Advertisement

ರಾಜಪಕ್ಸೆ ಹೊಸ ಪಕ್ಷ 

08:05 AM Nov 12, 2018 | Karthik A |

ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಸ್ಥಿತ್ಯಂತರದ ಮಧ್ಯೆಯೇ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನೇತೃತ್ವದ ಶ್ರೀಲಂಕಾ ಫ್ರೀಡಂ ಪಾರ್ಟಿಯನ್ನು (ಎಸ್‌ಎಲ್‌ಎಫ್ಪಿ) ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ತೊರೆದಿದ್ದಾರೆ. ಅವರು ಈಗ ಶ್ರೀಲಂಕಾ ಪೀಪಲ್ಸ್‌ ಪಾರ್ಟಿಗೆ (ಎಸ್‌ಎಲ್‌ಪಿಪಿ). ಈ ಮೂಲಕ ತಮ್ಮ ತಂದೆಯವರೇ ಸ್ಥಾಪಿಸಿದ್ದ ಎಸ್‌ಎಲ್‌ಎಫ್ಪಿಯಿಂದ 50 ವರ್ಷಗಳ ನಂತರ ಅವರು ಹೊರಬಿದ್ದಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ರಾಜಪಕ್ಸೆ ಅಭಿಮಾನಿಗಳು ಹೊಸ ಪಕ್ಷವನ್ನು ರಚಿಸಿದ್ದರು. ಜನವರಿ 5ರಂದು ನಡೆಯಲಿರುವ ಚುನಾವಣೆಗೆ ಹೊಸ ಪಕ್ಷದಿಂದಲೇ ರಾಜಪಕ್ಸೆ ಸ್ಪರ್ಧಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next