Advertisement

ಅಕ್ಟೋಬರ್‌ನಲ್ಲಿ ಮಹೀಂದ್ರಾದಿಂದ 2 ಸಾವಿರ ಎಲೆಕ್ಟ್ರಿಕ್‌ ಕಾರು ಮಾರಾಟ

12:29 PM Nov 03, 2019 | Team Udayavani |

ಮುಂಬಯಿ: ದೇಶೀಯ ಕಾರುಮಾರುಕಟ್ಟೆ ಕುಸಿದಿದೆ, ಎಲೆಕ್ಟ್ರಿಕ್‌ ಕಾರುಗಳತ್ತ ಜನ ಇನ್ನಷ್ಟೇ ದೃಷ್ಟಿಹರಿಸಬೇಕಿದೆ ಎಂಬೆಲ್ಲ ಮಾತುಗಳ ನಡುವೆ ಎಲೆಕ್ಟ್ರಿಕ್‌ ಕಾರು ತಯಾರಕ ಕಂಪೆನಿ ಮಹೀಂದ್ರಾ ಎಲೆಕ್ಟ್ರಿಕ್‌ ಅಕ್ಟೋಬರ್‌ನಲ್ಲಿ ಉತ್ತಮ ಸಂಖ್ಯೆಯ ವಾಹನ ಮಾರಾಟ ಮಾಡಿದೆ.

Advertisement

2 ಸಾವಿರ ವಾಹನಗಳನ್ನು ಅದು ಮಾರಾಟ ಮಾಡಿದ್ದು, ಈ ವಿಚಾರವನ್ನು ಮಹೀಂದ್ರಾ ಆ್ಯಂಡ್‌ ಮಹೀಂದ್ರಾದ ಆಡಳಿತ ನಿರ್ದೇಶಕ ಪವನ್‌ ಗೋಯೆಂಕಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಇ ವೆರಿಟೋ, ಇ ಆಲ್ಫಾ, ತ್ರಿಚಕ್ರ ವಾಹನ ಟ್ರಿಯೋಗಳು ಉತ್ತಮ ಮಾರಾಟ ಕಂಡಿದ್ದು ಒಟ್ಟು ಸುಮಾರು 2 ಸಾವಿರ ವಾಹನಗಳು ಮಾರಾಟವಾಗಿವೆ ಎಂದವರು ಹೇಳಿದ್ದಾರೆ. ಇದು ಒಂದು ತಿಂಗಳಲ್ಲಿ ಮಾರಾಟವಾದ ಗರಿಷ್ಠ ಸಂಖ್ಯೆಯ ಎಲೆಕ್ಟ್ರಿಕ್‌ ವಾಹನಗಳಾಗಿವೆ.

ಇ ವೆರಿಟೋ ಎನ್ನುವುದು ಮಹೀಂದ್ರಾ ವೆರಿಟೋ ಕಾರಿನ ಎಲೆಕ್ಟ್ರಿಕ್‌ ಆವೃತ್ತಿಯಾಗಿದೆ. ಇ ಟ್ರಿಯೋ ಎನ್ನವುದು ಆಟೋರಿRಷವಾಗಿದೆ. ಇ ಆಲ್ಫಾವೂ ಇದರ ಇನ್ನೊಂದು ಮಾದರಿಯಾಗಿದೆ. ಇ ವೆರಿಟೋ ಕಾರು ಸಿಂಗಲ್‌ ಚಾರ್ಜ್‌ಗೆ 181 ಕಿ.ಮೀ. ಕ್ರಮಿಸುತ್ತದೆ. ಶೇ.80ರಷ್ಟು ಚಾರ್ಜ್‌ ಆಗಲು 1.30 ನಿಮಿಷ ತೆಗೆದುಕೊಳ್ಳುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯಿದ್ದು, ಶೀಘ್ರ ಮಹೀಂದ್ರಾ ತನ್ನ ಎಕ್ಸ್‌ಯುವಿ 300 ಆವೃತ್ತಿಯ ಎಲೆಕ್ಟ್ರಿಕ್‌ ಮಾದರಿ, ಕೆಯುವಿ 100ನ ಎಲೆಕ್ಟ್ರಿಕ್‌ ಮಾದರಿಯನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next