಾಟಾ ನೆಕ್ಸಾನ್‌, ಫೋರ್ಡ್‌ ಇಕೋನ್ಪೋರ್ಟ್‌, ಹ್ಯುಂಡೈ ಕ್ರೆಟಾ, ರೆನೋ ಡಸ್ಟರ್‌ ಇತ್ಯಾದಿಗಳು ಇನ್ನಿಲ್ಲದಂತೆ ಮಾರಾಟವಾಗುತ್ತಿದೆ. ಹೆಚ್ಚಿನ ಗ್ರೌಂಡ್‌ ಯರೆನ್ಸ್‌, ಆರಾಮದಾಯಕ ಸವಾರಿ, ಉತ್ತಮ ಎಂಜಿನ್‌ ಸಾಮರ್ಥ್ಯ ಇರುವುದರಿಂದ ಇಂತಹ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಿದೆ.

Advertisement

ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಕಾರುಗಳ ಮಧ್ಯೆ ಇನ್ನಷ್ಟು ಸ್ಪರ್ಧೆ ಮೂಡಿಸಲು ಬಂದಿದ್ದೇ ಮಹೀಂದ್ರಾ ತಯಾರಿಕೆಯ ಎಸ್‌ಯುವಿ 300 ಎರಡನ್ನೂ ನೋಡಲು ಬ್ರಿಝಾವನ್ನು ಹೋಲುವ ಈ ಕಾರು ಈಗಾಗಲೇ ಭಾರೀ ಸದ್ದು ಮತ್ತು ಸುದ್ದಿ ಮಾಡಿದೆ.

ಏನು ವಿಶೇಷ?
ಇದೊಂದು ಪರಿಪೂರ್ಣ ಮಿನಿ ಎಸ್‌ಯುವಿ. ದೇಶೀಯ ಕಾರು ತಯಾರಿಕಾ ಕಂಪನಿಯೊಂದು ವಿದೇಶಿ ಕಾರುಗಳಿಗೆ ಸಡ್ಡುಹೊಡೆಯುವಂತೆ ಇದರಲ್ಲಿ ಹಲವು ಸೌಲಭ್ಯಗಳೊಂದಿಗೆ ವಿನ್ಯಾಸವನ್ನು ಮಾಡಿದೆ. ಈ ಎಸ್‌ಯುವಿನಯಲ್ಲಿ ಏನುಂಟು, ಏನಿಲ್ಲ ಎಂದು ಕೇಳುವಂತಿಲ್ಲ. 15 ಲಕ್ಷಕ್ಕೂ ಮಿಕ್ಕಿ ದರದ ಕಾರುಗಳಲ್ಲಿರುವ ಸೌಕರ್ಯಗಳೆಲ್ಲ ಇದರಲ್ಲಿವೆ. ಎಲೆಕ್ಟ್ರಿಕ್‌ ಸನ್‌ರೂಫ್, ಡ್ಯುಯೆಲ್‌ ಟೋನ್‌ ಕಲರ್‌, ನಾಲ್ಕು ಡಿಸ್ಕ್ ಬ್ರೇಕ್‌ಗಳು, ಪುಶ್‌ ಬಟನ್‌ ಸ್ಟಾರ್ಟ್‌, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಹಿಲ್‌ ಅಸಿಸ್ಟ್‌ ಇತ್ಯಾದಿ ಹಲವಾರು ಸೌಕರ್ಯಗಳಿವೆ.

ವಿನ್ಯಾಸ
ಮುಂಭಾಗದಿಂದ ನೋಡಿದರೆ ಬ್ರಿಝಾ, ಇನ್ನೊಂದು ಭಾಗದಿಂದ ನೋಡಿದರೆ ಕ್ರೆಟಾ ಹೀಗೆ ಇವೆರಡೂ ಮಾಡೆಲ್‌ಗ‌ಳ ಸಮ್ಮಿಶ್ರಣದಂತಿದೆ ಎಕ್ಸ್‌ ಯುವಿ 300. 2600 ಎಂ.ಎಂ. ವೀಲ್‌ಬೇಸ್‌ ಇದ್ದು ಬ್ರಿಝಾಕ್ಕಿಂತ ದೊಡ್ಡದಿದೆ. ನಾಲ್ಕು ಡೈಮಂಡ್‌ ಕಟ್‌ ಅಲಾಯ್‌ಗಳು ಮುಂಭಾಗದಲ್ಲಿ ಡಿಆರ್‌ಎಲ್‌ಗ‌ಳು, ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌, ಫಾಗ್‌ಲ್ಯಾಂಪ್‌, ಹಿಂಭಾಗ ಎಲ್‌ಇಡಿ ಬ್ರೇಕ್‌ಲೈಟ್‌ಗಳು, ಮುಂಭಾಗ ಮತ್ತು ಹಿಂಭಾಗ ಪಾರ್ಕಿಂಗ್‌ ಸೆನ್ಸರ್‌ಗಳು, 7 ಏರ್‌ ಬ್ಯಾಗ್‌ಗಳಿವೆ. 265 ಲೀಟರ್‌ ಬೂಟ್‌ ಸ್ಪೇಸ್‌ ಇದ್ದು ಇತರ ಕಾರುಗಳಿಗಿಂತ ಇದು ತುಸು ಹೆಚ್ಚಿದೆ.


ಒಳಾಂಗಣ ವಿನ್ಯಾಸ

ಲಕ್ಸುರಿ ಕಾರಿನ ಅನುಭವವನ್ನು ಎಕ್ಸ್‌ಯುವಿ 300 ತಂದುಕೊಡುತ್ತದೆ. ಐವರು ಕುಳಿತು ಕೊಳ್ಳಬಹುದಾದಷ್ಟು ವಿಶಾಲ ಜಾಗವಿದೆ. ಡ್ಯುಎಲ್‌ ಟೋನ್‌ ಡ್ಯಾಶ್‌ಬೋರ್ಡ್‌ ಇದ್ದು, 17.78 ಸೆಂಟೀಮೀಟರ್‌ ಸಿಎಂ ದೊಡ್ಡದಾದ ಟಚ್‌ಸ್ಕ್ರೀನ್‌ ಇರುವ ಇನ್ಫೋಎಂಟರ್‌ ಟೈನ್‌ಮೆಂಟ್‌ ಸಿಸ್ಟಂ ಇದೆ. ಇದರೊಂದಿಗೆ ಎಡ ಭಾಗ ಮತ್ತು ಬಲಭಾಗಕ್ಕೆ ಬೇಕಾದ ರೀತಿ ಎ.ಸಿ ಅಡ್ಜಸ್ಟ್‌ಮೆಂಟ್‌ ಸಿಸ್ಟಂ, ವಿನೂತನ ಒವಿಆರ್‌ಎಮ್‌, ಸ್ಟೀರಿಂಗ್‌ ಮೌಂಟೆಡ್‌ ಕಂಟ್ರೋಲ್‌ಗ‌ಳು, ರೈನ್‌ಸೆನ್ಸಿಂಗ್‌ ವೈಪರ್‌ಗಳು, ಯುಎಸ್‌ಬಿ ಚಾರ್ಜಿಂಗ್‌ ವ್ಯವಸ್ಥೆ, ಲೆದರ್‌ ಸೀಟುಗಳು ಇದರ ಪ್ಲಸ್‌ ಪಾಯಿಂಟ್‌. ಇದು ಮಹೀಂದ್ರಾದ ಸಹವರ್ತಿ ಸಂಸ್ಥೆ, ಕೊರಿಯಾದ ಸನ್‌ಗ್ಯೋಂಗ್‌ ನಿರ್ಮಾಣದ ಟಿವೋಲಿ ಕಾರಿನ ಮಾದರಿಯನ್ನು ಹೋಲುತ್ತದೆ.

Advertisement

ಎಂಜಿನ್‌
ಮಹೀಂದ್ರ ಹೊಸ ಎಂಜಿನ್‌ ಅನ್ನು ಇದಕ್ಕೆ ನೀಡಿದ್ದು, ಮಹೀಂದ್ರಾ ಮರಾಝೋದಲ್ಲೂ ಇದೇ ಎಂಜಿನ್‌ ಇದೆ. ಪೆಟ್ರೋಲ್‌ನಲ್ಲಿ 1197 ಸಿಸಿಯ 110 ಬಿಎಚ್‌ಪಿಯ, 3500 ಆರ್‌ಪಿಎಂನಲ್ಲಿ 200ಎನ್‌ಎಮ್‌ ಟಾರ್ಕ್‌ ನೀಡುವ ಎಂಜಿನ್‌ ಇದೆ. ಹಾಗೆಯೇ ಡೀಸೆಲ್‌ನಲ್ಲಿ 1497ಸಿಸಿಯ 115 ಬಿಎಚ್‌ಪಿಯ, 2500 ಆರ್‌ಪಿಎಂನಲ್ಲಿ 300ಎನ್‌ಎಂ ಟಾರ್ಕ್‌ ನೀಡುವ, 6 ಸ್ಪೀಡ್‌ ಗಿಯರ್‌ ಬಾಕ್ಸ್‌ ಇರುವ ಎಂಜಿನ್‌ ಇದೆ. ಮಹೀಂದ್ರಾ ವಾಹನಗಳು ಸಾಕಷ್ಟು ಟಾರ್ಕ್‌ ಹೊಂದಿರುವುದರಿಂದ, ನಗರ, ಹಳ್ಳಿಗಾಡಿನ ಪ್ರದೇಶಗಳಲ್ಲಿ ಆರಾಮದಾಯ ಸವಾರಿ ಸಾಧ್ಯವಾಗುತ್ತದೆ.

ಬೆಲೆ ಎಷ್ಟು?
ಒಟ್ಟು 8 ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ. ಡಬ್ಲ್ಯೂ 4, ಡಬ್ಲ್ಯೂ 6, ಡಬ್ಲ್ಯೂ 8 ಎಂದು ಮೂರು ಮಾದರಿಗಳಿದ್ದು, 7.90 ಲಕ್ಷ ರೂ.ಗಳಿಂದ 11.99 ಲಕ್ಷ ರೂ.ಗಳವರೆಗೆ ದರವಿದೆ. ಮಿನಿ ಎಸ್‌ಯುವಿ ಖರೀದಿದಾರರಿಗೆ ಇದೂ ಒಂದು ಉತ್ತಮ ಆಯ್ಕೆಯಾಗಿದೆ.

ತಾಂತ್ರಿಕತೆ
1197 (110 ಎಚ್‌ಪಿ) ಪೆಟ್ರೋಲ್‌ ಎಂಜಿನ್‌
1497 (115 ಎಚ್‌ಪಿ) ಡೀಸೆಲ್‌ ಎಂಜಿನ್‌ 6 ಸ್ಪೀಡ್‌ ಗಿಯರ್‌ ಬಾಕ್ಸ್‌ 4 ಡಿಸ್ಕ್, ಎಬಿಎಸ್‌, ಇಬಿಡಿ
3995 ಎಂಎಂ ಉದ್ದ 1821 ಎಂಎಂ ಅಗಲ
1627 ಎಂಎಂ ಎತ್ತರ 2600 ಎಂಎಂ ವೀಲ್‌ಬೇಸ್‌
42 ಲೀಟರ್‌ ಇಂಧನ ಟ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next