ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುವ ಚಿಕ್ಕ ವಾಣಿಜ್ಯ ವಾಹನವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಇದು ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುವ ದೇಶದ ಮೊದಲ ವಾಣಿಜ್ಯ ವಾಹನವಾಗಿದೆ. ಇದರಲ್ಲಿ ಸಾಮಾನು-ಸರಂಜಾಮುಗಳನ್ನು ಸಾಗಿಸಬಹುದಾಗಿದೆ.
“ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ’ ವಾಹನದ ಆರಂಭಿಕ ಬೆಲೆ 6.32 ಲಕ್ಷ ರೂ.(ಎಕ್ಸ್ ಶೋರೂಮ್ ಬೆಲೆ-ನವದೆಹಲಿ) ಇದೆ. ಇದು ದೊಡ್ಡ ಗಾತ್ರದ ಟ್ಯಾಂಕ್ ಹೊಂದಿದ್ದು, 75 ಲೀಟರ್ ಸಿಎನ್‌ಜಿ ತುಂಬಿಸಬಹುದಾದ ಸಾಮರ್ಥ್ಯ ಹೊಂದಿದೆ.
ಇಂಧನ ಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಿಎನ್‌ಜಿ ಮೋಡ್ ಅನ್ನು ಪರಿಚಯಿಸಲಾಗಿದೆ. ಒಂದು ವೇಳೆ ಸಿಎನ್‌ಜಿ ಖಾಲೆಯಾಗಿದ್ದು, ಪೆಟ್ರೋಲ್ ಮೋಡ್ ಆನ್ ಮಾಡಿದರೆ, ಪೆಟ್ರೋಲ್‌ನಲ್ಲೂ ವಾಹನ ಚಲಿಸಲಿದೆ ಎಂದು ಕಂಪನಿ ತಿಳಿಸಿದೆ.